ನಾಳೆ ಗಣೇಶ ವಿಸರ್ಜನೆ ಪ್ರಯುಕ್ತ ಕೆಲವೆಡೆ ಸರಕಾರಿ ರಜೆ ಘೋಷಣೆ | ಎಲ್ಲಿ ? ಇಲ್ಲಿದೆ ಲಿಸ್ಟ್

ಎಲ್ಲಾ ಕಡೆ ಗಣೇಶನ ಹಬ್ಬ ಸಂಭ್ರಮಾಚರಣೆ. ಗಣೇಶನ ಪ್ರತಿಷ್ಠಾಪನೆ ಮುಗಿದ ನಂತರ ಇನ್ನೇನು ವಿಷರ್ಜನೆ ಇರುವುದು. ಎಲ್ಲರಿಗೂ ಗೊತ್ತಿರುವ ಹಾಗೇ ಗಣೇಶನ ಹಬ್ಬಕ್ಕೆ ಸರ್ಕಾರಿ ರಜೆ ಘೋಷಣೆ ಇರುವುದು ಗೊತ್ತೇ ಇದೆ. ಆದರೆ ನಿಮಗೆ ಗೊತ್ತೇವ? ಗಣೇಶ ವಿಸರ್ಜನೆಗೂ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಹೌದು, ಹೀಗಾಗಿ ನಾಳೆ ಕೆಲವೆಡೆ ಸರ್ಕಾರಿ ಕಚೇರಿ, ಸಂಸ್ಥೆಗಳು ಮುಚ್ಚಿರಲಿವೆ.

ಹಾಗಂತ ಕರ್ನಾಟಕದ ಜನತೆಗೆ ಈ ಖುಷಿ ಇಲ್ಲ. ಏಕೆಂದರೆ ಇಂಥದ್ದೊಂದು ಆದೇಶವನ್ನು ಹೊರಡಿಸಿರುವುದು ತೆಲಂಗಾಣ ಸರ್ಕಾರ. ಹಾಗಾಗಿ ಅಲ್ಲಿಯವರಿಗೆ ಇದೊಂದು ಭರ್ಜರಿ ಸಿಹಿ ಸುದ್ದಿ ಎಂದೇ ಹೇಳಬಹುದು. ಗಣೇಶ ವಿಸರ್ಜನೆಯ ಮೆರವಣಿಗೆ ಹಿನ್ನೆಲೆಯಲ್ಲಿ ಅದು ಅಲ್ಲಿನ ಕೆಲವು ನಗರಗಳಲ್ಲಿ ನಾಳೆ ಸರ್ಕಾರಿ ರಜೆ ಎಂದು ಘೋಷಿಸಿ ಆದೇಶ ಹೊರಡಿಸಿದೆ.

ಹೈದರಾಬಾದ್, ಸಿಕಂದರಾಬಾದ್, ರಂಗಾರೆಡ್ಡಿ, ಮೆಟ್ಟಿಲ್ -ಮಲ್ಕಜ್‌ಗಿರಿ ಜಿಲ್ಲೆಗಳಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ಸೆ. 9ರಂದು ಸರ್ಕಾರಿ ರಜೆ ಇರಲಿದೆ. ನಾಳೆಯ ರಜೆಗೆ ಪರ್ಯಾಯವಾಗಿ ಸೆ. 12ರಂದು ಕೆಲಸದ ದಿನವಾಗಿರಲಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

Leave A Reply