ಮಕ್ಕಳಿಂದ ಮೊಬೈಲನ್ನು ದೂರವಿಡಿ | ಈ ಅಪಘಾತ ಕೇಳಿದರೆ ಶಾಕ್ ಆಗ್ತೀರಾ!!

ಜಗತ್ತೇ ಮೊಬೈಲ್ ಮಯವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಮೊಬೈಲ್ ಬಳಕೆ ಹೆಚ್ಚುತ್ತಿದೆ. ಇದರಿಂದ ಎಷ್ಟು ಅನುಕೂಲಗಳಿದೆಯೋ ಅಷ್ಟೇ ಅನಾನುಕೂಲಗಳು ಇದೆ. ಇಂಥದ್ದೇ ಒಂದು ಘಟನೆ ನಡೆದಿದೆ.
ಮೊಬೈಲ್‌ ಪೋನ್‌ ಬ್ಯಾಟರಿ ಸ್ಟೋಟಗೊಂಡು 8 ತಿಂಗಳ
ಮಗು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಕೇವಲ ಆರು ದಿನಗಳ ಹಿಂದೆಯಷ್ಟೇ ಮೊಬೈಲ್‌ ಪೋನ್‌ ಖರೀದಿ ಮಾಡಲಾಗಿತ್ತು.ಮೊಬೈಲ್‌ ಪೋನ್‌ನ ಬ್ಯಾಟರಿ ಊದಿಕೊಂಡಿತ್ತು.ಮಗು ಇರುವ ರೂಂನಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕಿ ತಾಯಿ ಕುಸುಮಾ ಕಶ್ಯಪ್ ಹೊರಗೆ ಹೋಗಿದ್ದಳು.

ಈ ವೇಳೆಯಲ್ಲಿ ಕೋಣೆಯಲ್ಲಿ ದೊಡ್ಡ ಮಟ್ಟದ ಸದ್ದು ಕೇಳಿಬಂದಿತ್ತು. ತಾಯಿ ಓಡಿ ಹೋಗಿ ನೋಡುವಾಗ ಸ್ಪೋಟದಿಂದ ಮಗು ನಂದಿನಿ ಗಂಭೀರವಾಗಿ ಗಾಯಗೊಂಡಿದ್ದಳು.

ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಪೋಷಕರೇ ಗೊತ್ತಾಯಿತಲ್ಲ, ಮೊಬೈಲನ್ನು ಮಕ್ಕಳಿಂದ ಆದಷ್ಟು ದೂರವಿಡಿ.

Leave A Reply