ಅಂತರಗಂಗೆ ತಪ್ಪಲಲ್ಲಿ ಮೈಮರೆತು ಲವ್ವಿ ಡವ್ವಿಯಲ್ಲಿ ಮುಳುಗಿದ ಕಾಲೇಜು ಸ್ಟುಡೆಂಟ್ಸ್ | ಇದಕ್ಕೆ ಬ್ರೇಕ್ ಹಾಕಲು ಗ್ರಾಮಸ್ಥರ ಒತ್ತಾಯ

ಬೆಂಗಳೂರು ನಗರಿಗರನ್ನು ಆಕರ್ಷಿಸುವ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಂತೆ (Nandi Hills) ಕೋಲಾರ ಜಿಲ್ಲೆಯಲ್ಲೂ ಕಾಶಿ ವಿಶ್ವೇಶ್ವರ ಸಹಿತ ನಂದಿಯ ಬೆಟ್ಟವಿದೆ. ಅದೇ ದಕ್ಷಿಣಕಾಶಿ ಅಂತರಗಂಗೆ ಬೆಟ್ಟ. ವರ್ಷದ 365 ದಿನಗಳು ಬಸವನ ಬಾಯಿಂದ ಬರುವ ನೀರು ಇಲ್ಲಿನ ವಿಶೇಷ. ಬಸವನ ಬಾಯಿಂದ ಬರುವ ನೀರು ಸಾಕ್ಷಾತ್​ ಕಾಶಿಯಿಂದಲೇ ಇಲ್ಲಿಗೆ ಹರಿದು ಬರುತ್ತದೆ ಅನ್ನೋ ಪ್ರತೀತಿ ಹಾಗೂ ನಂಬಿಕೆ ಭಕ್ತರಲ್ಲಿದೆ. ಹಾಗಾಗಿಯೇ ಕೋಲಾರದ ದಕ್ಷಿಣ ಕಾಶಿ ಎಂದೇ ಕರೆಯುವ ಅಂತರ ಗಂಗೆಗೆ ನಿತ್ಯ ನೂರಾರು ಜನ ಪ್ರವಾಸಿಗರು ಬರುತ್ತಾರೆ.

ಇಂತಿಪ್ಪ, ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಯುವ ಪ್ರೇಮಿಗಳು ಮೈಮರೆಯುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖೆಯವರು ಕಡಿವಾಣ ಹಾಕುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.

ಅಂತರಗಂಗೆ ತಪ್ಪಲಿನಲ್ಲಿ ಸಣ್ಣ-ಸಣ್ಣ ಜಲಪಾತಗಳಿವೆ. ಇವುಗಳನ್ನು ನೋಡಲು ಬರುವ ಪ್ರೇಮಿಗಳ ಸಂಖ್ಯೆ ಹೆಚ್ಚಳವಾಗಿದೆ. ಹೌದು, ಕಾಲೇಜಿಗೆ ಬಂಕ್ ಹೊಡೆದು ಪಾರ್ಕ್, ಸಿನಿಮಾ ಅಂತ ಸುತ್ತುತ್ತಿರುವ ಪ್ರೇಮಿಗಳ ಪಾಲಿಗೆ ಕೋಲಾರದ ಅಂತರಗಂಗೆ ತಪ್ಪಲು ನಿಜಕ್ಕೂ ಹಾಟ್ ಸ್ಪಾಟ್ ಆಗಿದೆ ಎಂದೇ ಹೇಳಬಹುದು. ಇಲ್ಲಿಗೆ ಬರುವ ಪ್ರೇಮಿಗಳು ನೀರಿನಲ್ಲಿ ಆಟವಾಡಿ ನಂತರ ಅದೇ ಸ್ಥಳದಲ್ಲಿ ಮೈಮರೆಯುತ್ತಿರುವ ದೃಶ್ಯಗಳು ಅಲ್ಲಿಗೆ ಬರುವ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ.

ಇಲ್ಲಿನ ಗಿಡ ಮರ, ಪೊದೆ, ಬೆಟ್ಟ ಗುಡ್ಡಗಳ ಮಧ್ಯೆ ಯುವಕ ಯುವತಿಯರು ಪರಸ್ಪರ ಚುಂಬಿಸುವ, ಮುದ್ದಾಡುವ ದೃಶ್ಯಗಳು ಕಂಡು ಬರುತ್ತಿವೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಈ ದೃಶ್ಯಗಳು ಮುಜುಗರವನ್ನುಂಟು ಮಾಡುತ್ತಿವೆ. ಅಷ್ಟೊಂದು ಸುರಕ್ಷಿತವಲ್ಲದ ಅಂತರಗಂಗೆ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಪ್ರೇಮಿಗಳ ಲವ್ವ ಡವ್ವಿ ಪ್ರವಾಸಿಗರಿಗೆ ಇರುಸು ತಂದೊಡ್ಡುತ್ತಿದೆ.

ಈ ಆಟೋಟೋಪಕ್ಕೆ ಸಂಬಂಧಪಟ್ಟ ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯವರು ಕಡಿವಾಣ ಹಾಕಬೇಕಿದೆ ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

Leave A Reply

Your email address will not be published.