ಕಡಬ : ಮಾವನಿಂದ ಅಪ್ರಾಪ್ತೆ ಸೊಸೆಯ ಅತ್ಯಾಚಾರ

Share the Article

ಕಡಬ: ವಿವಾಹಿತ ವ್ಯಕ್ತಿಯೋರ್ವ ಅಪ್ರಾಪ್ತೆ ಬಾಲಕಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ನಡೆದಿದೆ.

ಕೊಂಬಾರು ಗ್ರಾಮದ ಚೋಮ ಅಜಿಲ ಅವರ ಪುತ್ರ ರುಕ್ಮಯ್ಯ (31ವ) ಆರೋಪಿತ ವ್ಯಕ್ತಿ. ಈತ ತನ್ನ ಪತ್ನಿಯ ಅಣ್ಣನ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ್ದಾನೆ ಎಂದು ಆರೋಪ ವ್ಯಕ್ತವಾಗಿದ್ದು, ಕಡಬ ಪೊಲೀಸರು ಸಂತ್ರಸ್ಥೆ ದೂರಿನ ಮೇರೆಗೆ ಅರೋಪಿಯನ್ನು ಬಂದಿಸಿದ್ದಾರೆ. ರುಕ್ಮಯ್ಯ ಅಜಿಲ ಎಂಬವರಿಗೆ ಐದು ಮಕ್ಕಳಿದ್ದು, ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ರುಕಯ್ಯ ಅವರ ಮನೆಗೆ ಮೂರು ವರ್ಷಗಳ ಹಿಂದೆ ಈಕೆ ಬಂದಿದ್ದಳು ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ ಬಾಲಕಿಯೊಂದಿಗೆ ರುಕ್ಮಯ್ಯ ಬೆದರಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದು ಬಳಿಕದ ದಿನಗಳಲ್ಲಿ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾನೆ.

ಸೆಪ್ಟಂಬರ್9 ರಂದು ಕೊಂಬಾರು ಗ್ರಾಮದ ಆಶಾ ಕಾರ್ಯಕರ್ತೆ ಈಕೆಯನ್ನು ವಿಚಾರಿಸಿದಾಗ ಗರ್ಭಿಣಿಯಾಗಿರುವುದು ತಿಳಿದುಬಂದು ಪ್ರಕರಣ ಬೆಳಿಕಿಗೆ ಬಂದಿತು.

ಆರೋಪಿಯ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Leave A Reply