ಶಾಲಾ ಬಸ್ಸಿನಲ್ಲಿ ಮಗು ಮೃತಪಟ್ಟ ಘಟನೆ ಮಾಸುವ ಮುನ್ನವೇ ನಡೆಯಿತು ಇನ್ನೊಂದು ದುರಂತ!! ಶಿಕ್ಷಕಿಗೆ ಲಿಫ್ಟ್ ನಲ್ಲೇ ಕಾದಿತ್ತು ಸಾವು!!
ಮುಂಬೈ:ಶಾಲೆಯ ಲಿಫ್ಟ್ ನಲ್ಲಿ ಸಿಲುಕಿ ಶಿಕ್ಷಕಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆಯೊಂದು ಮುಂಬೈ ಉಪನಗರದ ಮಲಾಡ್ ಚಿಂಚೋಳಿ ಬಂದರ್ ನಲ್ಲಿರುವ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಡೆದಿದೆ.
ಮೃತ ಶಿಕ್ಷಕಿಯನ್ನು ಜೆನಲ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ.
ಘಟನಾ ವಿವರ: ಶಿಕ್ಷಕಿ ಮಧ್ಯಾಹ್ನ ಊಟದ ವಿರಾಮದಲ್ಲಿ ತರಗತಿಯಿಂದ ಸಿಬ್ಬಂದಿ ಕೊಠಡಿಗೆ ತೆರಳಲು ಆರನೇ ಮಹಡಿಯಲ್ಲಿರುವ ಲಿಫ್ಟ್ ಗೆ ಕಾದಿದ್ದು, ಲಿಫ್ಟ್ ನೊಳಗೆ ಪ್ರವೇಶಿಸುತ್ತಿದ್ದಂತೆ ಬಾಗಿಲು ಮುಚ್ಚಿ, ಚಲಿಸಲು ಪ್ರಾರಂಭಿಸಿದೆ ಎನ್ನಲಾಗಿದೆ.
ಕೂಡಲೇ ಶಾಲಾ ಇತರ ಸಿಬ್ಬಂದಿಗಳು ಸಹಾಯಕ್ಕೆ ಧಾವಿಸಿದ್ದು, ಶಿಕ್ಷಕಿಯನ್ನು ಲಿಫ್ಟ್ ನಿಂದ ಹೊರಗೆಳೆಯುವ ಭರದಲ್ಲಿ ಗಂಭೀರ ಗಾಯಗಳಾಗಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಶಿಕ್ಷಕಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರಿಳೆದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.