ರೂಪೇಶ್ ಶೆಟ್ಟಿ ಈಗ ‘ಮಂಕು ಭಾಯ್’ | ಇಲ್ಲಿದೆ ನೋಡಿ ಹೊಸ ಗೆಟ್ ಅಪ್

ವಿಭಿನ್ನ ಶೀರ್ಷಿಕೆಯ ‘ ಮಂಕು ಭಾಯ್ ಫಾಕ್ಸಿ ರಾಣಿ ‘ ಎಂಬ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ. ಮಂಗಳೂರಿನ ಪ್ರತಿಭಾನ್ವಿತ ಯುವ ಸಿನಿಮಾ ಉತ್ಸಾಹಿಗಳ ತಂಡ ಸೇರಿ ತಯಾರಿಸಿದ ಈ ಚಿತ್ರ ಸೆನ್ಸಾರ್ ಪಾಸ್ ಆಗಿ ರಿಲೀಸ್ ಗೆ ಸಜ್ಜಾಗಿದೆ.

 

ಇದರಲ್ಲಿ ರೂಪೇಶ್ ಶೆಟ್ಟಿ ನಾಯಕರಾಗಿ ಬಣ್ಣ ಹಚ್ಚಿದ್ದು, ಇವರಿಗೆ ಜೋಡಿಯಾಗಿ ಬ್ರಹ್ಮಗಂಟು ಸೀರಿಯಲ್ ನಟಿ ಗೀತಾ ಭಾರತಿ ಭಟ್ ಅಭಿನಯಿಸಿದ್ದಾರೆ. ಖ್ಯಾತ ಕಲಾವಿದ ಪ್ರಕಾಶ್ ತೂಮಿ ನಾಡ್, ಪಂಚಮಿ ರಾವ್, ಅರ್ಜುನ್ ಕಜೇ ಇದರ ತಾರಾ ಬಳಗದಲ್ಲಿದ್ದು, ತುಳು ಸಿನಿಮಾ ಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಗಗನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಲವ್ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಎಂ ಕೆ ಕೆ ಷಹಜಾನ್ ಛಾಯಾಗ್ರಹಣ, ವಿನ್ಯಾಸ ಮಧ್ಯ, ಶಮೀರ್ ಮುಡಿಪು, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಅವರ ಸಂಗೀತವಿದ್ದು, ಇದರ ಹಾಡೊಂದನ್ನು ಸೋನು ನಿಗಮ್ ಹಾಡಿದ್ದಾರೆ.

Leave A Reply

Your email address will not be published.