Karnataka Co-operative Bank Recruitment 2022 | ಒಟ್ಟು ಹುದ್ದೆ-87 ; ಅರ್ಜಿ ಸಲ್ಲಿಸಲು ಕೊನೆ ದಿನ- ಸೆ.30
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚುವ ಅಭ್ಯರ್ಥಿಗಳಿಗೆ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಹೆಸರು: ಕ್ಲರ್ಕ್ (ಸಹಾಯಕರು)
ಹುದ್ದೆಯ ಸಂಖ್ಯೆ: ಒಟ್ಟು 87
ಉದ್ಯೋಗ ಸ್ಥಳ: ಧಾರವಾಡ (ಕರ್ನಾಟಕ)
ವಯೋಮಿತಿ:
ಸಾಮಾನ್ಯ ವರ್ಗ – ಕನಿಷ್ಠ 18 & ಗರಿಷ್ಠ 35 ವರ್ಷ
ಒಬಿಸಿ ಅಭ್ಯರ್ಥಿಗಳಿಗೆ – ಕನಿಷ್ಠ 18 & ಗರಿಷ್ಠ 38 ವರ್ಷ
SC/ST/ಪ್ರವರ್ಗ1 ಅಭ್ಯರ್ಥಿಗಳಿಗೆ – ಕನಿಷ್ಠ 18 & ಗರಿಷ್ಠ 40 ವರ್ಷ
ಮಾಜಿ ಸೈನಿಕ (ಕನಿಷ್ಠ 15 ವರ್ಷ ಸೇವೆ ಸಲ್ಲಿಸಿರಬೇಕು) – ಕನಿಷ್ಠ 18 & ಗರಿಷ್ಠ 45 ವರ್ಷ
ವೇತನ:
ಅಭ್ಯರ್ಥಿಗಳಿಗೆ ಮಾಸಿಕ ರೂ. 16,000 – 29,600 ವರೆಗೆ ವೇತನವಾಗಿ ನೀಡಲಾಗುವುದು.
ವಿದ್ಯಾರ್ಹತೆ:
*ಅಭ್ಯರ್ಥಿಯು ಯಾವುದೇ ಪದವಿ ವಿದ್ಯಾರ್ಹತೆಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸ್ ಆಗಿರಬೇಕು.
*SC/ST/ಪ್ರವರ್ಗ1 ಅಭ್ಯರ್ಥಿಗಳಿಗೆ ಕನಿಷ್ಠ 55% ರಷ್ಟು ಅಂಕಗಳೊಂದಿಗೆ ಪಾಸ್ ಆಗಿರಬೇಕು.
ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಆಯ್ಕೆ ವಿಧಾನ:
ಅಭ್ಯರ್ಥಿಗಳು ಪದವಿ ವಿದ್ಯಾರ್ಹತೆಯಲ್ಲಿ ಎಲ್ಲಾ ಸೆಮಿಸ್ಟರ್/ ವರ್ಷಗಳವಾರು ಪರೀಕ್ಷೆಯಲ್ಲಿ ಪಡೆದ ನಿಗದಿತ ಅಂಕಗಳ ಪ್ರತಿಶತ ಆಧಾರದ ಮೇಲೆ ಅರ್ಹತೆ ಇರುವ ಎಲ್ಲಾ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಕರೆಯಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ ಅದನ್ನು ಆಧರಿಸಿ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇಕಡ 85 ಕ್ಕಿಳಿಸಿ ಪ್ರಾಪ್ತವಾಗುವ ಅಂಕಗಳ ಶೇಕಡಾವಾರು ಪ್ರಮಾಣದ ಜೊತೆಗೆ ಸಂದರ್ಶನದಲ್ಲಿ ಪ್ರಾಪ್ತವಾಗುವ ಅಂಕಗಳನ್ನು ಕೂಡಿಸಿ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
*ಅಭ್ಯರ್ಥಿಯು ಆನ್ಲೈನ್ ಮುಖಾಂತರ ಕೆಳಗೆ ನೀಡಿರುವ ವೆಬ್ಸೈಟ್ ಲಿಂಕ್ ಗೆ ಭೇಟಿ ನೀಡಬೇಕು.
*ಬಳಿಕ ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.
ಅರ್ಜಿ ಶುಲ್ಕ:
ಸಾಮಾನ್ಯ & ಒಬಿಸಿ ವರ್ಗ – 1180/-
SC/ST/ಪ್ರವರ್ಗ1/ಅಂಗವಿಕಲ/ಮಾಜಿ ಸೈನಿಕ/ವಿಧವಾ ಅಭ್ಯರ್ಥಿಗಳಿಗೆ – 590/-
ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಗಳು ಶುಲ್ಕವನ್ನು ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿರುವ ಬ್ಯಾಂಕಿನ ಖಾತೆಗೆ ನೆಫ್ಟ್(NEFT) ಮೂಲಕ ಜಮಾ ನೀಡಿ ಯುಟಿಆರ್(UTR) ನಂಬರ್ ಅನ್ನು ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ನಲ್ಲಿ ನಮೂದಿಸಿ ಚಲನ್ ಪ್ರತಿ ಅಪ್ಲೋಡ್ ಮಾಡತಕ್ಕದ್ದು. (ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ)
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06/09/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/09/2022
ಅಧಿಕೃತ ವೆಬ್ ಸೈಟ್ : http://www.recruitapp.in/kccbdharwad2022/instruction