ಆರೋಗ್ಯ ಸೇತು ಆ್ಯಪ್ ನಿಂದ ಇನ್ಮುಂದೆ ಈ ಸೌಲಭ್ಯ ಲಭ್ಯ!!!
ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೋರೋನ ಮಹಾಮಾರಿಯ ಸಂದರ್ಭದಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕ ಜನರ ಆರೋಗ್ಯ ಸೇವೆ, ಕುಂದು ಕೊರತೆಗಳ ಮೇಲ್ವಿಚಾರಣೆ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಈ ಸೌಲಭ್ಯದಿಂದ ಅನೇಕ ಮಾಹಿತಿ ಕಲೆ ಹಾಕಲು ಸಾಧ್ಯವಾಗಿದೆ. ಇದಲ್ಲದೆ, ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ದೇಶದ ಕೋಟ್ಯಂತರ ಜನರಿಗೆ ನೆರವಾಗಿದೆ.
ಕಳೆದ 3ವರ್ಷಗಳಲ್ಲಿ ಜನ ಭಯದಿಂದಲೇ ಓಡಾಡುವ ವಾತಾವರಣ ಸೃಷ್ಟಿಸಿದ ಕೋರೋನಾ, ರೋಗಿಗಳ ಆರೋಗ್ಯದ ಕಾಳಜಿ, ಸೇವೆಗಳ ಬಗ್ಗೆ ಮಾಹಿತಿ, ರೋಗಿಯನ್ನು 14 ದಿನ ಬೇರೆ ಜನರೊಂದಿಗೆ ಬೆರೆಯದಂತೆ ಮಾಹಿತಿ ಕಲೆ ಹಾಕಿ ಜೊತೆಗೆ ಕೋವಿಡ್ ಲಸಿಕೆ ಪೂರೈಕೆ ಮಾಡುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಜಾರಿಗೆ ತಂದು ರೋಗ ನಿಯಂತ್ರಣ ಮಾಡಲು ಹರಸಾಹಸ ಪಟ್ಟದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಕೋವಿಡ್ ಪರಿಹಾರ ಸೌಲಭ್ಯಗಳ ಜೊತೆಗೆ, ಜನರು ಈಗ ಆರೋಗ್ಯ ಸೇತು ಆ್ಯಪ್ ಅಡಿಯಲ್ಲಿ ಹೊಸ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗಿದ್ದು, ಇದೀಗ ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕ ಆಯುಷ್ಮಾನ್ ಐಡಿ ಕಾರ್ಡ್ ರಚಿಸಬಹುದು ಅಲ್ಲದೆ, ಆರೋಗ್ಯ ಸೇತು ಆ್ಯಪ್ ಮೂಲಕ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ತೆರೆಯುವ ಸೌಲಭ್ಯವನ್ನು ಸರ್ಕಾರ ವಿಸ್ತರಿಸಿದೆ. ಈ ಹೊಸ ಸೌಲಭ್ಯ ಪ್ರಯೋಜನವೆಂದರೆ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಈ ಆಪ್‌ನಲ್ಲಿ ಸುರಕ್ಷಿತವಾಗಿಡಬಹುದು. ಆರೋಗ್ಯ ತಪಾಸಣೆ ಅಥವಾ ಚಿಕಿತ್ಸೆ ಸಂದರ್ಭದಲ್ಲಿ ಈ ದಾಖಲೆಯು ನೆರವಾಗುತ್ತದೆ. ಆರೋಗ್ಯ ಸೇತು ಅಪ್ಲಿಕೇಶನ್ 24 ಕೋಟಿಗೂ ಹೆಚ್ಚು ಜನ ಬಳಸುತ್ತಿದ್ದಾರೆ. ಈ ಅಪ್ಲಿಕೇಶನ್ ಅನ್ನು ಇನ್ನಿತರ ಆರೋಗ್ಯ ಸಂಬಂಧಿತ ಸೇವೆಗಳಲ್ಲಿ ಬಳಸುವ ಯೋಜನೆಯು ಜಾರಿಯಲ್ಲಿದೆ.
ಆಸ್ಪತ್ರೆಯಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸುವುದಲ್ಲದೇ, ಆಪ್‌ನಿಂದ ಸ್ಕ್ಯಾನ್ ಮಾಡುವ ಮೂಲಕ ನೇರವಾಗಿ OPD ಕಾರ್ಡ್ ಪಡೆಯಬಹುದಾಗಿದ್ದು, ಸಂಪರ್ಕ ಪತ್ತೆಹಚ್ಚುವಿಕೆಗಾಗಿ ಬಳಸಿರುವ ಆರೋಗ್ಯ ಸೇತು ಅಪ್ಲಿಕೇಶನ್‌ನ ಸಹಾಯದಿಂದ, ದಿನಕ್ಕೆ ಏಷ್ಟು ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂಬ ಮಾಹಿತಿ ತಿಳಿಯುತ್ತದೆ. ಆರೋಗ್ಯ ಮತ್ತು ಕ್ಷೇಮಕ್ಕಾಗಿ ಆ್ಯಪ್ ಆಗಿ ಬಿಡುಗಡೆ ಮಾಡಲಾಗಿದ್ದು, ಕೋರೋನಾ ಸಮಯದಲ್ಲಿ ರೋಗಿಗಳಿಗೆ ಲಸಿಕೆ ಮತ್ತು ಪ್ರತಿರಕ್ಷಣೆಗಾಗಿ CoWIN ಅನ್ನು ಬಳಸಲಾಗುತ್ತಿದ್ದು, ಇದೀಗ ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂನಲ್ಲಿ ಬಳಸಲಾಗುವುದು.ಕೊರೊನಾ ವೈರಸ್ ಲಸಿಕೆಗಾಗಿ ಕೆಲಸ ಮಾಡುತ್ತಿದ್ದ ಕೋವಿನ್, ಅನ್ನು ಇತರ ಲಸಿಕೆ ಕಾರ್ಯಕ್ರಮಗಳೊಂದಿಗೆ ಲಿಂಕ್ ಮಾಡಲಾಗುತ್ತಿದ್ದು, ಇದೀಗ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದರೆ , 12 ಇತರ ವ್ಯಾಕ್ಸಿನೇಷನ್ ಪ್ರೋಗ್ರಾಂಗಳಿಗೆ ಸಂಪರ್ಕಿಸಲಾಗುತ್ತದೆ. ಇದರಿಂದ ಅಪ್ಲಿಕೇಶನ್‌ನಲ್ಲಿಯೇ ಅಗತ್ಯವಾದ ಲಸಿಕೆ ಮಾಹಿತಿಯನ್ನು ಪಡೆಯಬಹುದಾಗಿದೆ.