ಆಕೆ ಸ್ಫುರದ್ರೂಪಿ ವಿಧವೆ | ಆಕೆಯ ಮೇಲೆ ಬಿತ್ತು ಗಂಡನ ಸ್ನೇಹಿತರ ಕಣ್ಣು | ತ್ರಿಕೋನ ಪ್ರೇಮಕಥೆಯಲ್ಲಿ ನಡೆದೋಯ್ತು ಒಂದು ದುರಂತ!!!

ಆಕೆ ಸ್ಪರದ್ರೂಪಿ ವಿಧವೆ. ಹೆಸರು ಸುಮಾ ಅಂತ. ಆದರೆ ಆಕೆಯ ಬಾಳಲ್ಲಿ ಮಾತ್ರ ಈಗ ಬಿರುಗಾಳಿ ಎದ್ದಿದೆ. ಏಕೆಂದರೆ ವಿಧವೆಗೆ ಸಹಾಯ ಮಾಡುವ ನೆಪದಲ್ಲಿ ಮನೆಗೆ ಬರ್ತಿದ್ದ ಗಂಡನ ಸ್ನೇಹಿತ, ನಂತರ ಆಕೆಯ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದ. ಅಷ್ಟು ಮಾತ್ರವಲ್ಲ, ಆಕೆಯ ಮನೆಯಲ್ಲಿಯೇ ತನ್ನ ಠಿಕಾಣಿ ಹಾಕಿದ್ದ. ಆದರೆ, ಆಕೆಯ ಗಂಡನ ಇನ್ನೋರ್ವ ಸ್ನೇಹಿತ ಹಾಗೂ ನಗರಸಭಾ ಸದಸ್ಯ ಅದಕ್ಕೆ ಅಡ್ಡಿ ಅಂತ ಹೇಳಿ, ವೀಡಿಯೊದಲ್ಲಿ ಡೆತ್ ಸ್ಟೇಟ್ ಮೆಂಟ್ ಮಾಡಿ ನೇಣಿಗೆ ಶರಣಾಗಿದ್ದಾನೆ. ಅಷ್ಟಕ್ಕೂ ನಡೆದ ಘಟನೆ ಏನು? ಇಲ್ಲಿದೆ ಕಂಪ್ಲೀಟ್ ವಿವರ.

ಚಿಕ್ಕಬಳ್ಳಾಪುರ ನಗರದ 15ನೆ ವಾರ್ಡ ನಿವಾಸಿ ಸುಮಾ. ಆಕೆಯ ಗಂಡ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಗಂಡ ರಮೇಶ ಬಾಬು, ಕಳೆದ ವರ್ಷ ಕೊರೊನಾ ಸೋಂಕಿಗೆ ನಿಧನ ಹೊಂದಿದ್ದ. ಗಂಡನ ಅಗಲಿಕೆಯ ದುಃಖ ಮಾಸುವ ಮುನ್ನವೇ ಈಗ ಸುಮಾ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೂ ಗಂಡನ ಸ್ನೇಹಿತರಿಂದಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾ ಗಂಡ ರಮೇಶ ಮೃತಪಟ್ಟ ಮೇಲೆ ಸಹಾಯ ಮಾಡುವ ರೀತಿಯಲ್ಲಿ ಮನೆಗೆ ಬಂದು ಹೊಗ್ತಿದ್ದ ಎಸ್.ಎನ್. ಪ್ರಶಾಂತ್ ಎನ್ನುವವ ಸುಮಾಳನ್ನು ಲವ್, ಮದುವೆ ಎಂದು ಹೇಳಿ ಪ್ರೇಮದ ಕನಸು ಕಾಣಿಸಿ ಸುಮಾಳನ್ನು ತನ್ನತ್ತ ಸೆಳೆದಿದ್ದ.

ಹಾಗಾಗಿ ತನ್ನದೇ ಸ್ವಂತ ಮನೆಯ ಕೆಳಗೆ ಬಾಡಿಗೆ ಮನೆ ಕೂಡಾ ನೀಡಿದ್ದಳು. ಆದರೆ ನಿನ್ನೆ ತಡರಾತ್ರಿ ಪ್ರಶಾಂತ್ ನೇಣಿಗೆ ಶರಣಾಗಿದ್ದು ಸಾಯುವುದಕ್ಕೂ ಮುನ್ನ ಸ್ಥಳಿಯ ನಗರಸಭೆ ಸದಸ್ಯ ಹಾಗೂ ಸುಮಾಳ ಗಂಡನ ಸ್ನೇಹಿತ ಅಂಬರೀಶ ತನ್ನ ಸಾವಿಗೆ ಕಾರಣ ಅಂತ ವೀಡಿಯೋ ಹೇಳಿಕೆ ದಾಖಲು ಮಾಡಿ ನಿಧನ ಹೊಂದಿದ್ದಾನೆ. ಇತ್ತ ಮೃತನ ಸಂಬಂಧಿಗಳು ನಗರಸಭೆ ಸದಸ್ಯ ಅಂಬರೀಶ ಹಾಗೂ ಸುಮಾಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.’

ಅಂಬರೀಶ, ಸುಮಾ ಗಂಡನ ಬಡ್ಡಿ ವ್ಯವಹಾರ ನೋಡಿಕೊಂಡರೆ, ಇತ್ತೀಚೆಗೆ ಸುಮಾಳನ್ನು ಪ್ರೀತಿ ಪ್ರೇಮದ ಬಲೆಯಲ್ಲಿ ಬಂಧಿ ಮಾಡಿದ ಪ್ರಶಾಂತ್ ಮದುವೆ ಮಾಡಿಕೊಳ್ಳೊದಾಗಿ ಹೇಳಿದ್ದ. ತಮ್ಮಿಬ್ಬರ ಪ್ರೀತಿಗೆ ಅಂಬರೀಶ ಅಡ್ಡಿ, ಸುಮಾ ತನ್ನ ಬದಲು ಅಂಬರೀಶ
ಜೊತೆ ಸಲುಗೆಯಿಂದ ಇದ್ದಾಳೆ. ತನ್ನನ್ನು ಪ್ರೀತಿಸಿ ಬೇರೆಯವರ ಜೊತೆಗೂ ಪ್ರೀತಿ ಇಟ್ಟುಕೊಂಡಿದ್ದೀ ಎಂದು ಸುಮಾಳ ಜೊತೆ ಜಗಳ ತೆಗೆದು, ಗಲಾಟೆ ಮಾಡಿ, ಕಿರುಕುಳ ನೀಡ್ತಿದ್ದನಂತೆ. ಸದಾ ಪೋನ್ ನಲ್ಲಿ ಮಾತನಾಡುತ್ತಾ, ಮೇಲೆ ಬಾ ಕೆಳಗೆ ಬಾ ಅಂತ ಹೇಳುತ್ತಿದ್ದನಂತೆ. ಈತನ ಈ ಕಿರುಕುಳದಿಂದ ಸುಮಾ ಬೇಸತ್ತು ಕಳೆದ ಮೂರು ದಿನಗಳಿಂದ ಮನೆ ತೊರೆದು ತಾಯಿಯ ಮನೆ ಸೇರಿಕೊಂಡಿದ್ದಳು.

ಗಂಡನನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದ ಸುಮಾ ಈಗ ಈ ತೊಂದರೆಗೆ ಸಿಲುಕಿದ್ದು. ಪೊಲೀಸರ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.