ಹಸುಗೂಸನ್ನು ಪಾಳು ಬಾವಿಗೆ ಎಸೆದ ತಾಯಿ | ಹಾವಿನೊಂದಿಗೆ ಇದ್ದರೂ ಜೀವಂತವಾಗಿದೆ ಕೂಸು

ಮಗುವಿಗಾಗಿ ಹಂಬಲಿಸುತ್ತ ಇರೋ ಅದೆಷ್ಟೋ ತಾಯಿಯಂದಿರ ನಡುವೆ ಇಲ್ಲೊಂದು ತಾಯಿ ಮಾಡಿದ ಘಟನೆ ಕೇಳಿದ್ರೆ ಬೆಚ್ಚಿ ಬೀಳೋವಂತಿದೆ. ಹೌದು. ತಾಯಿಯೋರ್ವಳು ಆಗ ತಾನೇ ಹುಟ್ಟಿದ ಗಂಡು ಮಗುವನ್ನು ಪಾಳು ಬಾವಿಗೆ ಎಸೆದ ಘಟನೆ ನಡೆದಿದೆ. ಆದ್ರೆ, ಖುಷಿ ಪಡುವ ವಿಷಯ ಏನಂದ್ರೆ, ಆ ಮಗು ಸಾವನ್ನು ಗೆದ್ದು ಬಂದಿದೆ.

ಹೌದು. ಬಾವಿಯಲ್ಲಿ ಹಾವಿನ ಪಕ್ಕದಲ್ಲೇ ಮಲಗಿದ್ದ ಕಂದ ಸಾವನ್ನೇ ಗೆದ್ದು ಬಂದಿರುವ ರೋಚಕ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ನಡೆದಿದೆ. ಹೆತ್ತಮ್ಮನೇ ಬೇಡವೆಂದು 10ರಿಂದ 15 ದಿನದ ಹಸುಗೂಸನ್ನು ಪಾಳು ಬಾವಿಗೆ ಎಸೆದಿದ್ದು, ಸರಿಯಾಗಿ ಕಣ್ಣೇ ಬಿಟ್ಟಿಲ್ಲದ ಆ ಮಗು ಅಳುತ್ತಿತ್ತು.

ತೋಟಕ್ಕೆ ರೈತ ಮಹಿಳೆಯೊಬ್ಬರು ಹೋಗುವಾಗ ಬಾವಿಯಲ್ಲಿ ಮಗು ಅಳುವ ಶಬ್ದ ಕೇಳಿಸಿಕೊಂಡು ಬಾವಿಯತ್ತ ಇಣುಕಿ ನೋಡಿದ್ದಾರೆ. ಆಗ ಮಗು ಇರುವುದು ಗೊತ್ತಾಗಿದೆ. 50 ಅಡಿ ಆಳಕ್ಕೆ ಮಗು ಬಿದ್ದರೂ ಜೀವಂತವಾಗಿದೆ. ಅಲ್ಲದೆ, ಬಾವಿಯಲ್ಲಿದ್ದ ವಿಷಜಂತುಗಳೂ ಆ ಮಗುವನ್ನ ಏನೂ ಮಾಡದ್ದೆ ರೋಚಕವಾಗಿದೆ.

ಕೂಡಲೇ ರೈತ ಮಹಿಳೆ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಬಾವಿಗೆ ಇಳಿದ ಗ್ರಾಮಸ್ಥರು ಮಗುವನ್ನ ಮೇಲಕ್ಕೆತ್ತಿಕೊಂಡು ಬಂದಿದ್ದಾರೆ. ಬಳಿಕ ಗ್ರಾಮದ ಮಹಿಳೆಯೊಬ್ಬರು ಮಗುವಿಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದಿದ್ದಾರೆ. ಗ್ರಾಮದ ಮಹಿಳೆಯರು ಹಸುಗೂಸನ್ನು ಆರೈಕೆ ಮಾಡಿದ್ದು, ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಸ್ಥಳಕ್ಕೆ ಬಂದ ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯರು ಮಂಡ್ಯ‌ ಮಿಮ್ಸ್ ಆಸ್ಪತ್ರೆ ಮಗುವನ್ನು ರವಾನಿಸಿದ್ದಾರೆ. ಚಿಕಿತ್ಸೆ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗುವುದು ಎಂದು ಮಂಡ್ಯ ಮಿಮ್ಸ್ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.