2022-23 ನೇ ಸಾಲಿನ SSLC ಪರೀಕ್ಷೆ
ಮಾರ್ಗಸೂಚಿ ಬಿಡುಗಡೆ | ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ

2022-23 ನೇ ಸಾಲಿನ ಎಸ್ ಎಸ್ ಎಲ್ ಸಿ (SSLC) ಮುಖ್ಯ ಪರೀಕ್ಷಾ ಪ್ರಕ್ರಿಯೆಯ ಕುರಿತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳ ವಿವರಗಳನ್ನು ಆನ್‌ಲೈನ್ ಮುಖಾಂತರ ನೋಂದಾಯಿಸಲು ಮತ್ತು ಪರೀಕ್ಷಾ ಶುಲ್ಕ ಪಾವತಿ, ಅರ್ಜಿಗಳ ಸ್ವರೂಪ, ಪರೀಕ್ಷಾ ಶುಲ್ಕ ನಿಗಧಿ, ಪರೀಕ್ಷಾ ಶುಲ್ಕ ವಿನಾಯಿತಿ, ಪರೀಕ್ಷಾ ಶುಲ್ಕವನ್ನು ಪಾವತಿಸುವ ಸ್ವರೂಪ ಕುರಿತು ಸೇರಿದಂತೆ ಇನ್ನೂ ಅನೇಕ ಮಾರ್ಗಸೂಚಿಗಳ ಟಿಪ್ಪಣಿಯನ್ನು ಬಿಡುಗಡೆ ಮಾಡಿದೆ.

2023 ಮಾರ್ಚ್ / ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳಿಂದ ಹಾಜರಾಗುವ ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸಲು ಅರ್ಜಿಗಳನ್ನು ಶಾಲೆಗಳ ಮುಖಾಂತರ ಸಲ್ಲಿಸಬಹುದಾಗಿದೆ.

ಸದರಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯಿಂದ 2023ರ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳ (CCERF), ಖಾಸಗಿ ಅಭ್ಯರ್ಥಿಗಳ (CCEPF) ಮತ್ತು ಪುನರಾವರ್ತಿತ ಅಭ್ಯರ್ಥಿಗಳ (CCRPR, CCEPR, NSR, NSPR) ವಿವರಗಳನ್ನು ಮಂಡಳಿಯ https://sslc.karnataka.gov.in ಶಾಲಾ ಲಾಗಿನ್ ಮೂಲಕ ಅಪ್‌ಲೋಡ್ ಮಾಡಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಶಾಲೆಯ ಮುಖ್ಯೋಪಾಧ್ಯಯರು ಈ ಮಾರ್ಗಸೂಚಿಯನ್ವಯ ವಿದ್ಯಾರ್ಥಿಗಳ ನೋಂದಣಿ ಮಾಡಲು ತಿಳಿಸಿದೆ.

ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ಶಾಲಾ ಅಭ್ಯರ್ಥಿಗಳಿಗೆ (CCERF)ನಿಗದಿಪಡಸಿದ ಶುಲ್ಕ.

ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ಶಾಲಾ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ- ರೂ. 585 ಮತ್ತು ಲ್ಯಾಮಿನೇಷನ್ ಶುಲ್ಕ ರೂ.22 ಸೇರಿ ಒಟ್ಟು ರೂ.607.

ಹೊಸದಾಗಿ ನೋಂದಣಿಯಾಗುವ ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕ – ಪ್ರತಿ ವಿದ್ಯಾರ್ಥಿಗೆ- ರೂ.205.

ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳ (CCEPF) ಪರೀಕ್ಷಾ ಶುಲ್ಕ- ಪರೀಕ್ಷಾ ಶುಲ್ಕ ರೂ. 585 ಮತ್ತು ಲ್ಯಾಮಿನೇಷನ್ ಶುಲ್ಕ ರೂ.22 ಸೇರಿ
ಒಟ್ಟು ರೂ.607.

ಎಲ್ಲ ಎಲ್ಲ ವಿಧದ ಪುನರಾವರ್ತಿತ ಅಭ್ಯರ್ಥಿಗಳು (CCRPR, CCEPR, NSR,NSPR)
ಎಲ್ಲ ವಿಧದ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ : ಒಂದು ವಿಷಯಕ್ಕೆ- 370 ರೂಪಾಯಿ.
ಎರಡು ವಿಷಯಕ್ಕೆ – 461 ರೂಪಾಯಿ.
ಮೂರು ಹಾಗೂ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ – 620 ರೂಪಾಯಿ.

Leave A Reply

Your email address will not be published.