SCST,OBC ಮೀಸಲಾತಿ ಕುರಿತು ರಾಜ್ಯ ಸರ್ಕಾರದ ಮಹತ್ವದ ಘೋಷಣೆ

ರಾಜ್ಯದ ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳ ಹಾಗೂ ಹೆಚ್ಚಿನ ಮೀಸಲಾತಿ ವರ್ಗಕ್ಕೆ ಸೇರ್ಪಡೆ ಕುರಿತು ಶೀಘ್ರದಲ್ಲೇ ಸರ್ವಪಕ್ಷಗಳ ಸಭೆ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜನಸಂಖ್ಯೆಗೆ ಅನುಗಣವಾಗಿ ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮಹತ್ವದ ಘೋಷಣೆ ಮಾಡಿದ್ದಾರೆ.


Ad Widget

ವಿಧಾನಸಭೆಯಲ್ಲಿ ಬಿಎಂಎಸ್ ಟ್ರಸ್ಟ್ ಕುರಿತು ಜೆಡಿಎಸ್ ಗದ್ದಲ ನಡುನೆಯೇ ಬೊಮ್ಮಾಯಿ ಮಾತನಾಡಿ, ಎಸ್ ಸಿಎಸ್ ಟಿ ಸಮುದಾಯದ ಮೀಸಲಾತಿ ಕುರಿತು ಈಗಾಗಲೇ ಎರಡು ವರದಿಗಳು ಮುಂದಿವೆ. ನ್ಯಾ. ನಾಗಮೋಹದಾಸ್ ಅವರ ಸಮಿತಿ ವರದಿ, ನ್ಯಾ ಸುಭಾಷ್ ಅಡಿ ಅವರ ಸಮಿತಿ ವರದಿಗಳನ್ನು ಆಧಾರದಲ್ಲಿಸಿಕೊಂಡು ಚರ್ಚೆ ಮಾಡಬೇಕಿದೆ ಎಂದರು. ಈ ಬಗ್ಗೆ ಅಕ್ಟೋಬರ್ ಮೊದಲ ವಾರದಲ್ಲಿ ಸಭೆಯನ್ನು ಆಯೋಜಿಸಿ ನಿರ್ಧಾರ ಮಾಡಲಾಗುತ್ತದೆ.

error: Content is protected !!
Scroll to Top
%d bloggers like this: