Big News | ರಕ್ತ ದಾನ ನೀಡಲು ಮುಂದೆ ಬಂದ ನಾಯಿ, ಶ್ವಾನದಿಂದ ನಡೆದು ಹೋಯಿತು ರಕ್ತದಾನ !

Share the Article

ಕೃಷಿ ಮೇಳದಲ್ಲಿ ಭಾಗವಹಿಸಿದ್ದ ನಾಯಿಯೊಂದು ರಕ್ತದಾನ ನೀಡಲು ಮುಂದೆ ಬಂದಿದೆ. ಶ್ವಾನವೊಂದಕ್ಕೆ ಶ್ವಾನವೇ ರಕ್ತದಾನ ಮಾಡಿ ಸುದ್ದಿಯಾಗಿದೆ.

ಕೃಷಿ ವಿಶ್ವವಿದ್ಯಾಲಯ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ಚಾರ್ಲಿಯ ರಕ್ತವನ್ನು ತೆಗೆದುಕೊಂಡು ಸಿಸಿಇನ್ನೊಂದು ನಾಯಿಗೆ ರಕ್ತದಾನ ಮಾಡಿಸಿದ್ದಾರೆ. ಎರಡನೇ ಬಾರಿ ರಕ್ತದಾನ ಮಾಡುವ ಮೂಲಕ ಚಾರ್ಲಿ ಮತ್ತೆ ಗಮನ ಸೆಳೆದಿದೆ. ಆ ಮೂಲಕ ಮನುಷ್ಯರಿಗೂ ರಕ್ತದಾನ ಮಾಡಲು ನಾಯಿಯೊಂದು ಪ್ರೇರೇಪಿಸಿದೆ.

ಧಾರವಾಡ ಕೃಷಿ ಮೇಳಕ್ಕೆ ಆಗಮಿಸಿರುವ ಡಾಗ್ ಸ್ಕ್ವಾಡ್ ʼಮಾಯಾʼಗೆ ಅನಾರೋಗ್ಯ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ರೆಸ್ಕ್ಯೂ ಟೀಂ ಸದಸ್ಯರಾಗಿರುವ ಸೋಮು ಅವರ ಜರ್ಮನ್ ಶೆಫರ್ಡ್ ʼಚಾರ್ಲಿʼ ರಕ್ತದಾನ ಮಾಡಲು ನಿಂತಿದೆ.

Leave A Reply