ನೇಣು ಬಿಗಿದು ಯುವತಿ ಆತ್ಮಹತ್ಯೆ

Share the Article

ಉಡುಪಿ : ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರ್ಪಲೆ ಎಂಬಲ್ಲಿ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕಾರ್ಕಳ ನಿಟ್ಟೆ ಗ್ರಾಮದ ಪರ್ಪಲೆ ನಿವಾಸಿ ಜಾರ್ಜ್ ಡಿ’ಸೋಜಾ ಅವರ ಪುತ್ರಿ ರೆನಿಟಾ (32) ಆತ್ಮಹತ್ಯೆ ಮಾಡಿಕೊಂಡವರು.

ರೆನಿಟಾ ರವರಿಗೆ 11 ವರ್ಷದ ಹಿಂದೆ ಮುಲ್ಕಿಯ ಕಿರಣ್ ನೊಂದಿಗೆ ಮದುವೆಯಾಗಿದ್ದು, ಮದುವೆಯಾಗಿ 6 ವರ್ಷದಲ್ಲೆ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಆಗಿರುತ್ತದೆ. ರೆನಿಟಾ ರವರು ಕಳೆದ 2-3 ದಿನಗಳಿಂದ ತಲೆ ನೋವು ಆಗುತ್ತಿರುವುದಾಗಿ ತಿಳಿಸಿದ್ದರು. ನಿನ್ನೆ ಮನೆಯ ಹಿಂಬದಿಯ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply