ರೇಷನ್ ಕಾರ್ಡ್ ರದ್ದು ಮಾಡಲು ಈ ಬಾರಿ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಪಡಿತರ ಸೌಲಭ್ಯ ಪಡೆದಿರುವ 70 ಲಕ್ಷ ಕಾರ್ಡುದಾರರನ್ನು ಈಗ ಕೇಂದ್ರ ಶಂಕಿತ ಪಟ್ಟಿಗೆ ಸೇರಿಸಿದೆ. ಇವರೆಲ್ಲ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಸ್ಎಸ್ಎ)( NSSA) ಅಡಿಯಲ್ಲಿ ಪಡಿತರ ಸೌಲಭ್ಯ ಪಡೆದಿರುವವರು. ಕಳೆದ ಕೆಲವು ದಿನಗಳಲ್ಲಿ ಪಡಿತರ ಚೀಟಿದಾರರ ವಿರುದ್ಧ ಕ್ರಮ ಕೈಗೊಂಡ ನಂತರ ಸುಮಾರು, 2.5 ಕೋಟಿ ಪಡಿತರ ಚೀಟಿಗಳನ್ನು ಸರ್ಕಾರ ರದ್ದು ಮಾಡಲಾಗಿದೆ.

ಇತ್ತೀಚೆಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಈ ಮಾಹಿತಿ ನೀಡಿದ್ದಾರೆ. 70 ಲಕ್ಷಗಳಲ್ಲಿ ಅರ್ಧ ನಿಯಮಗಳನ್ನೂ ಸರಿಯಾಗಿ ಪಾಲಿಸಿದ್ದರೆ ಅವುಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಆಹಾರ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.

2 ಕೋಟಿ 41 ಲಕ್ಷ ಅನರ್ಹ, ಹಾಗೂ ನಕಲಿ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದೆ. ಇದು 2017 ರಿಂದ 2021 ರ ಒಳಗಿನ ಪಡಿತರ ಚೀಟಿಗಳು ಇದರಲ್ಲಿ ಒಳಗೊಂಡಿದೆ. ಅಷ್ಟು ಮಾತ್ರವಲ್ಲದೇ, ಬಿಹಾರ ಒಂದರಲ್ಲೇ 7.10 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಷ್ಟು ಮಾತ್ರವಲ್ಲದೇ, ಉತ್ತರ ಪ್ರದೇಶದಲ್ಲಿ 1.42 ಕೋಟಿ ಪಡಿತರ ಕಾರ್ಡ್‌ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ 21.03 ಲಕ್ಷ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ.

ಈ ಡೇಟಾವನ್ನು ಪರಿಶೀಲನೆಗಾಗಿ ಕೇಂದ್ರವು ರಾಜ್ಯಗಳಿಗೆ ಕಳುಹಿಸಿದೆ. ಪಟ್ಟಿಯಲ್ಲಿ ಸೇರಿಸಲಾದ ಹೆಸರುಗಳು NFSA ಅಡಿಯಲ್ಲಿ ಪಡಿತರವನ್ನು ಪಡೆಯಲು ಅರ್ಹವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಹೇಳಲಾಗಿದೆ. ಹೀಗಾಗಿ ಅಕ್ರಮ ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ದೊಡ್ಡ ಶಾಕ್ ನೀಡಿದೆ.

Leave A Reply

Your email address will not be published.