ರೈತರಿಗಾಗಿ ಇಲ್ಲಿದೆ ಉತ್ತಮ ಮಾಹಿತಿ! | ಗಂಗಾ ಕಲ್ಯಾಣ ನೀರಾವರಿ ಯೋಜನೆ ಅಡಿಯಲ್ಲಿದೆ ಸೌಲಭ್ಯ
ಸರ್ಕಾರವು ರೈತರಿಗಾಗಿ ಹೊಸ ಹೊಸ ಯೋಜನೆಯನ್ನು ತರುತ್ತಲೇ ಇರುತ್ತದೆ. ಅದರಂತೆ ಇದೀಗ ಹಿಂದುಳಿದ ಮತ್ತು ಅತಿ ಸಣ್ಣ ರೈತರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ನೀಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಸೆಪ್ಟೆಂಬರ್ 6 ರಿಂದ ಅಕ್ಟೋಬರ್ 20ರವರೆಗೆ ಅರ್ಜಿಗಳನ್ನ ಸಲ್ಲಿಸಬಹುದು.
ಅರ್ಜಿ ಸಲ್ಲಿಸಬೇಕಾದರೆ ಯಾವೆಲ್ಲಾ ನಿಯಮಗಳಿವೆ?
ರೈತರ ಜಮೀನುಗಳು ಖುಶ್ಕಿಯಾಗಿದ್ದು, ನೀರಾವರಿ ಸೌಲಭ್ಯವು ಹೊಂದಿರಬಾರದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ 98.000 ರೂ, ಪಟ್ಟಣ ಪ್ರದೇಶದವರಿಗೆ 1,20,000 ರೂಪಾಯಿಗಳ ಒಳಗಿರಬೇಕು.
ಅರ್ಜಿದಾರರು ಕನಿಷ್ಠ ಎರಡು ಎಕರೆ ಜಮೀನನ್ನು ಹೊಂದಿರಬೇಕು. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಹಾಸನ ಕನಿಷ್ಠ ಒಂದು ಎಕರೆಯಾದರೂ ಜಾಗವನ್ನು ಹೊಂದಿರಬೇಕು. ವೈಯಕ್ತಿಕ ಕೊಳವೆ ಬಾವಿ ಯೋಜನೆಯಲ್ಲಿ ಘಟಕ ವೆಚ್ಚ 2.50 ಲಕ್ಷ ರೂಪಾಯಿಗಳು, ಇದರಲ್ಲಿ 2 ಲಕ್ಷ ರೂಪಾಯಿ ಸಹಾಯಧನ ಮತ್ತು 50,000 ನಿಗಮದಿಂದ ಶೇಕಡ 4ರಷ್ಟು ಬಡ್ಡಿ ದರದಲ್ಲಿ ನೀಡುವ ಸಾಲದ ಮತ ಒಳಗೊಂಡಿರುತ್ತದೆ.
https://www.dbcdc.Karnataka.gov.in ಅಥವಾ. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಸಹಾಯವಾಣಿ ಸಂಖ್ಯೆ 080- 22374832, 9606066389 ಮತ್ತು 8824300400 ಸಂಪರ್ಕಿಸಬಹುದು.