ಉಡುಪಿ: ಕಾಲೇಜಿಗೆ ಹೋದ ವಿದ್ಯಾರ್ಥಿನಿ ನಾಪತ್ತೆ | ಪ್ರಕರಣದಲ್ಲಿ ಭಾರೀ ಟ್ವಿಸ್ಟ್

ಉಡುಪಿಯ ಕಾಲೇಜೊಂದರ ವಿದ್ಯಾರ್ಥಿನಿಯೋರ್ವಳು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ದ್ವಿತೀಯ ವರ್ಷ ಪದವಿ ವ್ಯಾಸಂಗ ಮಾಡುತ್ತಿರುವ ಕಟಪಾಡಿ ಮಟ್ಟು ಅಳಿಂಜೆ ನಿವಾಸಿ ನವ್ಯಾ (20) ಗುರುವಾರ ಕಾಲೇಜಿಗೆ ತೆರಳಿದವಳು ನಾಪತ್ತೆಯಾಗಿರುವ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವ್ಯಾ ಸೆ.15ರಂದು ಎಂದಿನಂತೆ ಕಾಲೇಜಿಗೆ ಹೋದವಳು ಮಧ್ಯಾಹ್ನ 1.30ಕ್ಕೆ ತಾಯಿಗೆ ಕರೆ ಮಾಡಿ ಬಸ್ಸಿನಲ್ಲಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರೂ, ಅಪರಾಹ್ನ 2.30 ಆದರೂ ಮನೆಗೆ ಬಂದಿಲ್ಲ. ಮನೆಯವರು ಎಷ್ಟು ಬಾರಿ ಮೊಬೈಲ್‌ಗೆ ಕರೆ ಮಾಡಿದರೂ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಹಾಗಾಗಿನವ್ಯಾ ಪತ್ತೆಯಾಗದ ಕಾರಣ ಆಕೆಯ ಹೆತ್ತವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆದರೆ ಈ ಪ್ರಕರಣಕ್ಕೆ ಭಾರೀ ತಿರುವೊಂದು ದೊರಕಿದ್ದು,
ಇದೇ ವೇಳೆ ಪಣಿಯೂರು ನಿವಾಸಿ ದೀಕ್ಷಿತ್ ಎಂಬಾತ ತಾನು ಕಟಪಾಡಿ ಮಟ್ಟು ಗ್ರಾಮದ ನವ್ಯಾ ವಿ. ಎಂಬಾಕೆ ಯೊಂದಿಗೆ ಹಿಂದೂ ಧರ್ಮದ ಪ್ರಕಾರದಲ್ಲಿ ಸೆ. 7ರಂದು ವಿವಾಹ ವಾಗಿದ್ದು, ಸೆ. 15ರಂದು ಉಡುಪಿ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದೇವೆ. ಈ ಬಗ್ಗೆ ಯಾರಾದರೂ ದೂರು ನೀಡಿದರೆ ಪೊಲೀಸ್ ತನಿಖೆ ನಡೆಸದಂತೆ ಮದುವೆಯ ಫೋಟೋ ಸಹಿತವಾಗಿ ಕಟಪಾಡಿ ಹೊರ ಠಾಣೆಯ ಮೂಲಕ ವಾಗಿ ಕಾಪು ಪೊಲೀಸ್ ಠಾಣೆಗೆ ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.