ಶ್ಯಾಮ್ ಸುದರ್ಶನ್ ಹೊಸಮೂಲೆ ಸಂಪಾದಕತ್ವದ ಕಹಳೆ ನ್ಯೂಸ್ ವಿರುದ್ಧ ಎಸ್.ಡಿ.ಪಿ.ಐ ಮುಖಂಡ ಆಶ್ರಫ್ ಕೆ.ಸಿ ಆಕ್ರೋಶ!!
ಕರಾವಳಿಯಲ್ಲಿ ಹಲವು ಪ್ರಮುಖ ಸುದ್ದಿಗಳನ್ನು ಭಿತ್ತರಿಸುತ್ತಿರುವ ಶ್ಯಾಮ್ ಸುದರ್ಶನ್ ಹೊಸಮೂಲೆ ಇವರ ಪ್ರಧಾನ ಸಂಪಾದಕತ್ವದಲ್ಲಿ ಪುತ್ತೂರು ಸೇರಿದಂತೆ ಕರಾವಳಿಯಾದ್ಯಂತ ವರದಿಯನ್ನು ಭಿತ್ತರಿಸುತ್ತಿರುವ ಕಹಳೆ ನ್ಯೂಸ್ ಸಂಸ್ಥೆಯ ವಿರುದ್ಧ ಎಸ್ ಡಿ ಪಿ ಐ ಮುಖಂಡ ಆಶ್ರಫ್ ಕೆ ಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ ಡಿ ಪಿ ಐ ಸಭೆಯೊಂದರಲ್ಲಿ ಆಶ್ರಫ್ ಕೆಸಿ ಮಾತನಾಡಿ ಪುತ್ತೂರಿನ ಮಾಧ್ಯಮ ಸಂಸ್ಥೆ ಕಹಳೆ ನ್ಯೂಸ್ ಸುಳ್ಳು ಸುದ್ದಿಗಳನ್ನು ಹಬ್ಬುತ್ತಿದೆ. ಕೋಮು ಗಲಾಟೆಯನ್ನು ಸೃಷ್ಟಿಸುವುದೇ ಮಾಧ್ಯಮ ಸಂಸ್ಥೆಗಳು. ಶಾಖೆಯಲ್ಲಿ ಪತ್ರಿಕೋದ್ಯಮ ಕಲಿತವನು ಮತ್ತೆ ಎಷ್ಟು ಬರೆದರೂ ಅಷ್ಟೇ.. ಸುಳ್ಳೇ ಬರೀತಾನೆ… ಮೊನ್ನೆ ರಿಯಾಜ್ ಫರಂಗಿಪೇಟೆ ಮನೆಗೆ ದಾಳಿ ನಡೆದಾಗ ಪುತ್ತೂರಿನ ಭಜರಂಗದಳ ನಾಯಕ ಮುರಳಿ ಕೃಷ್ಣ ಹಸಂತಡ್ಕ ಇಲ್ಲಿನ ಪೊಲೀಸರು ಎನ್ ಐ ಎ ತಂಡಕ್ಕೆ ರಕ್ಷಣೆ ನೀಡಬೇಕು ಎಂದು ಹೇಳಿದರು.
ಮೊನ್ನೆ ತಾನೇ ಪುತ್ತೂರಿನಲ್ಲಿ ಪ್ರವೀಣ್ ಕೊಲೆ ಪ್ರಕರಣದ ಬಗ್ಗೆ ಪೋಲೀಸರ ಮೇಲೆ ನಂಬಿಕೆ ಇಲ್ಲ ತನಿಖೆ ಎನ್ ಐ ಎ ತಂಡ ಮಾಡಲಿ ಎಂದು ಹೇಳ್ತಾರೆ.. ಎಂಥ ತಲೆ ಇಲ್ಲದ ಜನಗಳೋ ಎಂದು ದೇವರಿಗೆ ಗೊತ್ತು.
ಕಮ್ಯುನಿಟಿ ಹಾಲ್ ನಲ್ಲಿ ಸಮಾವೇಶ ಮಾಡ್ತಾರೆ ಅಂತ ಹೇಳಿದ್ರು.. ಬಹುತೇಕ ಎಲ್ಲಾ ಹಾಲ್ ನಲ್ಲಿಯೂ ಸಭೆ ಸಮಾವೇಶಗಳನ್ನು ಮಾಡಿದ್ದೇವೆ, ನಿಮಗೆ ಗೊತ್ತಿಲ್ಲ ಅಷ್ಟೇ.. ನೀವುಗಳು ಬಾವಿ ಒಳಗಿರುವ ಕಪ್ಪೆ ಅಷ್ಟೇ.. ಕಹಳೆ ನ್ಯೂಸ್ ಬಿಟ್ಟು ಬೇರೆಲ್ಲ ಪೇಪರ್, ಚಾನೆಲ್ಗಳನ್ನು ನೋಡಿ ನಿಮಗೆ ಗೊತ್ತಾಗುತ್ತೆ ಎಷ್ಟು ಕಡೆ ಎಸ್ ಡಿ ಪಿ ಐ ಸಮಾವೇಶ ಆಗುತ್ತೆ ಅಂತಾ.. ಇಂತಹ ಮಾಧ್ಯಮಗಳ ಮೇಲೆ ಪೊಲೀಸ್ ಹದ್ದಿನ ಕಣ್ಣು ಇಡಬೇಕು.. ಎನ್ ಐ ಎ ದಾಳಿ ಆಗಬೇಕು ಎಂದು ಕಹಳೆ ಮಾಧ್ಯಮದ ವಿರುದ್ಧ ಕಿಡಿಕಾರಿದ್ದಾರೆ.