SBI ನಿಂದ ಸಾಲ ಪಡೆದವರಿಗೆ ಬಿಗ್ ಶಾಕ್!

ದೇಶದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸಾಲದ ಬಡ್ಡಿ ದರಗಳನ್ನು ಬುಧವಾರ ಹೆಚ್ಚಿಸಿದೆ. ಇದರಿಂದ ಸಾಲದ ಇಎಂಐ ಕಂತುಗಳು ದುಬಾರಿಯಾಗುವ ಸಾಧ್ಯತೆಗಳಿವೆ. ತನ್ನ ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ (ಬಿಪಿಎಲ್‌ಆರ್) ಅನ್ನು 70 ಬೇಸಿಸ್ ಪಾಯಿಂಟ್‌ಗಳಷ್ಟು (ಅಥವಾ ಶೇ 0.7) ಅಂದರೆ ಶೇ 13.45 ಕ್ಕೆ ಹೆಚ್ಚಿಸಿದೆ.

ಸೆಪ್ಟೆಂಬರ್ 15, 2022 ರಿಂದ ಜಾರಿಗೆ ಬರುವಂತೆ ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ದರವನ್ನು (ಬಿಪಿಎಲ್‌ಆರ್) ವಾರ್ಷಿಕವಾಗಿ ಶೇಕಡಾ 13.45 ರಂತೆ ಪರಿಷ್ಕರಿಸಲಾಗಿದೆ ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ. ಈ ಘೋಷಣೆಯು ಬಿಪಿಎಲ್‌ಆರ್ ಗೆ ಲಿಂಕ್ ಮಾಡಲಾದ ಸಾಲ ಮರುಪಾವತಿಯನ್ನು ದುಬಾರಿಯಾಗಿಸುತ್ತದೆ. ಪ್ರಸ್ತುತ ಬಿಪಿಎಲ್‌ಆರ್ ದರವು ಶೇಕಡಾ 12.75 ರಷ್ಟಿದೆ. ಇದನ್ನು ಕಳೆದ ಜೂನ್ ನಲ್ಲಿ ಪರಿಷ್ಕರಿಸಲಾಗಿತ್ತು.

ಗುರುವಾರದಿಂದ ಜಾರಿಗೆ ಬರುವಂತೆ ಬ್ಯಾಂಕ್ ಮೂಲ ದರವನ್ನು ಶೇಕಡಾ 8.7 ಕ್ಕೆ ಹೆಚ್ಚಿಸಿದೆ. ಮೂಲ ದರದಲ್ಲಿ ಸಾಲ ಪಡೆದ ಸಾಲಗಾರರ ಇಎಂಐ ಮೊತ್ತವು ಹೆಚ್ಚಾಗುತ್ತದೆ. ಈಗ ಹೆಚ್ಚಿನ ಬ್ಯಾಂಕುಗಳು ಬಾಹ್ಯ ಬೆಂಚ್ ಮಾರ್ಕ್ ಆಧಾರಿತ ಸಾಲ ದರ (ಇಬಿಎಲ್‌ಆರ್) ಅಥವಾ ರೆಪೊ-ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ಮೇಲೆ ಸಾಲಗಳನ್ನು ಒದಗಿಸುತ್ತವೆ. ಬ್ಯಾಂಕ್ ಬಿಪಿಎಲ್‌ಆರ್ ಮತ್ತು ಮೂಲ ದರ ಎರಡನ್ನೂ ತ್ರೈಮಾಸಿಕ ಆಧಾರದ ಮೇಲೆ ಪರಿಷ್ಕರಿಸುತ್ತದೆ. ಎಸ್ಬಿಐನ ಸಾಲದ ದರ ಪರಿಷ್ಕರಣೆಯನ್ನು ಮುಂದಿನ ದಿನಗಳಲ್ಲಿ ಇತರ ಬ್ಯಾಂಕುಗಳು ಅನುಸರಿಸುವ ಸಾಧ್ಯತೆಯಿದ್ದು, ಎಲ್ಲಾ ಬ್ಯಾಂಕ್ ಸಾಲವೂ ದುಬಾರಿಯಾಗುವ ಸಾಧ್ಯತೆಯೇ ಹೆಚ್ಚಿದೆ.

Leave A Reply

Your email address will not be published.