ಕದಿಯಲು ಹೋಗಿ ಪೇಚಿಗೆ ಸಿಕ್ಕ ಕಳ್ಳ | 10 ಕಿ.ಮೀ ಕಿಟಕಿಯಲ್ಲಿ ಜೋತಾಡುತ್ತಾ ಬರಬೇಕಾದ ಫಜೀತಿ ಸೃಷ್ಟಿ

ಕಳವು ಮಾಡಲು ಹೋದ ಕಳ್ಳನೋರ್ವ10 ಕಿ.ಮೀವರೆಗೂ ಜೋತಾಡುತ್ತಾ ಬರಬೇಕಾದ ಫಜೀತಿ ನಿರ್ಮಾಣ ಆಗಿ ಮತ್ತೊಮ್ಮೆ ಈ ರೀತಿ ಮಾಡುವುದಿಲ್ಲ ಕ್ಷಮಿಸಿ ಎಂದು ಬೇಡಿಕೊಳ್ಳುವ ಸನ್ನಿವೇಶ ಸೃಷ್ಟಿ ಮಾಡಿಕೊಂಡಿದ್ದಾನೆ. ಇದೀಗ ಈ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ಈ ಘಟನೆ ಸೆಪ್ಟೆಂಬರ್ 14 ರಂದು ಬಿಹಾರದಲ್ಲಿ ನಡೆದಿದ್ದು, ರೈಲು ಬೇಗುಸರಾಯ್‌ನಿಂದ ಖಗರಿಯಾಗೆ ಹೋಗುತ್ತಿದ್ದಾಗ ಸಾಹೇಬ್‌ಪುರ ಕಮಲ್ ನಿಲ್ದಾಣದ ಬಳಿ ರೈಲಿನಲ್ಲಿ ವ್ಯಕ್ತಿಯೋರ್ವರು ಕುಳಿತುಕೊಂಡು ಮೊಬೈಲ್ ನೋಡುತ್ತಿದ್ದಾಗ ಖದೀಮ ಮೊಬೈಲ್ ಕಸಿಯಲು ರೈಲಿನ ಕಿಟಕಿಯೊಳಗೆ ಕೈ ಹಾಕಿದ್ದಾನೆ. ಆದರೆ ಎಚ್ಚೆತ್ತ ಪ್ರಯಾಣಿಕ ಮಾತ್ರ ಅವನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆತ ಕಿಟಕಿಯಲ್ಲಿ ನೇತಾಡುವಂತೆ ಮಾಡಿದ್ದಾರೆ.

ಕೊನೆಗೆ ಮಾತ್ರ ಯಾಕೆ ಬೇಕಿತ್ತು ಈ ಕೆಲಸ ಅನ್ನೋ ರೀತಿ ಆಗಿಬಿಟ್ಟಿದೆ ಕಳ್ಳನಿಗೆ. ಯಾಕಂದ್ರೆ, ರೈಲು ಚಳಿಸಿದರು ಆತನ ಕೈ ಮಾತ್ರ ಬಿಟ್ಟಿಲ್ಲ. ಆತ ಕೈ ಬಿಡುವಂತೆ ಎಷ್ಟು ಮನವಿ ಮಾಡಿದರೂ, ತಪ್ಪು ಮಾಡಿದ್ದಕ್ಕೆ ಶಿಕ್ಷೆ ಅನುಭವಿಸು ಅನ್ನುತ್ತಾ ಅವರು ಮಾತ್ರ ಕೈ ಬಿಟ್ಟಿಲ್ಲ. ಕಳ್ಳ ಜೋಕಾಲಿಯಲ್ಲಿ ನೇತಾಡಿದಂತೆ ಉದ್ದಕ್ಕೆ ನೇತಾಡಿದ್ದಾನೆ.

10 ಕಿ.ಮೀವರೆಗೂ ಹೋದ ಮೇಲೆ ಪ್ರಯಾಣಿಕರು ಆತನ ಕೈ ಬಿಟ್ಟಿದ್ದಾರೆ. ಕೈ ಬಿಟ್ಟ ಕೂಡಲೇ ಕಳ್ಳ ದಿಕ್ಕಾಪಾಲಾಗಿ ಓಡಿಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ಯಾವುದಾದರೂ ಕ್ರಮ ಕೈಗೊಂಡಿದ್ದಾರೆಯೋ ಇಲ್ಲವೋ ಎಂಬುವುದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಒಟ್ಟಾರೆ, ಇವನಿಗೆ ಮಾತ್ರ ಸಾಕಪ್ಪ ಸಾಕು ಎಂದೆನಿಸದೆ ಇರದು…

Leave A Reply

Your email address will not be published.