ಬೆಳ್ತಂಗಡಿ : ಕಂದಾಯ ಇಲಾಖೆಯ ದಾಖಲೆ ದುರಪಯೋಗ | V.A. ಅರೆಸ್ಟ್

Share the Article

ಬೆಳ್ತಂಗಡಿ: ಕಂದಾಯ ಇಲಾಖೆಯ ದಾಖಲೆ ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ಗ್ರಾಮ ಕರಣಿಕ ಜಯಚಂದ್ರ ಅವರನ್ನು ಬಂಧಿಸಲಾಗಿದೆ. ಈ ಘಟನೆ ಸೆ.7ರಂದು ನಡೆದಿದೆ.

ಬೆಳ್ತಂಗಡಿ ಹೋಬಳಿ ವ್ಯಾಪ್ತಿಗೆ ಒಳಪಟ್ಟ ತಣ್ಣೀರುಪಂತ ಪುತ್ತಿಲ, ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕ ಹುದ್ದೆಯ ಜಯಚಂದ್ರ ಅವರೇ ಬಂಧನಕ್ಕೊಳಗಾದ ವ್ಯಕ್ತಿ. ಹಾಗೂ ಇವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಂದಾಯ ಇಲಾಖೆಯ ದಾಖಲೆಯನ್ನು ದುರುಪಯೋಗ ಪಡಿಸಿ, ವಂಚಿಸಿದ ದೂರಿನ ಹಿನ್ನಲೆಯಲ್ಲಿ ಅವರ ಮೇಲೆ ಕೇಸು ದಾಖಲಾಗಿತ್ತು. ಹಾಗಾಗಿ, ಸೆ.7ರಂದು ಜಯಚಂದ್ರ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply