ಸಂತ್ರಸ್ತರಿಗೆ ಆಸರೆಯಾಗಿರುವ ಪ್ರಶಾಂತ ನಿವಾಸಕ್ಕೆ ಸುಮಾರು ೪೦ ಸಾವಿರ ರೂಪಾಯಿ ಮೌಲ್ಯದ ದವಸ ಧಾನ್ಯ ವಿತರಣೆ

Share the Article

ಅದೆಷ್ಟೂ ನಿರಾಶ್ರಿತರಿಗೆ, ಸಂತ್ರಸ್ತರಿಗೆ ಆಸರೆಯಾಗಿರುವ ಜೆಪ್ಪುವಿನ ಸೈಂಟ್ ಜೋಸೆಫ್ ಪ್ರಶಾಂತ ನಿವಾಸದಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸವಿನೆನಪಿಗೆ ಮಂಗಳೂರಿನ ಮಾಜಿ ಮೇಯರ್ ಶ್ರೀಮತಿ ಜೆಸಿಂತಾ ವಿಜಯ್ ಆಲ್‌ಫ್ರೆಡ್ ಭಾಗಿತ್ವದಲ್ಲಿ ಉದ್ಯಮಿ ಶ್ರೀ ರಾಕೇಶ್ ಅಣ್ಣ ಶೆಟ್ಟಿಯವರ ನೇತೃತ್ವದಲ್ಲಿ ಪ್ರಶಾಂತ ನಿವಾಸಕ್ಕೆ ಸುಮಾರು ೪೦ ಸಾವಿರ ರೂಪಾಯಿ ಮೌಲ್ಯದ ದವಸ ಧಾನ್ಯ ಹಾಗೂ ದಿನ ಬಳಕೆಯ ವಸ್ತುಗಳ ಕಿಟ್ ಮತ್ತು ಸುಮಾರು ೬೦ ಸಾವಿರ ಮೌಲ್ಯದ ಕಟ್ಟಿಗೆಯನ್ನು ವಿತರಿಸಲಾಯಿತು..

ಈ ಸಂದರ್ಭ ಮಾತನಾಡಿದ ಜೆಸಿಂತಾರವರು ರಾಕೇಶ್ ಅಣ್ಣ ಶೆಟ್ಟಿಯವರ ಉದಾರ ಮನಸ್ಸಿನಿಂದ ಇಂದು ಪ್ರಶಾಂತ ನಿವಾಸದ ಅದೆಷ್ಟೂ ನಿರಾಶ್ರಿತರಿಗೆ ನೆರವಾಗಿದ್ದಾರೆ.ಯಶಸ್ವಿ ಉದ್ಯಮಿಯಾಗಿರುವ ಅವರಲ್ಲಿ ಒಬ್ಬ ಸಮಾಜಮುಖಿ ಹೃದಯವಂತನಿದ್ದಾನೆ. ಅವರ ಉದ್ಯಮ ಹಾಗೂ ಯಶಸ್ಸು ಇನಷ್ಟು ಬೆಳಗಲಿ ಎಂದರು.

ಇನ್ನೂ ಸೆಂಟ್ ಜೋಸೆಫ್ ಪ್ರಶಾಂತ ನಿವಾಸದ ಸಿಲ್ವಿಯಾ ಫೆರ್ನಾಂಡೀಸ್‌ರವರು ಮಾತನಾಡಿ ರಾಕೇಶ್ ಅಣ್ಣ ಶೆಟ್ಟಿ ಉದ್ಯಮಿಯಾದರು ಅತ್ಯುತ್ತಮ ಮಾನವೀಯ ಮೌಲ್ಯಗಳನ್ನು ಹೊಂದಿದ್ದಾರೆ..ಅವರ ಸೇವೆ ಯಶಸ್ಸು ಇನ್ನಷ್ಟು ಎತ್ತರಕ್ಕೆ ಹೋಗಿ ಹಲವರಿಗೆ ಸ್ಪೂರ್ತಿಯಾಗಲಿಯೆಂದರು.

ಇನ್ನೂ ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶ್ರೀ ವಿಜಯ್ ಆಲ್ಫರೆಡ್ ಸೇರಿದಂತೆ ಸೈಂಟ್ ಜೋಸೆಫ್ ಚರ್ಚ್ ಜೆಪ್ಪು ಇದರ ಧರ್ಮಗುರುಗಳಾದ ಫಾ.ಮಾಕ್ಸಿಮ್ ಡಿ.ಸೋಜಾ ಉಪಸ್ಥಿರರಿದ್ದು.ಹಿರಿಯ ರಿಕ್ಷಾ ಚಾಲಕ ಸಾರಥಿ ನಂ-೧ ಕುಡ್ಲದ ಆಟೋರಾಜ ಪ್ರಶಸ್ತಿ ಪುರಸ್ಕೃತ ಮೋಂತುಲೋಬೋ ಇತರರು ಉಪಸ್ಥಿತರಿದ್ದರು.

Leave A Reply