Hijab : ಹಿಜಾಬ್ ಅರ್ಜಿ ವಿಚಾರಣೆ | ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ, ವಿವಸ್ತ್ರಗೊಳ್ಳುವುದು ಕೂಡಾ ಹಕ್ಕು ! ಜಸ್ಟೀಸ್ ಪ್ರಶ್ನೆಗೆ ಗಲಿಬಿಲಿಗೊಂಡ ಅರ್ಜಿದಾರರು

ಹಿಜಾಬ್ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಈ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟೇಲಿರಿದ ಅರ್ಜಿದಾರರು
ನ್ಯಾಯಮೂರ್ತಿಗಳ ಪ್ರಶ್ನೆಗೆ ನಿಜಕ್ಕೂ ಕಕ್ಕಾಬಿಕ್ಕಿಯಾಗಿದ್ದಾರೆ‌. ನಿಮ್ಮ ರೀತಿಯಲ್ಲೇ ವಾದ ಮಾಡುವುದಾದರೆ ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ, ವಿವಸ್ತ್ರಗೊಳ್ಳುವುದು ಮೂಲಭೂತ ಹಕ್ಕಾಗಲಿದೆ ಎಂದು ಸುಪ್ರೀಂ ಹೇಳಿದೆ.

ಹಿಜಾಬ್ ಧರಿಸುವುದನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಕೆ ಮಾಡಲಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಿಜಾಬ್ ಧರಿಸಬಾರದು ಎಂದು ಯಾರು ನಿಷೇಧ ಹೇರಿಲ್ಲ. ಆದರೆ ಶಾಲೆಗಳಲ್ಲಿ ಅದನ್ನು ಧರಿಸಲು ನಿಯಮ ಅಡ್ಡಿಯಾಗಿದೆ ಎಂದು ಸುಪ್ರೀಂಕೋರ್ಟ್‌ ಬುಧವಾರ ಹೇಳಿದೆ. ಸಂವಿಧಾನದ 19ನೇ ವಿಧಿಯ ಅನ್ವಯ ಹಿಜಾಬ್ ಅನ್ನು ಧರಿಸುವುದು ಮೂಲಭೂತ ಹಕ್ಕು ಎಂದು ಅರ್ಜಿದಾರರು ವಾದಿಸುವುದಿದ್ದರೆ ಬಟ್ಟೆಗಳನ್ನು ಧರಿಸದೇ ಇರುವುದೂ (ರೈಟ್ ಟು ಅನ್‌ಡ್ರೆಸ್) ಕೂಡ ಅದಕ್ಕೆ ಸಮನಾಗಿಯೇ ಇರುತ್ತದೆ ಎಂದು ನ್ಯಾ.ಹೇಮಂತ್ ಗುಪ್ತಾ ಮತ್ತು ನ್ಯಾ.ಸುಧಾಂಶು ಧುಲಿಯಾ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಖ್ಯಾತ ನ್ಯಾಯವಾದಿ ದೇವದತ್ತ ಕಾಮತ್ ಅವರು ಪ್ರಕರಣವನ್ನು ಐವರು ಸದಸ್ಯರು ಇರುವ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದರು. ಸಂವಿಧಾನದ 19, 21 ಅಥವಾ 25ರ ಅನ್ವಯ ವಿದ್ಯಾರ್ಥಿನಿ ಹಿಜಾಬ್ ಅನ್ನು ಧರಿಸಲು ನಿರ್ಧರಿಸುತ್ತಾಳೆ. ಈ ಸಂದರ್ಭದಲ್ಲಿ ಸರ್ಕಾರ ಅದರ ಮೇಲೆ ನಿಷೇಧ ಹೇರಿದ್ದೇ ಆದಲ್ಲಿ ಅದು ಆಕೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿದರು.

ಕಾಮತ್ ಅವರ ವಾದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾ.ಹೇಮಂತ್ ಗುಪ್ತಾ “ಹಿಜಾಬ್ ಅನ್ನು ಧರಿಸಬಾರದು ಎಂದು ಯಾರೂ ಅಡ್ಡಿ ಮಾಡಿಲ್ಲ. ಅದನ್ನು ಯಾರು ಎಲ್ಲಿ ಬೇಕಾದರೂ ಧರಿಸಬಹುದು. ಆದರೆ, ಶಾಲೆಗಳಲ್ಲಿ ಮಾತ್ರ ಅದನ್ನು ಧರಿಸಬಾರದು ಎಂಬ ನಿಯಮ ಇದೆ. ಅದರ ಬಗ್ಗೆ ಮಾತ್ರ ನ್ಯಾಯಪೀಠ ಪರಿಶೀಲಿಸುತ್ತದೆ’ ಎಂದರು.

ಅದಕ್ಕೆ ವಿನಮ್ರರಾಗಿ ಉತ್ತರಿಸಿದ ನ್ಯಾಯವಾದಿ ದೇವದತ್ತ ಕಾಮತ್ ಅವರು, ಆರ್ಟಿಕಲ್ 19ರ ಅಡಿಯಲ್ಲಿ ನಮಗೆ ಇಷ್ಟೇ ಬಂದ ಬಟ್ಟೆ ಧರಿಸಿವುದು. ಮೂಲಭೂತ(Fundamental Rights) ಹಕ್ಕಾಗಿದೆ. ಕರ್ನಾಟಕದಲ್ಲಿ ಹಿಜಾಬ್ (Karnataka Hijab Ban) ಧರಿಸುವುದನ್ನು ನಿಷೇಧ ಮಾಡಲಾಗಿದೆ ಎಂದು ದೇವದಾಸ್ ಕಾಮತ್ ತಮ್ಮ ವಾದ ಮಂಡಿಸಿದರು. ಕರ್ನಾಟಕ ಹೈಕೋರ್ಟ್‌ನಲ್ಲಿ(Karnataka High Coourt) ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಎಂದು ವಾದಿಸಿದ್ದ ಕಾಮತ್, ಇದೀಗ ಹಿಜಾಬ್ ಕೇವಲ ಬಟ್ಟೆಯಾಗಿದ್ದು, ಇದು ಮೂಲಭೂತ ಹಕ್ಕಿನ ಅಡಿಯಲ್ಲಿ ಬರಲಿದೆ. ಹೀಗಾಗಿ ಇದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಕಾಮತ್ ವಾದಿಸಿದ್ದಾರೆ.

ನಿಮ್ಮ ರೀತಿಯ ವಾದ ಮಾಡುವುದಾದರೆ ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ, ವಿವಸ್ತ್ರಗೊಳ್ಳುವುದು ಕೂಡ ಹಕ್ಕಾಗಲಿದೆ ಎಂದು ಜಸ್ಟೀಸ್ (Justice Hemant Gupta)ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವದತ್ ಕಾಮತ್, ನಾನು ಕ್ಲೀಷೆ ವಾದಕ್ಕೆ ಬಂದಿಲ್ಲ. ತರಗತಿಗಳಲ್ಲಿ ಯಾರೂ ವಿವಸ್ತ್ರಗೊಳ್ಳುವುದಿಲ್ಲ ಎಂದಿದ್ದಾರೆ. ಹಾಗಾದರೆ ಹಿಜಾಬ್ ಧರಿಸಲು ನಿರ್ಬಂಧ ಹೇರಿಲ್ಲ ಕೇವಲ ತರಗತಿಗಳಲ್ಲಿ(Class) ಮಾತ್ರ ನಿಷೇಧಿಸಲಾಗಿದೆ ಎಂದು ಜಸ್ಟೀಸ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್ ವಿವಾದದ ಪ್ರಕರಣ ಮಾ.15ರಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಸರ್ಕಾರದ ಸಮವಸ್ತ್ರ ನೀತಿಯನ್ನು ಎತ್ತಿಹಿಡಿದಿತ್ತು. ಹಿಜಾಬ್ ಧರಿಸುವುದು ಇಸ್ಲಾಮಿನ ಅವಿಭಾಜ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಹೈಕೋರ್ಟ್ ತನ್ನ ತೀರ್ಪನ್ನು ನೀಡಿತ್ತು. ಇದನ್ನು ಮತ್ತೆ ಪ್ರಶ್ನಿಸಿ ಉಡುಪಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳು ಸೇರಿ ಒಟ್ಟು 24 ಮಂದಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಗಳನ್ನು ನ್ಯಾ. ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿತು.

Leave A Reply

Your email address will not be published.