Good News : ಕೊರೊನಾ ಸೋಂಕಿನ ವಿರುದ್ಧ ಕದನಕ್ಕೆ ಪ್ಯಾಕ್ಸ್ಲೋವಿಡ್ ಮಾತ್ರೆ ಬಿಡುಗಡೆ

ಕೋವಿಡ್ -19ರ ಸೌಮ್ಯ ಮತ್ತು ಮಧ್ಯಮ ರೋಗಲಕ್ಷಣಗಳನ್ನ ಹೊಂದಿರುವ ರೋಗಿಗಳಿಗೆ ಚಿಕಿತ್ಸಾ ಆಯ್ಕೆಯಾಗಿ ಇನ್ನೊಂದು ಮದ್ದು ಮಾರುಕಟ್ಟೆಗೆ ಬರ್ತಿದೆ. ಈಗ ಅದಕ್ಕೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) ನಿಂದ ಅನುಮೋದನೆ ಪಡೆದಿದೆ ಎಂದು ಔಷಧ ತಯಾರಕ ಜೆನಾರಾ ಫಾರ್ಮಾ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಈ ಕೊರೋನಾ ವಿರೋಧಿ ಉತ್ಪನ್ನವನ್ನು ‘ಪ್ಯಾಕ್ಸೆನ್’ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುವುದು ಮತ್ತು ಜೆನಾರಾದ ಯುಎಸ್ ಎಫ್ಡಿಎ ಮತ್ತು ಇಯು ಅನುಮೋದಿತ ಹೈದರಾಬಾದ್‌ನಲ್ಲಿ ಅತ್ಯಾಧುನಿಕ ಸೌಲಭ್ಯದಲ್ಲಿ ತಯಾರಿಸಲಾಗುತ್ತಿದೆ ಎಂದು ಕಂಪೈಯ ಪ್ರಕಟಣೆ ತಿಳಿಸಿದೆ. ಜೆನಾರಾ ಫಾರ್ಮಾ ಹೈದರಾಬಾದ್ ಮೂಲದ ಬಯೋಫೋರ್ ಇಂಡಿಯಾ ಫಾರ್ಮಾಸ್ಯುಟಿಕಲ್ಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಕೋವಿಡ್ ಚಿಕಿತ್ಸೆಗಾಗಿ ಫೈಜರ್ ಸಂಸ್ಥೆಯ ಪ್ಯಾಕ್ಸ್ಲೋವಿಡ್ʼನ್ನ USFDA ಅನುಮೋದಿಸಿದೆ.


Ad Widget

ಈ ಬಗ್ಗೆ ಹೇಳಿಕೆ ನೀಡಿರುವ ಝೆನಾರಾ ಫಾರ್ಮಾದ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಬಾಬು ರಂಗಿಸೆಟ್ಟಿ, “ನಮ್ಮ ದೇಶದ ರೋಗಿಗಳಿಗೆ ಕೋವಿಡ್ ವಿರುದ್ಧ ಅತ್ಯುತ್ತಮ ಚಿಕಿತ್ಸಾ ಆಯ್ಕೆಗಳನ್ನು ತಲುಪಿಸುವ ಉದ್ದೇಶದಿಂದ ನಾವು ಈ ಉತ್ಪನ್ನವನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದೇವೆ. ನಮ್ಮ ಉತ್ಪನ್ನವಾದ ಪ್ಯಾಕ್ಸೆನ್, ಬಯೋ ಈಕ್ವೆಲೆನ್ಸ್ ಅಧ್ಯಯನದ ಮೂಲಕ ವಿದೇಶದಲ್ಲಿ ತಯಾರಾದ ಫೈಜರ್ ನ ಪ್ಯಾಕ್ಸ್ಲೋವಿಡ್ ಗೆ ಸಮಾನವಾಗಿದೆ ಎಂದು ಸಾಬೀತಾಗಿದೆ. ಅದರ ಆಧಾರದ ಮೇಲೆ ನಮಾಗೆ ಭಾರತೀಯ ಡ್ರಗ್ ಕಂಟ್ರೋಲರ್ ನಿಂದ ಅನುಮತಿ ಸಿಕ್ಕಿದೆ” ಎಂದು ಅವರು ಹೇಳಿದ್ದಾರೆ.

error: Content is protected !!
Scroll to Top
%d bloggers like this: