ಪ್ರಯಾಣಿಕನನ್ನು ಕಾಲಲ್ಲಿ ಒದ್ದು ರಸ್ತೆಗೆ ತಳ್ಳಿದ ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕ ಅಮಾನತು

ಪುತ್ತೂರು: ಪಾನಮತ್ತನಾಗಿದ್ದಂತ ಪ್ರಯಾಣಿಕನೊಬ್ಬ ಕೆ ಎಸ್ .ಆರ್ .ಟಿ ಸಿ ಬಸ್ ನಲ್ಲಿ ತನ್ನೂರಿಗೆ ತೆರಳೋದಕ್ಕೆ ಹೋದಂತ ಸಂದರ್ಭದಲ್ಲಿ, ಆತನ ಮೇಲೆ ಹಲ್ಲೆ ನಡೆಸಿ, ಹೊರಗೆ ಕಾಲಿನಿಂದ ಒದ್ದು ನಿರ್ವಾಹಕ ತಳ್ಳಿದ್ದರು. ಇದರಿಂದಾಗಿ ಅಂಗಾತವಾಗಿ ಬಸ್ ಡೋರಿನಿಂದ ಹೊರಗೆ ಬಿದ್ದಂತ ಪ್ರಯಾಣಿಕ ಗಾಯಗೊಂಡಿದ್ದನು.

ಈ ಘಟನೆಯ ಹಿನ್ನಲೆಯಲ್ಲಿ ನಿರ್ವಾಹಕನನ್ನು ಅಮಾನತುಗೊಳಿಸಿ,ಸಾರಿಗೆ ನಿಗಮ ಆದೇಶಿಸಿದೆ.

ಕಂಡಕ್ಟರ್ ಮಾತಿಗೆ ಒಪ್ಪದಂತ ಪಾನಮತ್ತ ಪ್ರಯಾಣಿಕ ಮಾತ್ರ ಬಸ್ಸಿನಿಂದ ಇಳಿದಿಲ್ಲ. ಈ ವೇಳೆಗೆ ಸಿಟ್ಟುಗೊಂಡಂತ ನಿರ್ವಾಹಕ ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಬಸ್ಸಿನ ಡೋರಿನಿಂದ ಕಾಲಿನಿಂದ ಒದ್ದಿದ್ದಾನೆ. ಆಗ ಪಾನಮತ್ತ ಪ್ರಯಾಣಿಕ ರಸ್ತೆಗೆ ಅಂಗಾತ ಬಿದ್ದು ಪೆಟ್ಟುಗೊಂಡಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ವಿಷಯ ತಿಳಿದಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ, ಸಾರಿಗೆ ಬಸ್ ನಿರ್ವಾಹಕನ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಸಂಬಂಧ ಪಟ್ಟಂತ ಅಧಿಕಾರಿಗಳು ಈ ನಡೆ ತೋರಿದಂತ ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

Leave A Reply

Your email address will not be published.