ಹೊಟ್ಟೆಯ ಕೊಬ್ಬನ್ನು ಕರಗಿಸಲು ಬಯಸುವವರಿಗೆ ಸುಲಭ ಟ್ರಿಕ್ಸ್ ಇಲ್ಲಿದೆ |
ಪ್ರತಿಯೊಬ್ಬರೂ ತಾವು ಸುಂದರವಾಗಿ ಕಾಣುವುದರ ಜೊತೆಗೆ ಆರೋಗ್ಯವಾಗಿರಬೇಕೆಂದು ಬಯಸುವುದು ಸಹಜ. ಈಗಿನ ಬದಲಾಗುತ್ತಿರುವ ಆಹಾರ ಶೈಲಿ, ಕೆಲಸದ ಒತ್ತಡ, ನಿದ್ದೆಯ ಅಭಾವದಿಂದ ಹೆಚ್ಚಿನವರು ಆರೋಗ್ಯದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ವ್ಯಾಯಾಮ ಇಲ್ಲದೇ ದೇಹದಲ್ಲಿ ಕೊಬ್ಬು ಶೇಖರಣೆಯಾಗಿ ಅನೇಕ ರೋಗಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ.
ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಅತಿ ಅವಶ್ಯಕವಾಗಿದ್ದು, ಇದರಿಂದಾಗಿ ಮಧುಮೇಹ ,ಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು.
ಸಂಸ್ಕರಿತ ಆಹಾರವು ಹೊಟ್ಟೆಯ ಕೊಬ್ಬು ಮತ್ತಷ್ಟು ಹೆಚ್ಚಿಸುವುದಲ್ಲದೆ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತದೆ. ಇದರಿಂದಾಗಿ ಜಂಕ್ ಫುಡ್ ಅನ್ನು ಆದಷ್ಟು ಕಡೆಗಣಿಸಿ, ತಾಜಾ ಆಹಾರ ಸೇವಿಸುವುದು ಉತ್ತಮ. ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಾಮ ವನ್ನು ದಿನನಿತ್ಯದ ದಿನಚರಿಯಲ್ಲಿ ಅಳವಡಿಸಿದರೆ ಹೊಟ್ಟೆಯ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.
ನೀರು ದೇಹದಿಂದ ವಿಷಕಾರಿ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆ ಜರುಗಲು ಕೊಬ್ಬನ್ನು ಬಳಸಿಕೊಳ್ಳಲು ನೆರವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ಕೊಬ್ಬನ್ನು ಕರಗಿಸುತ್ತದೆ.
ಬೀನ್ಸ್ ಪ್ರಕೃತಿಯು ಮನುಷ್ಯನಿಗೆ ನೀಡಿರುವಂತಹ ಒಂದು ಉಡುಗೊರೆ ಎಂದು ಹೇಳಿದರೂ ತಪ್ಪಾಗದು. ಇದು ಕಾರ್ಬ್ಸ್ ಮತ್ತು ಪ್ರೋಟೀನ್ ನ ಸಮತೋಲನ ಕಾಪಾಡುವುದು ಮತ್ತು ದೀರ್ಘಕಾಲ ತನಕ ಹೊಟ್ಟೆಯು ತುಂಬಿರುವಂತೆ ಮಾಡುವುದು.
ಪ್ರೋಟೀನ್ ಹೊಂದಿರುವಂತಹ ಮೊಟ್ಟೆಯು ಮನುಷ್ಯನ ಹಸಿವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರಿಂದಾಗಿ ಕಡಿಮೆ ತಿನ್ನುವ ಅಭ್ಯಾಸವಾಗಿ, ಹೊಟ್ಟೆಯ ಕೊಬ್ಬು ವೇಗವಾಗಿ ಕರಗಲು ಸಹಕರಿಸುತ್ತದೆ. ಆರೋಗ್ಯಕಾರಿ ಪ್ರೋಟೀನ್ ಸೇವನೆಯಿಂದಲೂ ಕೂಡ ಕೊಬ್ಬು ಕರಗಿಸಿಕೊಳ್ಳಬಹುದು.
ದಿನದ ಮೂರು ಹೊತ್ತು ಊಟವನ್ನು ತ್ಯಜಿಸಿ ಇದರ ಬದಲಿಗೆ, ಚಿಕ್ಕ ಪ್ರಮಾಣದಲ್ಲಿ ದಿನದಲ್ಲಿ ನಾಲ್ಕಾರು ಬಾರಿ ಆಹಾರ ಸೇವಿಸಬೇಕು. ಇದರಿಂದ ದೇಹ ತನಗೆ ಅಗತ್ಯವಿದ್ದಷ್ಟು ಪೋಷಕಾಂಶಗಳನ್ನು ಆಹಾರಗಳಿಂದ ಪಡೆದುಕೊಳ್ಳುತ್ತದೆ. ದೇಹಕ್ಕೆ ಈ ಅಭ್ಯಾಸವಾದರೆ, ಜೀವ ರಾಸಾಯನಿಕ ಕ್ರಿಯೆಯೂ ಚುರುಕುಗೊಳ್ಳುವ ಮೂಲಕ ಕೊಬ್ಬನ್ನು ಬಳಸಿಕೊಳ್ಳುವ ಪ್ರಮಾಣವೂ ಹೆಚ್ಚುತ್ತದೆ.
ಮಾನಸಿಕ ಒತ್ತಡದಲ್ಲಿದ್ದಾಗ ದೇಹ ಹೆಚ್ಚು ಕಾರ್ಟಿಸೋಲ್ ಎಂಬ ರಸದೂತವನ್ನು ಉತ್ಪಾದಿಸುತ್ತದೆ. ಇದರಿಂದಲೂ ದೇಹದಲ್ಲಿ ಕೊಬ್ಬು ಸಂಗ್ರಹವಾಗತೊಡಗುತ್ತದೆ. ಮಾನಸಿಕ ಒತ್ತಡದಿಂದ ಹೊರಬರಲು ಅನುಲೋಮ ವಿಲೋಮ ಪ್ರಾಣಾಯಾಮ ಅಥವಾ ಬಾಹ್ಮೀ ಪ್ರಾಣಾಯಾಮ, ಧ್ಯಾನ ಮಾಡುವುದು ಒಳಿತು.
ಖಾರವಾಗಿರುವಂಹತ ಮೆಣಸುಗಳು ಹೊಟ್ಟೆಯ ಕೊಬ್ಬು ಕರಗಿಸುವಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುವುದು ಮತ್ತು ಹಸಿವನ್ನು ಇದು ಕಡಿಮೆ ಮಾಡುವುದು. ಇದು ಆರೋಗ್ಯಕಾರಿ ಚಯಾಪಚಯ ಕ್ರಿಯೆ ವೃದ್ಧಿಸುವ ವಿಟಮಿನ್ ಸಿಯನ್ನು ಒದಗಿಸುವುದು.
ಬಾದಾಮಿಯಲ್ಲಿ ಅತಿ ಹೆಚ್ಚು ಪೋಷಕಾಂಶಗಳು ಮತ್ತು ವಿಟಮಿನ್ ಗಳಿವೆ. ಹಾಗಾಗಿ ದಿನಕ್ಕೆ ಒಂದು ಐದು ಬಾದಾಮಿಗಳನ್ನು ತಿಂದರೆ ಹಸಿವು ನೀಗಿಸುತ್ತದೆ. ಆರೋಗ್ಯಕಾರಿ ಪ್ರೋಟೀನ್ ನೆರವಿನಿಂದಾಗಿ ತೂಕ ಕಳೆದುಕೊಳ್ಳಲು ನೆರವಾಗುವುದು ಮತ್ತು ಚಯಾಪಚಯ ಕ್ರಿಯೆ ವೃದ್ಧಿಸುವುದು.
ಅಕ್ರೋಟ, ಗೋಂಡಬಿ, ಪಿಸ್ತಾ, ಚಿಯಾ ಬೀಜಗಳ ಸೇವನೆ ಕೂಡ ಉಪಕಾರಿಯಾಗಿದೆ.
ಚಯಾಪಚಯ ಹೆಚ್ಚಿಸುವ ಮತ್ತೊಂದು ಅಧ್ಬುತ ಆಹಾರವೆಂದರೆ ಅದು ಸಿಟ್ರಸ್ ಹಣ್ಣುಗಳು. ಇದರಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿದೆ ಮತ್ತು ಇದು ತೂಕ ಕಳೆದುಕೊಳ್ಳಲು ಸಹಕಾರಿ ಆಗಿರುವುದು. ಲಿಂಬೆ, ಕಿತ್ತಳೆ ಅಥವಾ ಈ ಮೂರು ಹಣ್ಣುಗಳ ರಸವನ್ನು ನೀರಿಗೆ ಹಾಕಿ ದಿನವಿಡಿ ಕುಡಿಯುತ್ತಾ ಇದ್ದರೆ ತೂಕ ಇಳಿಸಿಕೊಳ್ಳಬಹುದು.
ಹೊಟ್ಟೆಯ ಕೊಬ್ಬು ಕರಗಿಸುವ ವಿಚಾರಕ್ಕೆ ಬಂದರೆ ಆಗ ಮುಖ್ಯವಾಗಿ ಅನ್ನದ ಬದಲಿಗೆ ಕ್ವಿನೋವಾವನ್ನು ತಿನ್ನಬಹುದು. ಇದು ದೇಹಕ್ಕೆ ಪಿಷ್ಟವನ್ನು ಪ್ರವೇಶಿಸುವುದನ್ನು ತಡೆದು, ಸ್ಥೂಲಕಾಯತೆಯನ್ನು ಕಡಿಮೆ ಮಾಡುತ್ತದೆ. ಆಹಾರ ಕ್ರಮದಲ್ಲಿ ಸಕ್ಕರೆ ಕಡೆಗಣಿಸಿ ಅಥವಾ ಕಡಿಮೆ ಮಾಡಿಕೊಂಡುಬದಲಿಗೆ ಹಣ್ಣುಗಳನ್ನು ಬಳಸಿದರೆ ಒಳ್ಳೆಯದು. ಕರಿದಿರುವ ಆಹಾರ, ಹೆಚ್ಚು ಬೆಣ್ಣೆಯಿರುವ ಆಹಾರ ಮತ್ತು ಅನಾರೋಗ್ಯಕರ ಮಾಂಸದ ಕೊಬ್ಬನ್ನು ಸೇವಿಸಿದರೆ ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ.
ದೇಹದ ತೂಕ ಕಡಿಮೆ ಮಾಡಲು ಸರಿಯಾದ ಅಹಾರ ಕ್ರಮ, ವ್ಯಾಯಾಮ ಅವಶ್ಯಕವಾಗಿದೆ. ಕರಿದ ತಿಂಡಿಗಳು, ಜಂಕ್ ಫುಡ್ ಗಳ ಸೇವನೆ ಕಡಿಮೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.