Mangalore Airport : ಕಳೆದು ಹೋದ ವಸ್ತುಗಳನ್ನು ಮರಳಿ ನೀಡಲು ವಿಶೇಷ ವ್ಯವಸ್ಥೆ !!!

ಸಾಮಾನ್ಯವಾಗಿ ನಾಗರಿಕರು ಪ್ರಯಾಣಿಸುವಾಗ ವಸ್ತುಗಳನ್ನು ಕಳೆದುಕೊಂಡರೆ, ಜಾಹೀರಾತು ಹಾಕಿಯೋ ಅಥವಾ ಕಳೆದುಕೊಂಡ ಬಸ್ ಇಲ್ಲವೇ ಇತರೆ ವಾಹನಗಳ ಮಾಲೀಕರಿಗೆ ದೂರು ನೀಡಿ ಪಡೆಯುವುದು ವಾಡಿಕೆ. ಆದರೆ ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಹೋದ ವಸ್ತುಗಳನ್ನು ಮರಳಿ ಕೊಡುವ ವಿಶೇಷ ವ್ಯವಸ್ಥೆ ರೂಪಿಸಲಾಗಿದೆ.

ಕಳೆದುಹೋದರೆ ಅದನ್ನು ಮರಳಿ ಪಡೆಯಲು ಹರಸಾಹಸ ಮಾಡುವುದು ತ್ರಾಸದಾಯಕವಾದರೂ ವಸ್ತುಗಳನ್ನು ಮರಳಿ ಪಡೆಯಲು ಶ್ರಮ ವಹಿಸಿ ಹುಡುಕಾಟ ನಡೆಸುತ್ತಾರೆ. ಬಸ್ ಇಲ್ಲವೇ ಪಟ್ಟಣಗಳಲ್ಲಿಯಾದರೆ ಸಂಬಂಧಿಸಿದ ವ್ಯಕ್ತಿಯನ್ನು ಸಂಪರ್ಕಿಸಿ ವಸ್ತುಗಳನ್ನು ಪಡೆಯಬಹುದು. ಆದರೆ, ವಿಮಾನ ನಿಲ್ದಾಣದಲ್ಲಿ ಏನಾದರೂ ಕಳೆದುಕೊಂಡರೆ ಏನು ಮಾಡುವುದೆಂದು ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ, ಇನ್ನು ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡ ವಸ್ತುಗಳು ಆಧಾರ್ ಕಾರ್ಡ್‌ಗಳಿಂದ ಹಿಡಿದು ಸೊಳ್ಳೆ ಬ್ಯಾಟ್‌ಗಳವರೆಗೆ ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿದರೆ, ಅದನ್ನು ಮರಳಿಸುವ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ಅನೇಕ ಅಮೂಲ್ಯವಾದ ವಸ್ತುಗಳನ್ನು ವಾರಸುದಾರರಿಗೆ ತಲುಪಿಸಲಾಗಿದೆ. ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವ ಪ್ರತಿಯೊಬ್ಬರು ಅದನ್ನು ಮರಳಿ ಪಡೆಯಲು ಬಹಳಷ್ಟು ಶ್ರಮ ಪಡುತ್ತಾರೆ. ಇದಕ್ಕಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಹೋದ ವಸ್ತುಗಳನ್ನು ಮರಳಿ ಕೊಡುವ ವ್ಯವಸ್ಥೆ ಮಾಡಲಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದುಹೋದ ವಸ್ತುಗಳನ್ನು ಹಿಂದಿರುಗಿಸುವ ಸಮಯದಲ್ಲಿ ವಸ್ತುವಿನ ನಿಜವಾದ ವಾರಸುದಾರರು ಯಾರು ಎಂಬುದನ್ನು ಖಚಿತ ಪಡಿಸಲು ಟರ್ಮಿನಲ್ ಮ್ಯಾನೇಜರ್ ಕಚೇರಿ ನಿಗಾವಹಿಸುತ್ತದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಂಡು ಬರುವ ಎಲ್ಲ ವಸ್ತುಗಳನ್ನು ಟರ್ಮಿನಲ್ ಮ್ಯಾನೇಜರ್ ಕಚೇರಿಯಲ್ಲಿ ಠೇವಣಿ ಮಾಡಲಾಗುತ್ತದೆ ಮತ್ತು ರಿಜಿಸ್ಟರ್‌ನಲ್ಲಿ ನಮೂದಿಸಲಾಗುತ್ತದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿ ತಿಂಗಳು ವಿವಿಧ ಬಗೆಯ ಸರಾಸರಿ 150 ವಸ್ತುಗಳು ಪತ್ತೆಯಾಗುತ್ತಿದೆ. ವಸ್ತುಗಳನ್ನು ಮರಳಿ ಪಡೆಯಲು ಕಳೆದುಕೊಂಡ ವ್ಯಕ್ತಿ, ಇಲ್ಲವೇ ಅವರ ಪ್ರತಿನಿಧಿಗಳು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡ ವ್ಯಕ್ತಿಯು ಕಚೇರಿ ಸಮಯದಲ್ಲಿ ಟರ್ಮಿನಲ್ ಮ್ಯಾನೇಜರ್‌ನ ಕಚೇರಿಯನ್ನು ಸಂಪರ್ಕಿಸಿ ವಸ್ತುಗಳನ್ನು ಪಡೆಯಬಹುದು.

ಈ ಹಿಂದೆ ಸೊಳ್ಳೆ ಬ್ಯಾಟ್, ಚಪ್ಪಲಿಗಳು, ಕುತ್ತಿಗೆಯ ದಿಂಬುಗಳು, ಸೆಲ್ ಫೋನ್ ಗಳನ್ನು ಮತ್ತು ಅಮೂಲ್ಯವಾದ ಚಿನ್ನದ ಆಭರಣಗಳನ್ನು ಬಿಟ್ಟು ಹೋದ ಪ್ರಕರಣಗಳು ಇದ್ದು, ಅದರ ವಾರಸುದಾರರು ಬಂದು ಮರಳಿ ಪಡೆದುಕೊಂಡದ್ದು ಕೂಡ ಇದೆ.

Leave A Reply

Your email address will not be published.