Bank Holidays in October 2022: ಅಕ್ಟೋಬರ್ನಲ್ಲಿದೆ ಬರೋಬ್ಬರಿ 21 ದಿನ ಬ್ಯಾಂಕ್ ರಜೆ, ಇಲ್ಲಿದೆ ಸಂಪೂರ್ಣ ವಿವರ!!!

ಬ್ಯಾಂಕ್ ಗಳಿಗೆ ರಜೆ ಇರುವುದನ್ನು ತಿಳಿಯದೆ, ಕೆಲಸಕ್ಕಾಗಿ ಹೋಗಿ ವಾಪಸ್ಸಾಗಿರುವ ಪ್ರಸಂಗಗಳು ಹಲವರ ಅನುಭಕ್ಕೆ ಬಂದಿರಬಹುದು. ಹಾಗಾಗಿ ಬ್ಯಾಂಕ್ ಗಳ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿದಿದ್ದರೆ ಕಾಲಹರಣವಾಗುವುದು ತಪ್ಪುತ್ತದೆ.
ಅಕ್ಟೋಬರ್ನಲ್ಲಿ ಬಹುತೇಕ ದಿನಗಳು ಬ್ಯಾಂಕ್ ರಜೆ ಇರಲಿದ್ದು, ದೇಶಾದ್ಯಂತ ಎಲ್ಲಾ ಬ್ಯಾಂಕ್ಗಳು ರಜೆ ಇರಲಾರದು. ಈ ಪೈಕಿ ಕೆಲವು ರಜೆಗಳು ಕೆಲವು ರಾಜ್ಯಗಳಿಗೆ ಸೀಮಿತವಾಗಿರುತ್ತದೆ. ಹಾಗಾಗಿ ಬ್ಯಾಂಕ್ ಸಾರ್ವತ್ರಿಕ ರಜೆಯ ಬಗ್ಗೆ ಜನರಿಗೆ ತಿಳಿದಿದ್ದರೆ ಸುಮ್ಮನೆ ತಿರುಗಾಡುವುದು ತಪ್ಪುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಕ್ಟೋಬರ್ನ ಬ್ಯಾಂಕ್ ರಜಾ ದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ್ 2022 ರಲ್ಲಿ ಒಟ್ಟು 21 ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿದ್ದು, ನವರಾತ್ರಿ ಹಿನ್ನೆಲೆ ಹಲವಾರು ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ.
ಬ್ಯಾಂಕ್ಗಳಲ್ಲಿ ಹಬ್ಬ ಇಲ್ಲವೇ ಯಾವುದಾದರೂ, ಜಯಂತಿಗಳಿದ್ದರೆ ಇದಲ್ಲದೆ, ಭಾನುವಾರ ರಜೆ ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದಲ್ಲದೆ, ಇತ್ತಿಚೀನ ವರ್ಷಗಳಲ್ಲಿ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆಯಿರುವುದು ಎಲ್ಲರ ಗಮನಕ್ಕೂ ಬಂದಿರುವ ವಿಚಾರ. ಈ ರಜೆಗಳನ್ನು ಹೊರತುಪಡಿಸಿ ಆಯಾ ರಾಜ್ಯದ ಆಚರಣೆ ಮಾಡುವ ವಿಶೇಷ ಸ್ಥಳಿಯ ಹಬ್ಬಗಳಿದ್ದಾಗ ಸ್ಥಳೀಯ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
ಮುಂದಿನ ತಿಂಗಳು ಬ್ಯಾಂಕ್ ಬಂದ್ ಆಗಿರುವ 21 ದಿನಗಳ ಪೈಕಿ ಐದು ಭಾನುವಾರ ವಾರದ ರಜೆ ಆಗಿದ್ದು, ಇನ್ನುಳಿದ ಎರಡು ರಜೆಗಳು ಶನಿವಾರದ ರಜೆಗಳು ಆಗಿದೆ. ಸಾಮಾನ್ಯವಾಗಿ ಬ್ಯಾಂಕುಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬಂದ್ ಆಗಿರುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು ಐದು ಶನಿವಾರಗಳು ಬರಲಿದ್ದು ಈ ಪೈಕಿ ಎರಡು ಶನಿವಾರಗಳು ಬ್ಯಾಂಕ್ ಬಂದ್ ಆಗಿರುತ್ತದೆ. ತಿಂಗಳ ಎರಡನೇ ದಿನವೇ ಭಾನುವಾರ ಹಾಗೂ ಗಾಂಧಿ ಜಯಂತಿ ಹಿನ್ನೆಲೆ ಬ್ಯಾಂಕ್ಗಳು ಬಂದ್ ಆಗಿರುತ್ತದೆ. ಇನ್ನು ದುರ್ಗಾ ಪೂಜೆ, ದಸರಾ ಅಥವಾ ವಿಜಯದಶಮಿ ಹಿನ್ನೆಲೆ ಹಲವಾರು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತದೆ. ಇನ್ನು ಅಕ್ಟೋಬರ್ ತಿಂಗಳಿನಲ್ಲೇ ದೀಪಾವಳಿಯು ಬರಲಿದ್ದು ಈ ದಿನವೂ ಬ್ಯಾಂಕ್ ಬಂದ್ ಆಗಿರುತ್ತದೆ.
ಅಕ್ಟೋಬರ್ನಲ್ಲಿ ಈ ದಿನಗಳು ಬ್ಯಾಂಕ್ ರಜೆ
ಅಕ್ಟೋಬರ್ 1: ಅರ್ಧ ಹಣಕಾಸು ವರ್ಷ
ಅಕ್ಟೋಬರ್ 2: ಭಾನುವಾರ (ವಾರದ ರಜೆ), ಗಾಂಧಿ ಜಯಂತಿ
ಅಕ್ಟೋಬರ್ 3: ದುರ್ಗಾ ಪೂಜೆ (ಮಹಾ ಅಷ್ಟಮಿ)
ಅಕ್ಟೋಬರ್ 4: ದುರ್ಗಾ ಪೂಜೆ/ದಸರಾ (ಮಹಾನವಮಿ)/ ಆಯುಧ ಪೂಜೆ/ ಶ್ರೀಮಂತ ಶಂಕರದೇವರ ಜನ್ಮದಿನ
ಅಕ್ಟೋಬರ್ 5: ದುರ್ಗಾ ಪೂಜೆ/ದಸರಾ (ವಿಜಯದಶಮಿ)/ ಶ್ರೀಮಂತ ಶಂಕರದೇವರ ಜನ್ಮದಿನ
ಅಕ್ಟೋಬರ್ 6: ದುರ್ಗಾ ಪೂಜೆ/ದಸರಾ
ಅಕ್ಟೋಬರ್ 7: ದುರ್ಗಾ ಪೂಜೆ/ದಸರಾ
ಅಕ್ಟೋಬರ್ 8: ಎರಡನೇ ಶನಿವಾರ, ಮಿಲಾದ್-ಇ-ಶರೀಫ್/ಈದ್-ಇ-ಮಿಲಾದ್-ಉಲ್-ನಬಿ (ಪ್ರವಾದಿ ಮೊಹಮ್ಮದ್ ಜನ್ಮದಿನ)
ಅಕ್ಟೋಬರ್ 9: ಭಾನುವಾರ (ವಾರದ ರಜೆ)
ಅಕ್ಟೋಬರ್ 13: ಕರ್ವಾ ಛೌತ್
ಅಕ್ಟೋಬರ್ 14: ಈದ್-ಇ-ಮಿಲಾದ್-ಉಲ್-ನಬಿ ಬಳಿಕ ಬರುವ ಪವಿತ್ರ ಶುಕ್ರವಾರ
ಅಕ್ಟೋಬರ್ 16: ಭಾನುವಾರ (ವಾರದ ರಜೆ)
ಅಕ್ಟೋಬರ್ 18: ಕಟಿ ಬಿಹು
ಅಕ್ಟೋಬರ್ 22: ನಾಲ್ಕನೇ ಶನಿವಾರ
ಅಕ್ಟೋಬರ್ 23: ಭಾನುವಾರ (ವಾರದ ರಜೆ)
ಅಕ್ಟೋಬರ್ 24: ಕಾಳಿ ಪೂಜೆ/ ದೀಪಾವಳಿ/ ಲಕ್ಷ್ಮೀ ಪೂಜೆ/ ನರಕ ಚತುರ್ದಶಿ
ಅಕ್ಟೋಬರ್ 25: ಲಕ್ಷ್ಮೀ ಪೂಜೆ/ ದೀಪಾವಳಿ/ ಗೋ ಪೂಜೆ
ಅಕ್ಟೋಬರ್ 26: ಗೋ ಪೂಜೆ/ ವಿಕ್ರಮ ಸಂವಂತ ಹೊಸ ವರ್ಷ ದಿನ/ ಬಾಯ್ ಬಿಜ್/ ಬಾಯ್ ದುಜ್/ ದೀಪಾವಳಿ (ಬಲಿ ಪಾಡ್ಯಮಿ)/ ಲಕ್ಷ್ಮೀ ಪೂಜೆ
ಅಕ್ಟೋಬರ್ 27: ಬಾಯ್ದೂಜ್/ ಚಿತ್ರಗುಪ್ತ ಜಯಂತಿ/ ಲಕ್ಮೀ ಪೂಜೆ/ ದೀಪಾವಳಿ
ಅಕ್ಟೋಬರ್ 30: ಭಾನುವಾರ (ವಾರದ ರಜೆ)
ಅಕ್ಟೋಬರ್ 31: ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮದಿನ/ ಛತ್ ಪೂಜೆ/ ಸೂರ್ಯ ಪಶ್ಟಿ ದಾಲ ಛತ್
ಕರ್ನಾಟಕದಲ್ಲಿ ಯಾವೆಲ್ಲ ದಿನ ಬ್ಯಾಂಕ್ ರಜೆ
ಅಕ್ಟೋಬರ್ 2: ಭಾನುವಾರ (ವಾರದ ರಜೆ), ಗಾಂಧಿ ಜಯಂತಿ
ಅಕ್ಟೋಬರ್ 4: ದಸರಾ/ಮಹಾನವಮಿ/ ಆಯುಧ ಪೂಜೆ/
ಅಕ್ಟೋಬರ್ 5: ದಸರಾ/ ವಿಜಯದಶಮಿ
ಅಕ್ಟೋಬರ್ 8: ಎರಡನೇ ಶನಿವಾರ
ಅಕ್ಟೋಬರ್ 9: ಭಾನುವಾರ (ವಾರದ ರಜೆ)
ಅಕ್ಟೋಬರ್ 16: ಭಾನುವಾರ (ವಾರದ ರಜೆ)
ಅಕ್ಟೋಬರ್ 22: ನಾಲ್ಕನೇ ಶನಿವಾರ
ಅಕ್ಟೋಬರ್ 23: ಭಾನುವಾರ (ವಾರದ ರಜೆ)
ಅಕ್ಟೋಬರ್ 24: ದೀಪಾವಳಿ
ಅಕ್ಟೋಬರ್ 26: ದೀಪಾವಳಿ
ಅಕ್ಟೋಬರ್ 30: ಭಾನುವಾರ (ವಾರದ ರಜೆ)
ಈ ಎಲ್ಲ ರಜೆಗಳಿದ್ದು, ಜನರು ಇದನ್ನು ನೋಡಿಕೊಳ್ಳುವುದು ಉತ್ತಮ.