ಬಟ್ಟೆ ಕೊಳೆಯಾಗಿದೆ ಎಂದು ಎಲ್ಲಾ ಮಕ್ಕಳ ಎದುರು ಬಾಲಕಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕ | 2 ಗಂಟೆಗಳ ಕಾಲ ವಸ್ತ್ರವಿಲ್ಲದೇ ನಿಂತ ಬಾಲೆ | ಶಿಕ್ಷಕ ಸಸ್ಪೆಂಡ್

10 ವರ್ಷದ ಬಾಲೆಯ ಬಟ್ಟೆ ಕೊಳೆಯಾಗಿದೆ ಎಂದು ಕ್ಲಾಸ್ ನಲ್ಲಿಯೇ ಬಾಲಕಿಯ ಬಟ್ಟೆ ಬಿಚ್ಚಿಸಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಕೊಳೆಯಾಗಿದೆ ಎಂದು ಕ್ಲಾಸ್‌ರೂಮ್‌ನಲ್ಲಿ ಮಕ್ಕಳ ಎದುರೇ 10 ವರ್ಷದ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

ಈಗ ಈ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.

ಶಾಹದೋಲ್ ಜಿಲ್ಲೆಯಲ್ಲಿ ನಡೆದ ಘಟನೆಯ
ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಳ ಉಡುಪು ಮಾತ್ರ ಧರಿಸಿದ 5ನೇ ತರಗತಿ ವಿದ್ಯಾರ್ಥಿಯೋರ್ವಳು ಕಾಣಿಸಿಕೊಂಡಿದ್ದು, ಶಿಕ್ಷಕ ಶ್ರವಣ್ ಕುಮಾರ್ ತ್ರಿಪಾಠಿ ಆಕೆಯ ಬಟ್ಟೆಗಳನ್ನು ತೊಳೆಯುತ್ತಿರುವುದು ಮತ್ತು ಇತರ ಹುಡುಗಿಯರು ಹತ್ತಿರದಲ್ಲಿ ನಿಂತಿರುವ ದೃಶ್ಯವಿದೆ.

ಸುಮಾರು ಎರಡು ಗಂಟೆಗಳ ಕಾಲ ಬಟ್ಟೆ ಒಣಗುವವರೆಗೆ ವಿದ್ಯಾರ್ಥಿನಿ ವಸ್ತ್ರವಿಲ್ಲದ ಸ್ಥಿತಿಯಲ್ಲೇ ನಿಂತಿದ್ದಾಳೆ. ಈ ಬಗ್ಗೆ ಕೆಲವು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಬುಡಕಟ್ಟು ವ್ಯವಹಾರಗಳ ಇಲಾಖೆಯಿಂದ ನಡೆಸಲ್ಪಡುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ತ್ರಿಪಾಠಿ, ಇಲಾಖೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಘಟನೆಯ ಚಿತ್ರಗಳನ್ನು ಹಂಚಿಕೊಂಡಿದ್ದರು. ತಾವು ‘ಸ್ವಚ್ಛತಾ ಮಿತ್ರ’ ಎಂದು ಬರೆದುಕೊಂಡಿದ್ದರು. ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದ ಬುಡಕಟ್ಟು ಕಲ್ಯಾಣ ಇಲಾಖೆಯ
ಸಹಾಯಕ ಆಯುಕ್ತ ಆನಂದ್ ರೈ ಸಿನ್ಹಾ ಅವರು
ವಿಷಯ ತಿಳಿಯುತ್ತಿದ್ದಂತೆ ಶಿಕ್ಷಕನನ್ನು
ಅಮಾನತುಗೊಳಿಸಿದ್ದಾರೆ. ಅಲ್ಲದೇ ಘಟನೆ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

Leave A Reply

Your email address will not be published.