ನಿಮಗೆ ಹೆಚ್ಚಾಗಿ ಈ ರೀತಿಯ ಕನಸು ಬೀಳುತ್ತಾ? | ಹಾಗಾದ್ರೆ ಯಾವುದರ ಸಂಕೇತವಿದು?

ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ, ಪಿತೃ ಪಕ್ಷದಲ್ಲಿ ತಮ್ಮ ಪೂರ್ವಜರ ಆತ್ಮ ಶಾಂತಿಗಾಗಿ ಹಾಗೂ ಅವರ ಆಶೀರ್ವಾದ ಪಡೆದುಕೊಳ್ಳಲು ಜನರು ಶ್ರಾದ್ಧ, ತರ್ಪಣ ಹಾಗೂ ಪಿಂಡದಾನ ಕ್ರಿಯಾಕರ್ಮಗಳನ್ನು ನಡೆಸುತ್ತಾರೆ. ನಂಬಿಕೆಗಳ ಪ್ರಕಾರ ಪಿತೃಪಕ್ಷದ ಅವಧಿಯಲ್ಲಿ ಯಾವುದೇ ರೀತಿಯ ಶುಭಕಾರ್ಯಗಳು, ಪೂಜೆಗಳನ್ನು ಹಾಗೂ ಅನುಷ್ಠಾನಗಳನ್ನು ನೆರವೇರಿಸಲಾಗುವುದಿಲ್ಲ.

 

ಏಕೆಂದರೆ ಈ 15 ದಿನಗಳ ಅವಧಿ ಕೇವಲ ಪಿತೃರಿಗಾಗಿ ಸಮರ್ಪಿತವಾಗಿದೆ. ಈ ಅವಧಿಯಲ್ಲಿ ಒಂದು ವೇಳೆ ನೀವು ದಾನ ಮಾಡಿದರೆ ಅಥವಾ ನಿರ್ಗತಿಕರಿಗೆ ಆಹಾರ ನೀಡಿದರೆ, ಅದರ ಪುಣ್ಯ ನಿಮ್ಮನ್ನಗಲಿದೆ ಪೂರ್ವಜರಿಗೆ ಸಿಗುತ್ತದೆ ಎಂಬ ವಾಡಿಕೆ ಇದೆ.

ಈ ಅವಧಿಯಲ್ಲಿ ಒಂದು ವೇಳೆ ನಿಮ್ಮನ್ನಗಲಿದ ಪೂರ್ವಜರು ನಿಮ್ಮ ಕನಸಿನಲ್ಲಿ ಕಂಡರೆ, ಅದು ಹಲವು ಸಂಗತಿಗಳತ್ತ ಸಂಕೇತ ನೀಡುತ್ತದೆ.
ನಿಮ್ಮನ್ನಗಲಿದ ಕುಟುಂಬದ ಸದಸ್ಯರೊಂದಿಗೆ ನೀವು ತುಂಬಾ ಗಾಢವಾದ ಬಾಂಧವ್ಯವನ್ನು ಹೊಂದಿರುವುದು ಹಲವು ಬಾರಿ ಸಂಭವಿಸುತ್ತದೆ. ಅದು ನಿಮ್ಮ ಕನಸಿನಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಗರುಣ ಪುರಾಣದ ಪ್ರಕಾರ, ಪಿತೃ ಪಕ್ಷದ ಅವಧಿಯಲ್ಲಿ ಕನಸಿನಲ್ಲಿ ಕುಟುಂಬದ ಸದಸ್ಯರು ಕಾಣಿಸಿಕೊಳ್ಳುವುದು ವಿಶೇಷ ರೀತಿಯ ಸಂಕೇತ ನೀಡುತ್ತದೆ. ಆ ಪೂರ್ವಜರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆ ಎಂಬುದರ ಸೂಚಕ ಇದಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆಯೋ ಅಥವಾ ಇಲ್ಲವೋ? ಸ್ವಪ್ನಶಾಸ್ತ್ರದಲ್ಲಿ ಇಂತಹುದೇ ಕೆಲ ಕನಸುಗಳ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕನಸಿನಲ್ಲಿ ಅಗಲಿದ ಕುಟುಂಬ ಸದಸ್ಯ ಅನಾರೋಗ್ಯದಿಂದ ಬಳಲುವುದು ಕಂಡರೆ ಏನರ್ಥ?
ಒಂದು ವೇಳೆ ಕುಟುಂಬ ಸದಸ್ಯ ಆರೋಗ್ಯವಂತರಾಗಿ ಮತ್ತು ತನ್ನ ಪೂರ್ಣ ಆಯಸ್ಸನ್ನು ಮುಗಿಸಿ ಸ್ವರ್ಗವಾಸಿಯಾಗಿದ್ದು ಮತ್ತು ಕನಸಿನಲ್ಲಿ ಅವರು ಅನಾರೋಗ್ಯದಿಂದ ಬಳಲುವುದು ಕಂಡರೆ. ಅವರ ಆತ್ಮಕ್ಕೆ ಶಾಂತಿ ಲಭಿಸಿಲ್ಲ ಎಂಬುದು ಇದರ ಅರ್ಥ. ತಮ್ಮ ಆತ್ಮದ ಶಾಂತಿಗಾಗಿ ಏನನ್ನಾದರೂ ಮಾಡಲು ಪಿತೃರು ಸೂಚಿಸುತ್ತಿದ್ದಾರೆ ಎಂಬುದು ಇದರ ಅರ್ಥ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಕುಲಪುರೋಹಿತರ ಹಾಗೂ ಮನೆಯ ಹಿರಿಯರ ಸಲಹೆಯನ್ನು ಪಡೆದುಕೊಂಡು ತರ್ಪಣ, ಶ್ರಾದ್ಧ ಅಥವಾ ದಾನ ಇತ್ಯಾದಿಗಳನ್ನು ನಡೆಸಬೇಕು.

ಅಗಲಿದ ವ್ಯಕ್ತಿ ಆರೋಗ್ಯವಂತನಾಗಿ ಕನಸಿನಲ್ಲಿ ಕಂಡರೆ ಏನರ್ಥ?
ಕನಸಿನಲ್ಲಿ ನಿಮ್ಮನ್ನಗಲಿದ ವ್ಯಕ್ತಿ ಆರೋಗ್ಯವಂತ ಸ್ಥಿತಿಯಲ್ಲಿ ಕಂಡರೆ, ಅವರ ಆತ್ಮಕ್ಕೆ ಶಾಂತಿ ಲಭಿಸಿದೆ ಎಂಬುದು ಅದರ ಅರ್ಥ ಮತ್ತು ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದರ್ಥ. ಹೀಗಿರುವಾಗ ಪದೇ ಪದೇ ಅವರನ್ನು ನೆನಪಿಸಿಕೊಂಡು ನೀವು ಅವರಿಗೆ ತೊಂದರೆ ನೀಡಬಾರದು ಎಂಬುದನ್ನು ಇದು ಸಂಕೇತಿಸುತ್ತದೆ.

ಕನಸಿನಲ್ಲಿ ಜೀವಿತ ವ್ಯಕ್ತಿ ಮೃತಪಟ್ಟಿರುವಂತೆ ಕಂಡರೆ ಏನರ್ಥ?
ಯಾವುದೇ ಓರ್ವ ವ್ಯಕ್ತಿಯನ್ನು ನೀವು ಕನಸಿನಲ್ಲಿ ಮೃತಪಟ್ಟಂತೆ ಕಂಡರೆ, ಸ್ವಪ್ನ ಶಾಸ್ತ್ರದ ಪ್ರಕಾರ ಆ ವ್ಯಕ್ತಿಯ ಆಯಸ್ಸು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಜೋತಿಷ್ಯ ಪಂಡಿತರ ಪ್ರಕಾರ, ಯಾವುದೇ ಓರ್ವ ಮೃತ ವ್ಯಕ್ತಿಯನ್ನು ನೆನಪಿಸಿಕೊಳ್ಳುವುದು ಹಾಗೂ ಅವರ ಕುರಿತು ಚರ್ಚೆ ನಡೆಸುವುದು ನಿಮಗೆ ನೀವು ಹಾಗೂ ನಿಮ್ಮನ್ನಗಲಿದ ವ್ಯಕ್ತಿಗೆ ಕಷ್ಟ ನೀಡಿದಂತಾಗುತ್ತದೆ. ಹೀಗಿರುವಾಗ ನಿಮ್ಮನ್ನಗಲಿದವರ ಕುರಿತು ಹೆಚ್ಚಿನ ಧ್ಯಾನ ಮಾಡುವ ಅವಶ್ಯಕತೆ ಇಲ್ಲ.

Leave A Reply

Your email address will not be published.