10 ವರ್ಷಕ್ಕೊಮ್ಮೆ ಆಧಾರ್ ಬಯೋಮೆಟ್ರಿಕ್ ನವೀಕರಣ ಕಡ್ಡಾಯ – UIDAI ಸೂಚನೆ

Share the Article

ಆಧಾರ್ ಕಾರ್ಡ್ ಎಂಬುದು ವ್ಯಕ್ತಿಯ ಗುರುತಾಗಿದ್ದು, ಇದು ಭಾರತದ ಪ್ರತಿಯೊಬ್ಬ ನಾಯಕನಿಗೂ ಕಡ್ಡಾಯವಾಗಿದೆ. ಸರ್ಕಾರಿ ಕೆಲಸದಿಂದ ಹಿಡಿದು ಬ್ಯಾಂಕ್ ವಹಿವಾಟುಗಳ ವರೆಗೂ ಇದರ ಕಾರ್ಯ ಮಹತ್ವದ್ದಾಗಿದೆ. ನಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿತ್ತದೆ ಆಧಾರ್.

ಸರ್ಕಾರಿ ಹಾಗೂ ಸರ್ಕಾರೇತರ ಸೌಲಭ್ಯ ಸೇರಿದಂತೆ ಬ್ಯಾಂಕ್ ಖಾತೆ ತೆರೆಯಲೂ ಸಹ ಆಧಾರ್ ಕಡ್ಡಾಯವಾಗಿದೆ. ಆದರೆ ಇದರ ನವೀಕರಣ ಕುರಿತಂತೆ ಇದೀಗ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಮಹತ್ವದ ಸೂಚನೆಯೊಂದನ್ನು ನೀಡಿದೆ.

ಹೌದು. ಪ್ರಾಧಿಕಾರದ ಸೂಚನೆಯಂತೆ ಪ್ರತಿ 10 ವರ್ಷಕ್ಕೊಮ್ಮೆ ಜನರು ಆಧಾರ್ ಬಯೋಮೆಟ್ರಿಕ್ ನವೀಕರಿಸಬೇಕು ಎಂದು ತಿಳಿಸಲಾಗಿದೆ. ಈ ಮೊದಲು 5 ಮತ್ತು 15 ವರ್ಷ ವಯಸ್ಸಿನ ನಂತರದ ಮಕ್ಕಳು ಆಧಾರ್ ಗೆ ತಮ್ಮ ಬಯೋಮೆಟ್ರಿಕ್ ನವೀಕರಿಸಬೇಕಾಗಿತ್ತು. ಆದರೆ ಈಗ ಎಲ್ಲ ಜನರು ಸಹ ಪ್ರತಿ 10 ವರ್ಷಕ್ಕೊಮ್ಮೆ ಬಯೋಮೆಟ್ರಿಕ್ ನವೀಕರಿಸಬೇಕಾಗಿದೆ.

ಆದರೆ 70 ವರ್ಷ ದಾಟಿದ ನಂತರ ನವೀಕರಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ. ಬಯೋಮೆಟ್ರಿಕ್ ಕಡ್ಡಾಯವಾದ್ದರಿಂದ, ಬಯೋಮೆಟ್ರಿಕ್ ಸೇರಿದಂತೆ ಇತರೆ ವಿವರಗಳನ್ನು ಸಹ ಅಪ್ಡೇಟ್ ಮಾಡಬೇಕಾಗಿದೆ.

Leave A Reply