ಇಂಥ ಹರಕೇನು ಇರುತ್ತಾ? | ನಿಸ್ವಾರ್ಥ ಮನಸ್ಸಿನ ವ್ಯಕ್ತಿ ಏನು ಮಾಡಿದ ನೀವೇ ನೋಡಿ

ಈಗಿನ ಕಾಲದಲ್ಲಿ ಹರಕೆಯನ್ನು ಯಾವುದಕ್ಕೆಲ್ಲ ಹೊರುತ್ತಾರೆ ಎಂಬುದು ತಿಳಿಯುವುದಿಲ್ಲ. ಹೆಚ್ಚಾಗಿ ಸ್ವಾರ್ಥ ವಿಷಯಗಳನ್ನು ಇಟ್ಟುಕೊಂಡೆ ಸಂಕಲ್ಪವನ್ನು ಮಾಡುತ್ತಾರೆ. ಆದರೆ ಛತ್ತೀಸ್ಗಡದ ವ್ಯಕ್ತಿ ಅವ್ರ ನಿಸ್ವಾರ್ಥ ಮನಸ್ಸಿನಿಂದ ಊರಿಗಾಗಿ ಒಂದು ಸಂಕಲ್ಪವನ್ನು ಮಾಡಿದ್ದಾರೆ.


ಹೌದು. ಇವರ ಹೆಸರು ರಮಾಶಂಕರ್ ಗುಪ್ತಾ. ಮನೇಂದ್ರಘರ್ ನಿವಾಸಿಯಾದ ಆರ್​ಟಿನ ಕಾರ್ಯಕರ್ತರಾಗಿದ್ದಾರೆ. ಮನೇಂದ್ರಘರ್ – ಚಿರ್ಮಿರಿ-ಭಾರತ್​ಪುರಗಳು ಹೊಸ ಜಿಲ್ಲೆಯಾಗುವ ತನಕವೂ ತಾನು ಗಡ್ಡ ಬೋಳಿಸುವುದಿಲ್ಲ ಎಂಬ ಸಂಕಲ್ಪದ ಕಾರಣ ಸತತ 21 ವರ್ಷಗಳ ತನಕ ಗಡ್ಡವನ್ನು ಬೋಳಿಸದೇ ಹಾಗೆಯೇ ಇಟ್ಟುಕೊಂಡಿದ್ದರು.

ಆದರೆ ಇದೀಗ ಛತ್ತೀಸ್​ಗಢ ಸರ್ಕಾರವು ರಾಜ್ಯದ 32ನೆಯ ಜಿಲ್ಲೆಯಾಗಿ ಎಂಸಿಬಿಯನ್ನು ಪ್ರಾರಂಭಿಸುವುದರೊಂದಿಗೆ ಗುಪ್ತಾರವರ ಸಂಕಲ್ಪ ಶುಕ್ರವಾರ ನೆರವೇರಿತು.

‘ಮನೇಂದ್ರಗಢ – ಚಿರ್ಮಿರಿ-ಭಾರತ್​ಪುರ ಇವು ಜಿಲ್ಲೆಯಾಗುವವರೆಗೂ ತನ್ನ ಗಡ್ಡವನ್ನು ಬೋಳಿಸಿಕೊಳ್ಳುವುದಿಲ್ಲ. ಈ ಜಿಲ್ಲೆಯ ಮಾನ್ಯತೆಗಾಗಿ ಹೋರಾಡಿದ ಜನರೆಲ್ಲರೂ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಇದೀಗ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಗುಪ್ತಾ ಬೇಡಿಕೊಳ್ಳುತ್ತಾ ತಮ್ಮ ಗಡ್ಡವನ್ನು ಬೋಳಿಸಿಕೊಂಡಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಕೂಡ ಆಗಿದೆ.

ಈ ಪ್ರದೇಶವು ಜಿಲ್ಲೆಯಾಗಲು ಗುಪ್ತಾರವರು ಹಲವು ಹೋರಾಟಗಳನ್ನು ಮಾಡಿದ್ದರು. ‘ಇದಕ್ಕಾಗಿ ನಾನು ಮುಖ್ಯಮಂತ್ರಿ ಭೋಫೆಶ್ ಬಾಘೇಲ್ ಅವರಿಗೆ ಧನ್ಯವಾದವನ್ನು ತಿಳಿಸುತ್ತೇನೆ. ಛತ್ತೀಸ್​ಗಢವು ದೇಶದಲ್ಲಿಯೇ ಮಾದರಿ ಆಗುವ ಜಿಲ್ಲೆಯಾಗಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ಗುಪ್ತಾರವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಶುಕ್ರವಾರ ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಛತ್ತೀಸ್​ಗಢದ 32ನೇ ಜಿಲ್ಲೆ ಮನೇಂದ್ರಗಢ – ಚಿರ್ಮಿರಿ-ಭರತ್​ಪುರಕ್ಕೆ ಚಾಲನೆ ನೀಡಿದರು. ಜಿಲ್ಲಾ ಕೇಂದ್ರವು ಮನೇಂದ್ರಗಢದಲ್ಲಿದ್ದು, ಚಿರ್ಮಿರಿಯಲ್ಲಿರುವ 100 ಹಾಸಿಗೆಗಳ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಮಾರ್ಪಾಡಾಗುತ್ತದೆ. ಇದೇ ಸಂದರ್ಭದಲ್ಲಿ ನೂತನ ಜಿಲ್ಲೆಯಲ್ಲಿ 200ಕೋಟಿರೂಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಮುಖ್ಯಮಂತ್ರಿ ಉದ್ಘಾಟಿಸಿದ್ದಾರೆ.

Leave A Reply

Your email address will not be published.