ನರೇಂದ್ರ ಮೋದಿಗೆ ಮರಣದಂಡನೆ ಶಿಕ್ಷೆ ಕೊಡಿಸಲು ಹುನ್ನಾರ, ಬಹುದೊಡ್ಡ ಸಂಚು ರೂಪಿಸಿದ ಆ ಮಹಿಳೆ ಯಾರು ಗೊತ್ತಾ ?!

ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ಸೋಗಿನ ಹೆಂಗಸು ತೀಸ್ತಾ ಸೆಟಲ್ವಾಡ್ ವಿರುದ್ಧ ವಿಶೇಷ ತನಿಖಾ ತಂಡ (ಎಸ್ಐಟಿ) ಗಂಭೀರ ಆರೋಪ ಮಾಡಿದ್ದು ಸುದ್ದಿ ಕೇಳಿದ ಭಾರತೀಯರು. ಬೆಚ್ಚಿ ಬಿದ್ದಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಮರಣದಂಡನೆ ಕೊಡಿಸಲು ಬಹುದೊಡ್ಡ ಸಂಚೊಂದು ಹೆಣೆಯಲ್ಪಟ್ಟಿತ್ತು ಎಂಬುದಾಗಿ ಎಸ್ಐಟಿ ಆರೋಪಿಸಿದೆ.

2002 ರ ಗೋದ್ರಾ ಘಟನೆಯ ದಂಗೆಗಳ ಪ್ರಕರಣದಲ್ಲಿ ಗುಜರಾತ್ ಸರ್ಕಾರಕ್ಕೆ ಅಪಖ್ಯಾತಿ ಉಂಟು ಮಾಡಿ, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಮರಣದಂಡನೆ ಶಿಕ್ಷೆಗೆ ಗುರಿ ಮಾಡುವುದಕ್ಕೆ ತೀಸ್ತಾ ಸೆಟಲ್ವಾಡ್ ಸಂಚು ರೂಪಿಸಿದ್ದರು ಎಂದು ಎಸ್ಐಟಿ ದಾಖಲಿಸಿರುವ ಚಾರ್ಜ್ ಶೀಟ್ ನಲ್ಲಿ ತಿಳಿದುಬಂದಿದೆ.

ಆರೋಪಿ ತೀಸ್ತಾ ಸೆಟಲ್ವಾಡ್ ಅಂದಿನ ಸಿಎಂ ನರೇಂದ್ರ ಮೋದಿ ಅವರಿಗೆ ಮರಣದಂಡನೆ ಶಿಕ್ಷೆಯಾಗುವಂತೆ ಸಂಚು ರೂಪಿಸಿದ್ದರು. ಸರ್ಕಾರದ ಭಾಗವಾಗಿದ್ದರೂ ಕೂಡಾ ಮಾಜಿ ಪೊಲೀಸ್ ಮಹಾ ನಿರ್ದೇಶಕ ಆರ್ ಬಿ ಶ್ರೀಕುಮಾರ್, ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ತೀಸ್ತಾಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಹಾಗೂ ಅದನ್ನು ಅಧಿಕೃತ ಕಡತಗಳಿಗೆ ಸೇರಿಸಿದ್ದರು ಎಂದು ಎಸ್ಐಟಿ ಆಪಾದಿಸಿದೆ.

ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯವನ್ನು ಅಂತ್ಯಗೊಳಿಸಲು ಮಾತ್ರ ಬಯಸಿರಲಿಲ್ಲ ಆರೋಪಿಗಳು. ಮಾತ್ರವಲ್ಲ, ಮೋದಿಗೆ ಮರಣ ದಂಡನೆ ವಿಧಿಸಲು ನಕಲಿ ದಾಖಲೆ, ಅಫಿಡವಿಟ್ ಗಳನ್ನು ಸೃಷ್ಟಿಸಲು ವಕೀಲರ ಪಡೆಯನ್ನೇ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಚಾರ್ಜ್ ಶೀಟ್ ನಲ್ಲಿ ಆರೋಪಿಸಲಾಗಿದೆ. ತೀಸ್ತಾ ಸೆಟಲ್ವಾಡ್, ಮಾಜಿ ಪೊಲೀಸ್ ಮಹಾ ನಿರ್ದೇಶಕ ಆರ್ ಬಿ ಶ್ರೀಕುಮಾರ್ (ನಿವೃತ್ತ) ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧದ ಗಲಭೆ ಪ್ರಕರಣದಲ್ಲಿ “ಪುರಾವೆಗಳ ಅಡುಗೆ” ತಯಾರಿಕಾ ಆರೋಪದ ಸಂಬಂಧ ಇದೀಗ 100 ಪುಟಗಳ ಚಾರ್ಜ್ ಶೀಟ್ ನ್ನು ಅಹ್ಮದಾಬಾದ್ ಮೆಟ್ರೋ ಕೋರ್ಟ್ ಗೆ ಈಗ ಸಲ್ಲಿಸಲಾಗಿದೆ.

Leave A Reply