ರೂಪೇಶ್ ಮತ್ತು ಸಾನಿಯಾ ಫ್ರೆಂಡ್ಶಿಪ್ ಮಧ್ಯೆ ಬಿರುಕು | ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಲ್ಲ ಎಂದ ರೂಪೇಶ್

ಬಿಗ್ ಬಾಸ್ ಓಟಿಟಿ ಯಲ್ಲಿ ಇದೀಗ 9 ಜನ ಮಾತ್ರ ಉಳಿದಿದ್ದಾರೆ. ಕಾಂಪಿಟೇಶನ್ ಕೂಡ ಹೆಚ್ಚಾಗುತ್ತಿದೆ. ಇದೀಗ ರೂಪೇಶ್ , ಸಾನಿಯಾ ಮತ್ತು ರಾಕೇಶ್ ನೇರವಾಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಇದರ ನಡುವೆ ಒಂದು ಗಲಾಟೆ ಕೂಡ ಉದ್ಭವವಾಗಿದೆ.

ರೂಪೇಶ್ ಮತ್ತು ಸಾನಿಯಾ ತುಂಬಾ ಆಪ್ತ ಸ್ನೇಹಿತರು ಆದರೆ ಇತ್ತೀಚಿನ ದಿನಗಳಲ್ಲಿ ಸಾನಿಯಾ ರೂಪೇಶ್ ಒಟ್ಟಿಗೆ ಸರಿಯಾಗಿ ಮಾತನಾಡುತ್ತಿಲ್ಲ. ಬದಲಾಗಿ ಜಶ್ವಂತ್ ಅವರೊಂದಿಗೆ ಹೆಚ್ಚಾಗಿ ಕಾಲವನ್ನು ಕಳೆಯುತ್ತಿದ್ದಾರೆ. ಇದೆ ವಿಷಯವಾಗಿ ರೂಪೇಶ್ ಸಾನಿಯಾ ನಡುವೆ ಸಣ್ಣನೆಯ ಮನಸ್ತಾಪ ಉಂಟಾಗಿದೆ.

‘ನೀನು ಇತ್ತೀಚಿನ ದಿನಗಳಲ್ಲಿ ನನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ. ಜಶ್ವಂತ್ ಜೊತೆ ತುಂಬಾನೇ ಕ್ಲೋಸ್ ಆಗ್ತಾ ಇದ್ಯಾ? ನಾವಿಬ್ಬರೂ ಇನ್ನು ಮುಂದೆ ಬೆಸ್ಟ್ ಫ್ರೆಂಡ್ಸ್ ಅಲ್ಲ. ಓನ್ಲಿ ಜಸ್ಟ್ ಫ್ರೆಂಡ್ಸ್ ಎಂದು ರೂಪೇಶ್ ಸಾನಿಯಾಗೆ ಖಡಕ್ಕಾಗಿ ಹೇಳಿದ್ದಾರೆ.

ಇದಕ್ಕೆ ಸಾನಿಯ “ಆ ರೀತಿ ಏನಿಲ್ಲ. ನಾನು ಮತ್ತೆ ಜಶ್ವಂತ್ ಜಸ್ಟ್ ಫ್ರೆಂಡ್ಸ್ ಅಷ್ಟೇ. ನಮ್ಮಿಬ್ಬರ ನಡುವೆ ಒಂದು ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಅದು ಬಿಟ್ಟರೆ ಬೇರೆ ಏನು ಇಲ್ಲ” ಎಂದು ಪ್ರತ್ಯುತ್ತರವನ್ನು ನೀಡಿದ್ದಾರೆ. ಒಟ್ಟಾರೆ ಫೈನಲ್ ತಲುಪಿರುವ ಕಂಟೆಸ್ಟೆಂಟ್ ನಲ್ಲಿ ಯಾರು ಟ್ರೋಫಿ ಎತ್ತಲಿದ್ದಾರೆ ಅನ್ನೋದೇ ದೊಡ್ಡ ಪ್ರಶ್ನೆ..

Leave A Reply

Your email address will not be published.