WhatsApp New Update : ಅಚ್ಚರಿಯ ವೈಶಿಷ್ಟ್ಯ ನಿಮ್ಮ ಮುಂದೆ, “ಡೋಂಟ್ ಡಿಸ್ಟರ್ಬ್ ” ಮಿಸ್ಡ್ ಕಾಲ್ ಅಲರ್ಟ್”
ಜನರ ಜೀವನದ ಅವಿಭಾಜ್ಯ ಭಾಗವಾಗಿರುವ ಮೊಬೈಲ್ ಸರ್ವಂತರ್ಯಾಮಿ ಸಾಧನವಾಗಿ ವ್ಯಾಪಕವಾಗಿ ಬಳಕೆಯಾಗುತ್ತಿರುವುದು ತಿಳಿದಿರುವ ಸಂಗತಿ. ಅದರಲ್ಲೂ ವಾಟ್ಸಾಪ್ ಬಳಕೆದಾರರಿಗೆ ನೆರವಾಗಲು ಹೊಸ ಹೊಸ ವೈಶಿಷ್ಟ್ಯದ ಮೂಲಕ ಜನಮನದಲ್ಲಿ ತನ್ನದೇ ಟ್ರೇಡ್ ಮಾರ್ಕ್ ರೂಪಿಸಿಕೊಂಡಿದೆ.ಇತ್ತೀಚಿನ ವರದಿಯ ಪ್ರಕಾರ, ವಾಟ್ಸಾಪ್ ಶೀಘ್ರದಲ್ಲೇ ಹೊಸ ‘ಡು ನಾಟ್ ಡಿಸ್ಟರ್ಬ್’ ಮಿಸ್ಡ್ ಕಾಲ್ ಅಲರ್ಟ್ ವೈಶಿಷ್ಟ್ಯವನ್ನು ತರಲಿದೆ. ವಾಟ್ಸಾಪ್ ವಿಶ್ವದಾದ್ಯಂತ ಲಕ್ಷಾಂತರ ಬಳಕೆದಾರರನ್ನು ಹೊಂದಿದ್ದು, ಬಳಕೆದಾರರನ್ನು ಸೆಳೆಯಲು ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿರುವ ವಾಟ್ಸಪ್ ಆಗಾಗ್ಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇದು ಇತ್ತೀಚೆಗೆ ಕಣ್ಮರೆಯಾಗುವ ಸಂದೇಶಗಳಂತಹ ಗೌಪ್ಯತೆ ವೈಶಿಷ್ಟ್ಯಗಳ ಜೊತೆಗೆ ನವೀಕರಿಸಿದ ಲಾಸ್ಟ್ ಸೀನ್ ಜೊತೆಗೆ ಮಲ್ಟಿ ಡಿವೈಸ್ ಸಪೋರ್ಟ್, ಮೆಸೇಜ್ ರಿಯಾಕ್ಷನ್ಗಳು, ವಾಯ್ಸ್ ಕಾಲಿಂಗ್ ಅಪ್ ಡೇಟ್ ನಂತಹ ಹಲವು ವೈಶಿಷ್ಟ್ಯಗಳನ್ನು ತಂದಿದೆ. ಇದೀಗ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹೊಸ ‘ಡು ನಾಟ್ ಡಿಸ್ಟರ್ಬ್’ ಎಪಿಐ (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್) ಅನ್ನು ತರಲಿದ್ದು, ಈ ವೈಶಿಷ್ಟ್ಯವನ್ನು ಆನ್ ಮಾಡಿದ ನಂತರ, ಬಳಕೆದಾರರು ವಾಟ್ಸಾಪ್ನಲ್ಲಿ ಕರೆ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಇತ್ತೀಚಿನ ವರದಿಯ ಆಧಾರದಲ್ಲಿ ವಾಟ್ಸಾಪ್ ಕರೆ ಅಥವಾ ಮಿಸ್ಡ್ ಕಾಲ್ನ ಮಾಹಿತಿ ವಾಟ್ಸಾಪ್ ಚಾಟ್ನಲ್ಲಿ ಲಭ್ಯವಿದ್ದು, ಈ ಹೊಸ ನವೀಕರಣದ ನಂತರ, ‘ಡು ನಾಟ್ ಡಿಸ್ಟರ್ಬ್’ ಎಂಬ ಎಚ್ಚರಿಕೆಯ ನಂತರ ‘ಡು ನಾಟ್ ಡಿಸ್ಟರ್ಬ್’ ಮೋಡ್ ಅನ್ನು ಆನ್ ಮಾಡಿದ ಬಳಿಕ ಈ ಮಿಸ್ಡ್ ಕಾಲ್ ಅನ್ನು ಒಳಗೊಂಡಿದೆ ಎಂಬುದನ್ನು ವಾಟ್ಸಾಪ್ ತಿಳಿಸುತ್ತದೆ.ಬಳಕೆದಾರರು ವಾಟ್ಸಾಪ್ ಒಳಬರುವ ಕರೆಗಳನ್ನು ಏಕೆ ಮಿಸ್ ಮಾಡಿಕೊಂಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ಇದು ಸುಲಭವಾಗುತ್ತದೆ. ಸಾಮಾನ್ಯವಾಗಿ, ಬಳಕೆದಾರರು ತಮ್ಮ ಫೋನ್‌ನಲ್ಲಿ ಡೋಂಟ್ ಡಿಸ್ಟರ್ಬ್ ಮೋಡ್ ಅನ್ನು ಸಕ್ರಿಯಗೊಳಿಸಿದರೆ, ಸಾಮಾನ್ಯ ಒಳಬರುವ ಕರೆಗಳೊಂದಿಗೆ ವಾಟ್ಸಪ್ ಕರೆಗಳನ್ನು ನಿರ್ಬಂಧಿಸಲಾಗುವುದಲ್ಲದೆ, ಇದರ ಸಂದೇಶ ಕೂಡ ಲಭಿಸುವುದಿಲ್ಲ.’ಡು ನಾಟ್ ಡಿಸ್ಟರ್ಬ್’ ಮೋಡ್ ಆಫ್ ಆಗುವವರೆಗೆ ವಾಟ್ಸಾಪ್‌ನಿಂದ ಯಾವುದೇ ಕರೆಗಳು ಅಥವಾ ಸಂದೇಶಗಳು ಬರುವುದಿಲ್ಲ. ಆದಾಗ್ಯೂ, ಅದನ್ನು ಆಫ್ ಮಾಡಿದ ನಂತರ, ಹೊಸ API ವೈಶಿಷ್ಟ್ಯದೊಂದಿಗೆ ವಾಟ್ಸಪ್ ನಲ್ಲಿ ಯಾವುದೇ ಕರೆಗಳಿವೆಯೇ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಹೊಸ ಫೀಚರ್ ಇನ್ನೂ ಕಾರ್ಯಹಂತದಲ್ಲಿದ್ದು, ಶೀಘ್ರದಲ್ಲೇ ಬದಲಾವಣೆಗಳಾಗಿ ಜನರ ಬಳಕೆಗೆ ಅನುವಾಗಲಿದೆ.