ಕಂಠ ಪೂರ್ತಿ ಕುಡಿದು ಶಾಲೆಯೊಳಗೆ ನುಗ್ಗಿದ ಕುಡುಕ ಮಾಡಿದ್ದೇನು ಗೊತ್ತಾ?

ಮದ್ಯ ಹೊಟ್ಟೆ ಒಳಗೆ ನುಸುಳುತ್ತಿದ್ದಂತೆ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೇ ಮರೆಯುತ್ತಾನೆ. ಎಲ್ಲಿದ್ದೇನೆ ಹೇಗಿದ್ದೇನೆ ಎಂಬುದನ್ನೇ ಮರೆತು ತನ್ನದೇ ಪ್ರಪಂಚದಲ್ಲಿ ತೇಲುತ್ತಾನೆ. ಅದೇ ರೀತಿ ಇಲ್ಲೊಬ್ಬ ಕುಡುಕ ಕಂಠ ಪೂರ್ತಿ ಕುಡಿದು ನುಗ್ಗಿದ್ದು ಮಾತ್ರ ಶಾಲೆಗೆ.

 

ಹೌದು. ಸರಕಾರಿ ಶಾಲೆಗೆ ನುಗ್ಗಿದ್ದಲ್ಲದೆ ತರಗತಿಯೊಳಗೆ ಹೋಗಿ ಶಿಕ್ಷಕಿ ಚಿತ್ರಾದೇವಿ ಮೇಲೆ ಕೈ ಮಾಡಿರುವ ಘಟನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಚಿತ್ರವೇಲ್ ಎಂದು ಗುರುತಿಸಲಾಗಿದೆ.

ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕುಡುಕ ಶಿಕ್ಷಕಿ ಪಾಠ ಮಾಡುತ್ತಿದ್ದ ವೇಳೆ ತರಗತಿಗೆ ನುಗ್ಗಿದ್ದಾನೆ. ನಂತರ ಏಕಾಏಕಿ ವಿದ್ಯಾರ್ಥಿಗಳ ಎದುರೇ ನಿಂದಿಸಲು ಆರಂಭಿಸಿದ್ದಲ್ಲದೇ, ಎಲ್ಲರ ಮುಂದೆ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ಶಿಕ್ಷಕಿ ಚಿತ್ರವೇಲ್‍ನನ್ನು ತರಗತಿಯಿಂದ ಹೊರ ಹೋಗುವಂತೆ ಹೇಳಿದ್ದಾರೆ.

ಘಟನೆಯ ನಂತರ ಚಿತ್ರವೇಲ್ ವಿರುದ್ಧ ಸಮೀಪದ ಪೊಲೀಸ್ ಠಾಣೆಯಲ್ಲಿ ಚಿತ್ರಾದೇವಿ ಅವರು ದೂರು ದಾಖಲಿಸಿದ್ದು, ಪೊಲೀಸರು ನಾಲ್ಕು ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಒಟ್ಟಾರೆ, ಈ ಕುಡುಕರ ಸಹವಾಸ ಶಾಲೆವರೆಗೂ ಬಂದೆ ಬಿಟ್ಟಿತು..

Leave A Reply

Your email address will not be published.