ʻಯಡಿಯೂರಪ್ಪನವರೇ ವಯಸಾಗೋಯ್ತಲ್ಲ ನಮ್ಗೆʼ….. ಜೋಕ್ಸ್‌ ಹೊಡೆದ ಸಿದ್ದರಾಮಯ್ಯ; ಯಡ್ಡಿ-ಸಿದ್ದು ಸೇರಿ ಹೊಸ ಪಕ್ಷ ಕಟ್ಟೋ ಪ್ಲಾನ್ !!

ಬೆಂಗಳೂರು: ಬಿಗುವಿನ ರಾಜಕೀಯ ವಿದ್ಯಮಾನಗಳ ನಡುವೆ ಕೂಡಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಮುಖಾಮುಖಿಯಾದ ಸಂದರ್ಭದಲ್ಲಿ ಇಬ್ಬರು ನಾಯಕರು ವಯಸ್ಸಿನ ಕುರಿತು ಲಘು ಸಂಭಾಷಣೆ ನಡೆಸಿದರು.


ಮಾಜಿ ಸಿಎಂ ಯಡಿಯೂರಪ್ಪ ಬರುವಾಗ ಎದುರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಕ್ಕಿದ್ದಾರೆ. ಆ ವೇಳೆ ಬಿಎಸ್‍ವೈ ಬಳಿ ಸಿಎಂ, ಸರ್ ಕೌನ್ಸಿಲ್‍ಗೆ ಹೋಗ್ತಾ ಇದ್ದೇನೆ ಎಂದು ಹೇಳಿ ಅಲ್ಲಿಂದ ಹೊರಟಿದ್ದಾರೆ. ಬಳಿಕ ವಿಧಾನ ಸಭೆಯ ಆಡಳಿತ ಪಕ್ಷದ ಮೊಗಸಾಲೆಗೆ ಹೋಗುವ ದಾರಿಯಲ್ಲಿ ಎದುರಿಗೆ ಸಿಕ್ಕ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಜೋಕ್ ಮಾಡಿದ್ದಾರೆ. ಅವರಿಬ್ಬರ ಸಂಭಾಷಣೆಗೆ ಜನ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ಮಾಸ್ ಲೀಡರ್ ಗಳು, ನೀವು ಇಬ್ರು ಸೇರಿ ಯಾಕೆ ಒಂದು ಪ್ರಾದೇಶಿಕ ಪಕ್ಷ ಮಾಡಬಾರದು?? ಒಂದು ಕುತೂಹಲ ಹೇಗ್ ಇರತ್ತೆ ಅಂತ…? ಈಗ ಇರೋ ಪಕ್ಷ ನಿಮಗೆ ರಿಟೈರ್ಡ್ಮೆಂಟ್ಕೊ ಟ್ಟಾಗ ಇದನ್ನ ಮಾಡಿ ಸರ್… ಪ್ರಾದೇಶಿಕ ಪಕ್ಷ ಕಟ್ಟಿ ಎಂದು ಟ್ವಿಟ್ಟರ್ ಓದುಗರೊಬ್ಬರು ಇಬ್ಬರು ನಾಯಕರ ಕಾಲೆಳೆದಿದ್ದಾರೆ.

ಯಡಿಯೂರಪ್ಪ ಅವರು, ” ಏನು ನೀವು ಕೌನ್ಸಿಲ್‍ಗೆ ಹೋಗ್ತಾ ಇದ್ದೀರಾ ? ” ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ನಕ್ಕ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಅವರೇ ವಯಸ್ಸು ಆಗೋಯ್ತಲ್ಲ ನಮ್ಗೆ. ನೀವೂ ಕೌನ್ಸಿಲ್‍ಗೆ ಹೋಗಲು ಆಗಲ್ಲ, ನಾನೂ ಹೋಗಲು ಆಗಲ್ಲ ಎಂದು ಹೇಳಿದರು. ಅದಕ್ಕೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಇಬ್ಬರೂ ಮನ ತುಂಬಿ ನಕ್ಕಿದರು.
ಆ ವೇಳೆಗೆ ಬಂದ ಹೆಚ್.ಡಿ.ಕುಮಾರಸ್ವಾಮಿ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ನಿಲ್ಲಿಸಿ ಮಾತನಾಡಿಸಿದ್ದಾರೆ. ” ಏನ್ ಸರ್ ಚೆನ್ನಾಗಿದ್ದೀರಾ ? ” ಎಂದು ಕಾರಿಡಾರ್‌ನಲ್ಲಿ ಬಿಎಸ್‍ವೈ ನಡೆದುಕೊಂಡು ಹೋಗುತ್ತಿದ್ದಾಗ ಕೈಹಿಡಿದುಕೊಂಡು ಪ್ರಶ್ನಿಸಿದ್ದಾರೆ. ಅದಕ್ಕೆ ಬಿಎಸ್‍ವೈ, ‘ ನಾನು ಚೆನ್ನಾಗಿದ್ದೇನೆ, ನಿನ್ನೆ ಅಪ್ಪಾಜಿಯವರನ್ನ ನೋಡೋಕೆ ಹೋಗಿದ್ದೆ ‘ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಇದಾದ ಬಳಿಕ ದೇವೇಗೌಡರ ಆರೋಗ್ಯದ ಬಗ್ಗೆ ಬಿಎಸ್‍ವೈ, ಹೆಚ್‍ಡಿಕೆ ಪರಸ್ಪರ ಮಾತನ್ನಾಡಿದ್ದಾರೆ. ಆದರೆ ಪಕ್ಕದಲ್ಲೇ ಸಿದ್ದರಾಮಯ್ಯ ನಿಂತಿದ್ದರೂ ತಿರುಗಿಯೂ ನೋಡದೆ ಹೆಚ್‍ಡಿಕೆ ತೆರಳಿದ್ದಾರೆ.

Leave A Reply

Your email address will not be published.