ಕಚ್ಚಾತೈಲ ಪೂರೈಕೆಯಲ್ಲಿ ಮತ್ತೆ ಅರಬ್ ದೇಶಗಳ ಅಬ್ಬರ!
ರಷ್ಯ ತೈಲ ಪ್ರವಾಹಕ್ಕೆ ಸೌದಿ ತಡೆ

ಉಕ್ರೇನ್ ಆಕ್ರಮಣದ ಬಳಿಕ ಭಾರತದೊಳಕ್ಕೆ ಪ್ರವಾಹದಂತೆ ನುಗ್ಗಲು ಆರಂಭಿಸಿದ್ದ ರಷ್ಯಾದ ಕಚ್ಚಾ ತೈಲಕ್ಕೆ ತಡೆಹುಟ್ಟುವಲ್ಲಿ ಅರಬ್ ದೇಶಗಳು ಸಫಲವಾಗಿದೆ.

 

ಈ ಮೂಲಕ ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ದೇಶದಲ್ಲಿ ಮಧ್ಯ ಪ್ರಾಚ್ಯ ದೇಶಗಳು ತಮ್ಮ ಪ್ರಾಬಲ್ಯವನ್ನು ಮುಂದುವರಿಸಿವೆ.
ಸೌದಿ ಅರೇಬಿಯಾ ಮೂರು ತಿಂಗಳ ಬಳಿಕ ಭಾರತದ ಎರಡನೇ ಅತಿ ದೊಡ್ಡ ತೈಲಪೂರದ ದೇಶವಾಗಿ ಹೊರಹೊಮ್ಮಿದ್ದು ರಷ್ಯಾವನ್ನು ಹಿಂದಿಕ್ಕಿದೆ.

ಇದೆ ವೇಳೆ ಭಾರತ ಆಫ್ರಿಕಾದಿಂದ ತೈಲ ಆಮದನ್ನು ಕಡಿಮೆ ಮಾಡಿರುವುದರಿಂದ ಉಪಯುಕ್ತ ದೇಶಗಳಿಂದ ಆಮದು ಮಾಡಿಕೊಳ್ಳತ್ತಿರುವ ಕಚ್ಚಾತೈಲಾ ಪಾಲು ಶೇಕಡ 59.8 ಕೆ ಕುಸಿದಿದೆ. ಇದು ಕಳೆದ 16 ವರ್ಷಗಳಲ್ಲೇ ಕನಿಷ್ಠ ಮಟ್ಟವಾಗಿದೆ.

ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ದೇಶವಾಗಿರುವ ಭಾರತ ಆಗಸ್ಟ್ ನಲ್ಲಿ ಸೌದಿ ಅರೇಬಿಯಾದಿಂದ ದಿನಕ್ಕೆ 8,63,950 ಬ್ಯಾರೆಲನಂತೆ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಸೌದಿ ಅರೇಬಿಯಾದಿಂದ ಆಮದು ಶೇಕಡ 4.8 ರಷ್ಟು ಹೆಚ್ಚಿಸಿದರೆ ರಷ್ಯಾದಿಂದ ಆಮದು ಶೇಕಡ 2.4 ರಷ್ಟು ಕುಸಿದು 8,55,950 ಬ್ಯಾರೆಲ್ಗೆ ಇಳಿಕೆಯಾಗಿದೆ.

ಮುಂಗಾರು ಋತುವಿನಲ್ಲಿ ಭಾರತದ ಡೀಸೆಲ್ ಬೇಡಿಕೆ ಕಡಿಮೆಯಾಗಿದೆ. ಪರಿಣಾಮ ಪಶ್ಚಿಮ ಆಫ್ರಿಕಾದ ತೈಲದ ಆಮದು ಇಳಿಕೆಯಾಗಿದೆ. ಆಗಸ್ಟ್ ನಲ್ಲಿ ಯುಎಇ ನಾಲ್ಕನೇ ಅತಿ ದೊಡ್ಡ ದೈಲಪೂರಕ್ಕೆ ದಾರ ದೇಶವಾಗಿ ಉಳಿದುಕೊಂಡಿದ್ದು ಕಝಕಿಸ್ಥಾನ್ ಕುವೈತ್ ಅನ್ನೋ ಹಿಂದಿಕ್ಕೆ ಐದನೇ ಸ್ಥಾನಕೇರಿದೆ.

ಇತ್ತೀಚೆಗೆ ರಷ್ಯಾ ತನ್ನ ರಿಯಾಯಿತಿಯನ್ನು ಕಡಿತಗೊಳಿಸುತ್ತಿದ್ದಂತೆ ಮತ್ತೆ ಸೌದಿ ಅರೇಬಿಯಾದಿಂದ ಆಮದು ಹೆಚ್ಚಳವಾಗಿದೆ. ಇದಕ್ಕೂ ಮುನ್ನ ಜೂನ್ ನಲ್ಲಿ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದಾಗಿತ್ತು.

Leave A Reply

Your email address will not be published.