ಗನ್ ತೋರಿಸಿದ ಯುವಕನನ್ನು ಫಾಲೋ ಮಾಡಿದ ಪೊಲೀಸರು | ಆದ್ರೆ, ಆತ ವಶ ಆದಾಗ ಬಿದ್ದು ಬಿದ್ದು ನಕ್ಕ ಸಿಬ್ಬಂದಿಗಳು!

ಸಾಮಾನ್ಯವಾಗಿ ಕಳ್ಳನನ್ನು ಪತ್ತೆ ಹಚ್ಚಿದ ಬಳಿಕ ಪೊಲೀಸರಿಗೆ ಪ್ರಾಬ್ಲಮ್ ಕಡಿಮೆ ಆಗೋದು ಕಾಮನ್. ಆದ್ರೆ ಇಲ್ಲೊಂದು ಕಡೆ ಮ್ಯಾಟರ್ ಯೇ ಉಲ್ಟಾ ಆಗಿದೆ. ಹೌದು. ಗನ್ ಹಿಡಿದುಕೊಂಡಿದ್ದ ಯುವಕನ ಬೆನ್ ಹತ್ತಿದ ಪೊಲೀಸರಿಗೆ ಆತ ಸಿಕ್ಕಿದ ಮೇಲೆ ದೊಡ್ಡ ಶಾಕ್ ಎದುರಾಗಿದೆ. ಅಲ್ಲದೆ, ಬಿದ್ದು ಬಿದ್ದು ನಗುವ ಹಾಗೆ ಆಗಿದೆ.

ಇಂತಹದೊಂದು ಘಟನೆ ಕೇರಳದ ಮಲಪ್ಪುರಂನ ಅಲತಿಯೂರು ಸಮೀಪದ ಆಲಿಂಗಲ್ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿರೋ ಘಟನೆ ಏನೆಂದು ನೀವೇ ನೋಡಿ..ವ್ಯಕ್ತಿಯೊಬ್ಬರು ತಮ್ಮ ಬೈಕ್‌ನಲ್ಲಿ ಪೊನ್ನಾನಿಯಿಂದ ಕೂಟಾಯಿ ಕಡೆಗೆ ತೆರಳುತ್ತಿದ್ದರು. ಅವರು ಚಮ್ರವಟ್ಟಂ ಜಂಕ್ಷನ್‌ಗೆ ಬಂರುತ್ತಿದ್ದಂತೆ ಓರ್ವ ಯುವಕ ಬ್ಯಾಗ್‌ನೊಂದಿಗೆ ಲಿಫ್ಟ್‌ಗೆ ವಿನಂತಿಸಿದನು. ತಕ್ಷಣ ಬೈಕ್ ನಿಲ್ಲಿಸಿದ​ ಸವಾರ, ಯುವಕನಿಗೆ ಲಿಫ್ಟ್ ನೀಡಿದರು.

ಆದರೆ, ದಾರಿಯುದ್ದಕ್ಕೂ ಆತನ ವರ್ತನೆಯನ್ನು ಗಮನಿಸಿ ಅನುಮಾನಗೊಂಡ ಬೈಕ್​ ಸವಾರ, ಯುವಕನ್ನು ಆಲಿಂಗಲ್​ನಲ್ಲಿ ಇಳಿಸಿ ಪೊನ್ನಾನಿ ಪೊಲೀಸರಿಗೆ ತಕ್ಷಣ ವಿಷಯ ತಿಳಿಸಿದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆಗ ಯುವಕ, ಬ್ಯಾಗ್‌ನಿಂದ ಬಂದೂಕು ತೆಗೆದು ಪೊಲೀಸರಿಗೆ ಗದರಿಸಿ, ಆಟೋ ಹತ್ತಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ. ಪೊಲೀಸರು ಆತನನ್ನು ಹಿಡಿಯಲು ಹಿಂಬಾಲಿಸಿದ್ದು, ಹೇಗೋ ಪೋಲಿಸರ ವಶವಾಗಿದ್ದಾನೆ.

ಆದ್ರೆ, ಇಲ್ಲೇ ಇರುದು ನೋಡಿ ಟ್ವಿಸ್ಟ್…ಯಾಕಂದ್ರೆ ಆತ ಪೊಲೀಸ್ ವಶ ಆಗುತ್ತಿದ್ದಂತೆ, ಆತ ತೋರಿಸಿರೋ ಬಂದೂಕು ಅಧಿಕೃತ ಆಗಿರಲಿಲ್ಲ. ಅದೊಂದು ಆಟಿಕೆ ಬಂದೂಕು ಆಗಿತ್ತು. ಅಲ್ಲದೆ, ಯುವಕ ಮಾನಸಿಕವಾಗಿಯೂ ಅಸ್ವಸ್ಥ ಎಂಬುದು ಬೆಳಕಿಗೆ ಬಂದಿತು. ಬಳಿಕ ಯುವಕನ ಕುಟುಂಬಸ್ಥರಿಗೆ ಮಾಹಿತಿ ನೀಡಿ, ಯುವಕನನ್ನು ಅವರ ಜೊತೆಗೆ ಕಳುಹಿಸಲಾಯಿತು. ಒಟ್ಟಾರೆ, ಆತನ ಡ್ರಾಮಾ ದಿಂದ ಪೊಲೀಸ್ ಸಿಬ್ಬಂದಿಯಿಂದ ಹಿಡಿದು ಜನರೂ ಶಾಕ್ ಆಗುವಂತೆ ಆಗಿದೆ. ಆದ್ರೆ, ವಿಷಯ ತಿಳಿಯುತ್ತಿದ್ದಂತೆ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.

Leave A Reply

Your email address will not be published.