ಅಬ್ಬಬ್ಬಾ….89 ರ ವೃದ್ಧನಿಂದ ‘ಸಂಭೋಗ’ ಕ್ಕಾಗಿ ದಿನಾ ಪೀಡನೆ | 87 ರ ಹರೆಯದ ಹೆಂಡತಿಯಿಂದ ಮಹಿಳಾ ಸಹಾಯವಾಣಿಗೆ ಕರೆ !!!

ಏನು ಗುರೂ ಇದು ವಿಷಯ. ಮರ ಮುಪ್ಪಾದರೂ ಹುಳಿಗೆ ಮುಪ್ಪೇ ಅನ್ನೋ ಮಾತೊಂದಿದೆ. ಈ ಮಾತು ಈ ಅಜ್ಜನಿಗೆ ಅನ್ವಯಿಸುತ್ತದೆ.

ಏಕೆಂದರೆ, ಗುಜರಾತ್‍ನ 87 ವರ್ಷದ ವೃದ್ಧೆಯೊಬ್ಬರು 89 ವರ್ಷದ ತನ್ನ ಪತಿಯ ಮೇಲೆಯೇ ದೂರು ಸಲ್ಲಿಸಿದ್ದಾಳೆ. ಏನು ಬಂತು ಈ ಅಜ್ಜಿಗೆ ಈ ಪ್ರಾಯದಲ್ಲಿ ಅಂತೀರಾ? ವಿಷಯ ಏನಪ್ಪಾ ಅಂದರೆ, ಈಕೆಯ ಪತಿ ಪದೇ ಪದೇ, ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಾನೆ ಎಂಬ ದೂರನ್ನು ಮಹಿಳಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಹೇಳಿದ್ದಾರೆ ಈ ಮಹಿಳೆ.

ಪಾಪ ಈ ಅಜ್ಜಿಯ ಸ್ಥಿತಿ ಅಜ್ಜ ಅರ್ಥ ಮಾಡಿಕೊಳ್ಳಲಿಲ್ಲವೇನೋ ? ಅದಕ್ಕೆ ಅಜ್ಜಿ ಈಗ ಮಹಿಳಾ ಸಹಾಯವಾಣಿಯವರ ಮೊರೆ ಹೋಗಿದ್ದಾರೆ. ವಡೋದರಾದ 87 ವರ್ಷದ ವೃದ್ಧೆ ಪದೇ, ಪದೇ ಲೈಂಗಿಕ ಕ್ರಿಯೆ ನಡೆಸುತ್ತವಂತೆ ಒತ್ತಾಯಿಸುತ್ತಿದ್ದ ತನ್ನ ಪತಿಯ ಕಿರುಕುಳದಿಂದ ಬೇಸತ್ತಿದ್ದಾರೆ.

ಗುಜರಾತ್‍ನ ಎಲ್ಲಾ ಮಹಿಳಾ ನಿವಾಸಿಗಳಿಗೆ ಸರ್ಕಾರ ಟೋಲ್-ಫ್ರೀ ಮಹಿಳಾ ಸಹಾಯವಾಣಿ ಸಂಖ್ಯೆ -181 ಅಭಯಂ ಯೋಜನೆ ರೂಪಿಸಿದ್ದು, ಈ ಬಗ್ಗೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಈ ಕರೆಯನ್ನು ಸ್ವೀಕರಿಸಿದ ಅಭಯಂ ತಂಡ ನಿಜಕ್ಕೂ ದಿಗ್ಭ್ರಮೆಗೊಂಡಿದೆ. ತನ್ನ ಗಂಡನ ಕಿರುಕುಳದಿಂದ ಹೇಗಾದರೂ ಪಾರು ಮಾಡುವಂತೆ ವೃದ್ಧೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

89 ವರ್ಷದ ತನ್ನ ಪತಿ ಇಂಜಿನಿಯರ್ ವೃತ್ತಿಯಲ್ಲಿದ್ದಾರೆ. ಹಾಗೂ ವಡೋದರದ ಸಯಾಜಿಗಂಜ್ ಪ್ರದೇಶದಲ್ಲಿ ವಾಸ ಮಾಡುತ್ತಿದ್ದೇವೆ. ಆದರೆ ಇಷ್ಟು ವಯಸ್ಸಾದರೂ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೇ ಇಬ್ಬರಿಗೂ ಹಲವಾರು ವರ್ಷಗಳಿಂದ ಆರೋಗ್ಯ ಸಂಬಂಧ ಸಮಸ್ಯೆಗಳಿದೆ. ತಮ್ಮ ಮಗ ಹಾಗೂ ಸೊಸೆಯೊಂದಿಗೆ ವೃದ್ಧ ದಂಪತಿ ನೆಲೆಸುತ್ತಿರುವುದಾಗಿ ದೂರಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ಈತನ ಸಂಭೋಗದ ಆಸೆ ನಿರಾಕರಿಸಿದರೆ ಕೋಪ ಮಾಡುವುದು ಕಿರುಚಾಟ ಮಾಡುವುದನ್ನು ಮಾಡುತ್ತಾನೆ ಹಾಗೂ ನಿಂದಿಸುತ್ತಾರೆ. ಅನಾರೋಗ್ಯದ ಮಧ್ಯೆಯೂ ಪತಿ ಲೈಂಗಿಕ ಸಂಭೋಗಕ್ಕೆ ಒತ್ತಾಯ ಮಾಡುತ್ತಾರೆ. ಹಾಗಾಗಿ ರೋಸಿ ಹೋದ ಈ ವೃದ್ಧೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ.

ಅನಂತರ ಅಭಯಂ ತಂಡ ಅವರ ಮನೆಗೆ ಭೇಟಿ ನೀಡಿ ಕೌನ್ಸೆಲಿಂಗ್ ನಡೆಸಿದ್ದಾರೆ. ಈ ವಯಸ್ಸಿನಲ್ಲಿ ಯೋಗ, ಫ್ರೆಂಡ್ಸ್ ಭೇಟಿ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಂತೆ ವೃದ್ಧನಿಗೆ ಹೇಳಲಾಗಿದೆ.

Leave A Reply