ತಿಂಗಳಾಡಿ : ಅಂಗಡಿಗೆ ಬಂದ ಹಿಂದೂ ಯುವತಿಗೆ ಕಿರುಕುಳ ಆರೋಪ | ಆರೋಪಿತ ಬದ್ರುದ್ದೀನ್ ಪರಾರಿ

ಪುತ್ತೂರು: ತಿಂಗಳಾಡಿಯಲ್ಲಿ ಅಂಗಡಿಗೆ ಸಾಮಾನು ಖರೀದಿಸಲೆಂದು ಬಂದ ಹಿಂದೂ ಮಹಿಳೆಯೋರ್ವಳಿಗೆ ಅಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕನೋರ್ವ, ಲೈಂಗಿಕ ಕಿರುಕುಳ ನೀಡಿದ ಘಟನೆ‌ ನಡೆದಿದೆ. ಈ ನೀಚ ಕೃತ್ಯ ಅಂಗಡಿ ಮಾಲಕನಿಲ್ಲದ ಸಂದರ್ಭದಲ್ಲಿ ನಡೆದಿದೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಸೆ.14ರಂದು ಅಂದರೆ ಇಂದು ಸರ್ವೆ ನೇರೋಳ್ತಡ್ಕದ ಮಹಿಳೆಯೋರ್ವರು ಸಂಜೆ ಸಮಯದಲ್ಲಿ ತಿಂಗಳಾಡಿಯಲ್ಲಿರುವ ಸುಪರ್ ಬಝಾರ್ ಅಂಗಡಿಗೆಂದು ಬಂದಿದ್ದರು. ಸಾಮಾನು ಖರೀದಿಸಲೆಂದು ಬಂದ ಮಹಿಳೆ, ಸಾಮಾನು ಖರೀದಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ, ಅಂಗಡಿ ಮಾಲಕ ಹಮೀದ್ ಪಟ್ಟೆ ಚಹಾ ಕುಡಿಯಲೆಂದು ಹೊರಗಡೆ ಹೋಗಿದ್ದರು.


Ad Widget

ಆವಾಗ ಅಂಗಡಿಯಲ್ಲಿದ್ದ ಸೊರಕೆ ಓಲೆಮುಂಡೋವು ಸಮೀಪದ ಬದ್ರುದ್ದೀನ್ ಯಾನೆ ಬದ್ರು ಎಂಬಾತ ಮಹಿಳೆಯ ಮೈಮೇಲೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದ. ಈ ವೇಳೆ ಮಹಿಳೆ ಬೊಬ್ಬೆ ಹೊಡೆದ ಪರಿಣಾಮ ಅಲ್ಲಿ ಜನ ಸೇರಿದ್ದಾರೆ. ಕೂಡಲೇ ಆರೋಪಿ ಬದ್ರುದ್ದೀನ್ ಯಾನೆ ಬದ್ರು ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಘಟನೆ ಸುದ್ದಿಯಾಗುತ್ತಲೇ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಹಿಂದೂ ಯುವಕರು ಸ್ಥಳದಲ್ಲಿ ಜಮಾಯಿಸಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು, ನೆರೆದವರು ಪೊಲೀಸರನ್ನು ಆಗ್ರಹಿಸಿದ್ದು ಸೆ.15ರ ಬೆಳಿಗ್ಗೆ 8 ಗಂಟೆಯೊಳಗೆ ಆರೋಪಿಯನ್ನು ಬಂಧಿಸದೇ ಇದ್ದಲ್ಲಿ ಉಗ್ರ ರೀತಿಯ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

error: Content is protected !!
Scroll to Top
%d bloggers like this: