WhatsApp ನಲ್ಲಿ ಇನ್ಮುಂದೆ ಸೆಂಡ್ ಮಾಡಿರುವ ಮೆಸೇಜ್‌ಗಳನ್ನು ಎಡಿಟ್ ಮಾಡಲು ಸಾಧ್ಯ!!!

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ WhatsApp ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಯಾವಾಗಲೂ ನೀಡುತ್ತಲೇ ಇದೆ. ಇತ್ತೀಚೆಗಷ್ಟೇ, WhatsApp ಅಪ್ಲಿಕೇಷನ್ ನಲ್ಲಿ ಸಂದೇಶಗಳನ್ನು ಹುಡುಕಲು ಸಾಧ್ಯವಾಗುವಂತಹ ಹೊಸ ವೈಶಿಷ್ಟ್ಯದ ಬಗ್ಗೆ ಬಂದಿತ್ತು. ಇದೀಗ WhatsApp ಮತ್ತೊಂದು ಅಚ್ಚರಿಯ ವೈಶಿಷ್ಟ್ಯ ಕೊಡಲು ಮುಂದಾಗಿದೆ. ಅದ್ಯಾವುದೆಂದರೆ, ಸಂದೇಶಗಳನ್ನು ಎಡಿಟ್ (Edit Feature) ಮಾಡಬಹುದಾದ ಮತ್ತೊಂದು ಅಚ್ಚರಿಯ ವೈಶಿಷ್ಟ್ಯವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಹೌದು, ಬಳಕೆದಾರರೇ, ನಿಜಕ್ಕೂ ಇದು ಉತ್ತಮ ವೈಶಿಷ್ಟ್ಯ ಎಂದೇ ಹೇಳಬಹುದು. WhatsApp ಬಳಕೆದಾರರು ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡಲು ಸಾಧ್ಯವಾಗಲಿರುವ ವೈಶಿಷ್ಟ್ಯವನ್ನು WhatsApp ಬೀಟಾ ಟ್ರ್ಯಾಕರ್ WABetalnfo ವರದಿ ಹೇಳಿದೆ.

WhatsApp ಬಳಕೆದಾರರು ಇತರರಿಗೆ ಸಂದೇಶವನ್ನು ಕಳುಹಿಸಿದ ವೇಳೆಯಲ್ಲಿ ಅಕ್ಷರಗಳು ತಪ್ಪಾಗಿರುವ ಬಗ್ಗೆ ಸಂದೇಶ ಕಳಿಸಿದ ನಂತರ ತಿಳಿಯಬಹುದು. ಇದಕ್ಕಾಗಿಯೇ ಈ ವೇಳೆ ಆ ಸಂದೇಶಗಳನ್ನು ಆ ಕ್ಷಣದಲ್ಲೇ ಎಡಿಟ್ ಮಾಡಬಹುದಾದ ಆಯ್ಕೆ ಇದಾಗಿದೆ ಎಂದು ಹೇಳಿದೆ. WhatsApp ಸಂದೇಶಗಳನ್ನು ಕಳುಹಿಸಿದ ನಂತರ ಅದರಲ್ಲಿನ ಅಕ್ಷರಗಳು ತಪ್ಪಾಗಿದ್ದರೆ ಡಿಲೀಟ್ ಫಾರ್ ಎವರಿವನ್ ಆಯ್ಕೆಯ ಮೂಲಕ ಆ ಸಂದೇಶವನ್ನು ಡಿಲೀಟ್ ಮಾಡಬಹುದು. ಆದರೆ, ಈ ಬಗ್ಗೆ ಸಂದೇಶ ಪಡೆದವರಿಗೆ ಅನುಮಾನ ಬರಬಹುದು ಎಂಬ ಕಾರಣಕ್ಕೆ WhatsApp ನಲ್ಲಿ ಸಂದೇಶಗಳನ್ನು ಎಡಿಟ್ ಮಾಡಬಹುದಾದ ಆಯ್ಕೆಯನ್ನು ನೀಡುತ್ತಿದೆ ಎಂದು ವರದಿಯಾಗಿದೆ.

WhatsApp ಬಳಕೆದಾರರು ತಮ್ಮ ಹಳೆಯ ಸಂದೇಶಗಳನ್ನು ಸುಲಭವಾಗಿ ಹುಡುಕಬಹುದಾದ ಹೊಸ ವೈಶಿಷ್ಟ್ಯಗಳ ತರಲು WhatsApp ಸಂಸ್ಥೆ ಇತ್ತೀಚೆಗಷ್ಟೇ ಸಿದ್ಧತೆ ನಡೆಸುತ್ತಿದೆ ಎಂಬ ಬಗ್ಗೆ ವರದಿಯಾಗಿತ್ತು. ಇದರ ಪ್ರಕಾರ, ಈ ವೈಶಿಷ್ಟ್ಯವು WhatsApp ಅಪ್ಲಿಕೇಷನ್ ನಲ್ಲಿ ವರ್ಷದ ಯಾವುದೇ ದಿನಾಂಕವನ್ನು ನಮೂದಿಸುವ ಮೂಲಕ ಹಳೆಯ ಸಂದೇಶಗಳನ್ನು ಸುಲಭವಾಗಿ ಹುಡುಕ ಬಹುದು ಎಂದು ಹೇಳಲಾಗಿದೆ.

ಇದರ ಪ್ರಕಾರ WABetalnfo ಪ್ರಕಟಿಸಿರುವ ಸ್ಕ್ರೀನ್ ಶಾಟ್‌ನಲ್ಲಿ, WhatsApp ಸಂದೇಶಗಳಿರುವ ಪಕ್ಕ ಕ್ಯಾಲೆಂಡರ್ ಇದ್ದು, ಇದರಲ್ಲಿ ಈ ಬಳಕೆದಾರರು ದಿನಾಂಕವನ್ನು ಹೊಂದಿಸಬಹುದು ಮತ್ತು ಆ ದಿನದ ಸಂದೇಶಗಳನ್ನು ನೋಡಬಹುದು.

Leave A Reply

Your email address will not be published.