ಕೆಪಿಎಸ್ ಕೆಯ್ಯೂರಿನ ಮಾನಸ ಎಂ ಕಬಡ್ಡಿ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Share the Article

ಕೆಯ್ಯೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ದ.ಕ. ಜಿ.ಪಂ.ಉನ್ನತ್ತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇದರ ಸಹಯೋಗದೊಂದಿಗೆ ಸೆ22ರಂದು ನಡೆದ ಪುತ್ತೂರು ತಾಲೂಕು ಮಟ್ಟದ 14 ವರ್ಷದ ವಯೋಮನದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಕೆಯ್ಯೂರು ಶಾಲೆಯ 8 ನೇ ತರಗತಿ ವಿದ್ಯಾರ್ಥಿ ,ಮಾನಸ ಎಂ.ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಅದ್ಯಾಪಕ ವೃಂದದ ಸಹಕಾರದೊಂದಿಗೆ ರಾಷ್ಟ್ರೀಯ ತಿರ್ಪುಗಾರ, ರಾಜ್ಯತರಬೇತುದಾರ ಮನೋಹರ ಬೆಟ್ಟಂಪಾಡಿ ತರಬೇತಿ ನೀಡಿರುತ್ತಾರೆ. ಇವರು ಕೆಯ್ಯೂರು ಗ್ರಾಮದ ಕೋಟಿ ಪರವರ ಮೊಮ್ಮಗಳು ,ಮತ್ತು ಜಯೇಶ ಮತ್ತು ಸುಮಿತ್ರಾ ರವರ ಪುತ್ರಿಯಾಗಿದ್ದಾರೆ.

Leave A Reply