10 ನೇ ತರಗತಿ ವಿದ್ಯಾರ್ಥಿ ಶಿಕ್ಷಕನ ಮೇಲೆಯೇ ಗುಂಡು ಹಾರಿಸಿದ ಕೃತ್ಯ | ಅಷ್ಟಕ್ಕೂ ಶಿಕ್ಷಕನ ಮೇಲೆ ಇಷ್ಟೊಂದು ಹಗೆ ಯಾತಕ್ಕಾಗಿ?

ಲಕ್ನೋ : ಆಘಾತಕಾರಿ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೋರ್ವ ತನ್ನ ಶಾಲೆಯ ಶಿಕ್ಷಕನ ಮೇಲೆಯೇ ಮೂರು ಬಾರಿ ಗುಂಡು ಹಾರಿಸಿದ ಘಟನೆಯೊಂದು ಉತ್ತರ ಪ್ರದೇಶದ ಸೀತಾರಾಪುರದಲ್ಲಿ ಶನಿವಾರ ನಡೆದಿದೆ.

 

ಯಾವುದೋ ಕಾರಣಕ್ಕಾಗಿ ಇತರ ಸಹಪಾಠಿಗಳೊಂದಿಗೆ ಈ ವಿದ್ಯಾರ್ಥಿ ತರಗತಿಯಲ್ಲಿ ಜಗಳವಾಡಿದ್ದ. ಇದನ್ನು ಶಿಕ್ಷಕ ತಡೆದಿದ್ದಾರೆ. ಹಾಗೂ ಬುದ್ಧಿವಾದ ಹೇಳಿದ್ದಾರೆ. ಆದರೂ ವಿದ್ಯಾರ್ಥಿ ಯಾವುದೇ ಬುದ್ಧಿವಾದ ಕೇಳದೇ, ಶಿಕ್ಷಕರ ವಿರುದ್ಧ ವಾದ ಮಾಡಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಶಿಕ್ಷಕ ವಿದ್ಯಾರ್ಥಿಗೆ ಹೊಡೆದಿದ್ದಾರೆ.

ಕುಪಿತಗೊಂಡ ವಿದ್ಯಾರ್ಥಿ ತರಗತಿಯಿಂದ ಹೊರನಡೆದು ಹೋಗಿದ್ದಾನೆ. ವಾಪಾಸು ಶನಿವಾರ ಪಿಸ್ತೂಲ್ ಹಿಡಿದುಕೊಂಡು ತರಗತಿಗೆ ವಿದ್ಯಾರ್ಥಿ ಬಂದಿದ್ದು, ಬುದ್ಧಿವಾದ ಹೇಳಿದ ಶಿಕ್ಷಕ ಶಾಲೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಕಟ್ಟಡವನ್ನು ವೀಕ್ಷಣೆ ಮಾಡಲು ಹೋಗಿದ್ದಾರೆ. ಇದನ್ನು ಕಂಡ ವಿದ್ಯಾರ್ಥಿ ಅಲ್ಲಿಗೆ ತೆರಳಿ ಶಿಕ್ಷಕನ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ಶಿಕ್ಷಕ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಲಕನ ಪತ್ತೆಗೆ ಬಲೆ ಬಿಸಿದ್ದಾರೆ.

Leave A Reply

Your email address will not be published.