ದ್ವಿತೀಯ ಪಿಯು ಮೌಲ್ಯಮಾಪನ : ಮರುಮೌಲ್ಯಮಾಪನ ಅರ್ಜಿ ಸಂಖ್ಯೆ ಏರಿಕೆ

ಮಂಗಳೂರು: ಅನೇಕ ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ತೃಪ್ತಿ ಹೊಂದಿಲ್ಲದ ಕಾರಣ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತಾರೆ. ಆದರೆ ಗಂಭೀರವಾದ ವಿಷಯವೇನೆಂದರೆ, ಈ ಮರುಮೌಲ್ಯಮಾಪನದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿರುವುದು ಗಮನಿಸಬೇಕಾದ ವಿಷಯ ಎಂದೇ ಹೇಳಬಹುದು.

ಈ ಬಾರಿ ಪ್ರಕಟಿತ ಅಂಕಗಳಿಗಿಂತ ಮರುಮೌಲ್ಯಮಾಪನದ ಬಳಿಕ ಅಂಕಗಳು ವ್ಯತ್ಯಾಸವಾದ ಸಂಖ್ಯೆಯಲ್ಲಿ ಅರ್ಜಿ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಮರು ಮೌಲ್ಯಮಾಪನವಾದ ನಂತರ ಬರೋಬ್ಬರಿ 2,047 ವಿದ್ಯಾರ್ಥಿ ಗಳಿಗೆ ಹೆಚ್ಚುವರಿ ಅಂಕ ದೊರೆತಿದ್ದರೆ, 2020 ರಲ್ಲಿ 2,318 ಮಂದಿಗೆ ದೊರಕಿತ್ತು. ಮೌಲ್ಯಮಾಪಕರ ಎಡವಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳ ಕೋರ್ಸ್ ಆಯ್ಕೆಗೆ ಹಿನ್ನಡೆಯಾಗಿತ್ತು.

ಈ ವರ್ಷ ಮರುಮೌಲ್ಯಮಾಪನಕ್ಕೆ ಹಾಕಿದವರ ಪೈಕಿ ವಿಜ್ಞಾನ ವಿಷಯದಲ್ಲಿ 4 ಅಂಕಗಳಿಗಿಂತ ಅಧಿಕ ಅಂಕವನ್ನು 558 (2020ರಲ್ಲಿ 472 ಮಂದಿ) ಮಂದಿ ಪಡೆದಿದ್ದರೆ, 4ಕ್ಕಿಂತ ಕಡಿಮೆ ಅಂಕ 291 (2020ರಲ್ಲಿ 182)ವಿದ್ಯಾರ್ಥಿಗಳ ಪಾಲಾಗಿದೆ. ಕಲಾ ಮತ್ತು ವಾಣಿಜ್ಯದಲ್ಲಿ 6ಕ್ಕಿಂತ ಅಧಿಕ ಅಂಕ 1,079 (2020ರಲ್ಲಿ 1540) ಮಂದಿಗೆ ದೊರೆತಿದೆ. 6ಕ್ಕಿಂತ ಕಡಿಮೆ 119 (2020ರಲ್ಲಿ 124) ಮಂದಿಯ ಪಾಲಾಗಿದೆ.

ಮೌಲ್ಯಮಾಪನಕ್ಕೆ ಸಲ್ಲಿಕೆಯಾದ ಮನವಿ
2020 ವಾರ್ಷಿಕ ಪರೀಕ್ಷೆ 12118
2020 ಪೂರಕ ಪರೀಕ್ಷೆ 2519
2021: ಕೊರೊನಾ ಕಾರಣ ಪರೀಕ್ಷೆ ನಡೆದಿಲ್ಲ
2021: ಪೂರಕ ಪರೀಕ್ಷೆ 960
2022 ವಾರ್ಷಿಕ ಪರೀಕ್ಷೆ: 13848

ಹಾಗಾಗಿ ಈ ಮೌಲ್ಯಮಾಪನದಲ್ಲಿ ವ್ಯತ್ಯಾಸ ಉಂಟು ಮಾಡಿದ ಮೌಲ್ಯಮಾಪಕರನ್ನು ಈ ಕೆಲಸದಿಂದ ತೆಗೆಯುವ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆಯನ್ನು ನಡೆಸಿತ್ತು. ಆದರೆ ಅದು ಪ್ರಸಕ್ತ ಸಂದರ್ಭದಲ್ಲಿ ಬೇಡ ಎಂಬ ಕಾರಣದಿಂದ ಅನುಷ್ಠಾನಗೊಂಡಿಲ್ಲ.

ಅಷ್ಟು ಮಾತ್ರವಲ್ಲದೇ, ಈ ಮರುಮೌಲ್ಯಮಾಪನ ವೇಳೆ ವಿದ್ಯಾರ್ಥಿಗೆ 6 ಅಂಕಗಳಿಗಿಂತ ಅಧಿಕ ಅಂಕ ಸಿಕ್ಕರೆ ಮಾತ್ರ ಅದನ್ನು ಸೇರ್ಪಡೆ ಮಾಡಲು ಅವಕಾಶವಿದೆ. ಹಾಗಾಗಿ ಅರ್ಧ ಅಂಕ ದೊರೆತರೂ ಆ ಅಂಕವನ್ನು ಸೇರ್ಪಡೆ ಮಾಡಬೇಕು ಎಂಬ ಅಹವಾಲು ಮಾತ್ರ ಜಾರಿಗೆ ಬಂದಿಲ್ಲ.

ಮೌಲ್ಯಮಾಪನದಲ್ಲಿ ತೊಂದರೆ ಆದರೆ ಅದು ವಿದ್ಯಾರ್ಥಿಗಳಿಗೆ ಆಗುವ ದೊಡ್ಡ ನಷ್ಟ ಎಂದೇ ಹೇಳಬಹುದು. ಅಂತಹ ಮೌಲ್ಯಮಾಪಕರಿಗೆ ವಿಧಿಸುವ ದಂಡದ ಮೊತ್ತವನ್ನು ಏರಿಸಲು ನಿರ್ಧಾರ ಮಾಡಲಾಗಿದೆ. ಈ ಬಾರಿ ಮರುಮೌಲ್ಯಮಾಪನಕ್ಕೆ ಹಾಕಿದ ಎಲ್ಲ ಪತ್ರಿಕೆಗಳನ್ನು ಗುರುತು ಮಾಡಿಕೊಂಡು ಮೌಲ್ಯಮಾಪನ ಮಾಡಿದವರ ಪಟ್ಟಿಯನ್ನು ತಯಾರಿಸಲು ನಿರ್ಧರಿಸಲಾಗಿದೆ ಎಂದು ಸಚಿವ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ.

Leave A Reply

Your email address will not be published.