Tooth paste : ಹಲ್ಲನ್ನು ಮಾತ್ರ ಅಲ್ಲ, ಈ ವಸ್ತುಗಳನ್ನು ಕೂಡಾ ಫಳಫಳ ಹೊಳೆಯುವಂತೆ ಮಾಡುತ್ತೆ ಟೂತ್ ಪೇಸ್ಟ್
ಪ್ರತಿಯೊಬ್ಬರೂ ತಮ್ಮ ಹಲ್ಲುಗಳನ್ನು ಸ್ವಚ್ಛವಾಗಿರಿಸಿಕೊಳ್ಳಲು ಪ್ರತಿದಿನ
ಟೂತ್‌ಪೇಸ್ಟ್ ಬಳಸುವುದು ಸಾಮಾನ್ಯ ಸಂಗತಿಯಾಗಿದೆ. ಟೂತ್‌ಪೇಸ್ಟ್ ಅನ್ನು ಶುದ್ದೀಕರಣ ಗುಣಲಕ್ಷಣಗಳನ್ನು ಹೊಂದಿರುವ ಪದಾರ್ಥಗಳಿಂದ ತಯಾರಿಸಲಾಗುತ್ತದೆ.
ಟೂತ್‌ಪೇಸ್ಟ್ ಹಲ್ಲುಗಳನ್ನು ಸಂರಕ್ಷಿಸುವುದರ ಜತೆಗೆ ಚರ್ಮದ ಸಮಸ್ಯೆಗಳನ್ನು ಕೂಡ ನಿ ವಾರಿಸುತ್ತದೆ. ಅಷ್ಟೇ ಅಲ್ಲ ಇನ್ನಿತರ ದಿನಬಳಕೆಯ ವಸ್ತುಗಳ ಹೊಳಪನ್ನು ಕಾಪಾಡಲು ಕೂಡ ಬಳಕೆಯಾಗುತ್ತದೆ. ಆದರೆ ಟೂತ್‌ಪೇಸ್ಟ್ ನ
ಇತರೆ ಪ್ರಯೋಜನಗಳ ಬಗ್ಗೆ ತಿಳಿದರೆ ಬೆರಗಾದರೂ ಅಚ್ಚರಿಯಿಲ್ಲ.
ನಮ್ಮ ಫೋನಿನ ಕವರ್ ಮೇಲಿನ ಕಲೆಗಳನ್ನು ತೆಗೆಯುವುದು ಕಷ್ಟ. ಟೂತ್‌ಪೇಸ್ಟ್ ಫೋನ್‌ನ ಕವರ್ ಅನ್ನು ಸ್ವಚ್ಛಗೊಳಿಸಲು ಪರಿಣಾಮಕಾರಿಯಾಗಿದೆ. ಅದನ್ನು 2-3 ನಿಮಿಷಗಳ ಕಾಲ ಕವರ್‌ನಲ್ಲಿ ಇರಿಸಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಮಾಡುವುದರಿಂದ ಕವರ್‌ನ ಹಳದಿ ಕಲೆಗಳೂ ನಿವಾರಣೆಯಾಗುತ್ತದೆ.
ಮುಖದ ಸುಕ್ಕುಗಳಿಂದ ಬೇಸತ್ತವರು, ಟೂತ್‌ಪೇಸ್ಟ್ ಜತೆಗೆ ನಿಂಬೆ ಹಣ್ಣಿನ ರಸವನ್ನು ಬಳಸಿ ಫೇಸ್ ಪ್ಯಾಕ್ ಅನ್ನು ಮಾಡಿಕೊಳ್ಳಬಹುದು.
ಟೂತ್ ಪೇಸ್ಟ್ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಒಂದು ಚಮಚದಲ್ಲಿ ಸ್ವಲ್ಪ ಟೂತ್ ಪೇಸ್ಟ್ ತೆಗೆದುಕೊಂಡು ನಂತರ ಅದಕ್ಕೆ ಟೊಮೆಟೊ ಕ್ಯೂರಿಯನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ತರ ಮಾಡಿಕೊಳ್ಳಬೇಕು.ನಂತರ ಮುಖಕ್ಕೆ ಚೆನ್ನಾಗಿ ಹಚ್ಚಿ, ಅರ್ಧ ಗಂಟೆಯ ನಂತರ ತಣ್ಣೀರಿನಿಂದ ಚೆನ್ನಾಗಿ ತೊಳೆಯುವುದರಿಂದ ಚರ್ಮ ಬಿಳುಪಾಗುವುದರ ಜೊತೆಗೆ ಸನ್ ಬರ್ನ್ ಅನ್ನು ಕಡಿಮೆಗೊಳಿಸುತ್ತದೆ.
ಬಟ್ಟೆಗಳ ಮೇಲೆ ಲಿಪ್ಸ್ಟಿಕ್ ಕಲೆಗಳಾಗಿದ್ದರೆ,
ಟೂತ್‌ಪೇಸ್ಟ್ ಅನ್ನು ಹಚ್ಚಿ ಪೇಸ್ಟ್ ಅನ್ನು ಸ್ವಲ್ಪ ಸಮಯದವರೆಗೆ ಬಿಡಿ, ನಂತರ ಅದನ್ನು ಬ್ರಷ್‌ನಿಂದ ಉಜ್ಜಿ ಸ್ವಚ್ಛಗೊಳಿಸಿ, ಲಿಪ್ ಸ್ಟಿಕ್ ಕಲೆಯು ನಿವಾರಣೆಯಾಗುತ್ತದೆ.
ಮಹಿಳೆಯರು ಬೆಳ್ಳಿ ಉಂಗುರಗಳು ಮತ್ತು ಗೆಜ್ಜೆಗಳನ್ನು ಬಳಸುತ್ತಾರೆ. ಇದನ್ನು ದಿನಂಪ್ರತಿ ಬಳಕೆ ಮಾಡುವುದರಿಂದ ಬೆಳ್ಳಿ ಕಪ್ಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಟೂತ್‌ಪೇಸ್ಟ್‌ನಿಂದ ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಿದರೆ , ಅದರ ಹೊಳಪು ಮಾಸದೆ ಹಾಗೆ ಉಳಿಯುತ್ತದೆ.
ಒಂದು ಚಮಚದಲ್ಲಿ ಸ್ವಲ್ಪ ಪೇಸ್ಟ್ ತೆಗೆದುಕೊಂಡು ಅದನ್ನು ಹತ್ತಿಯ ಕಡ್ಡಿಯಲ್ಲಿ ಮೊಡವೆ ಇದ್ದಲ್ಲಿಗೆ ಮಾತ್ರ ಮೃದುವಾಗಿ ಲೇಪಿಸಬೇಕು. ರಾತ್ರಿ ಮಲಗುವ ವೇಳೆ ಹಚ್ಚಿ ಬೆಳಗ್ಗೆ ತೊಳೆಯಬಹುದು ಅಥವಾ ಹಗಲಿನ ವೇಳೆ ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರವೂ ತೊಳೆಯಬಹುದು.
ರಾತ್ರಿ ವೇಳೆ ಹಚ್ಚಿದರೆ ಬೆಳಗಾಗುವ ವೇಳೆ ಮುಖದಲ್ಲಿದ್ದ ಮೊಡವೆಗಳು ಮಾಯವಾಗಿರುತ್ತದೆ.
ಉಗುರಿಗೆ ಪದೇ ಪದೇ ನೈಲ್ಪಾಲಿಶ್ ಹಾಕುವುದರಿಂದ ಉಗುರು ಹೊಳಪನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ನೈಲ್ಪಾಲಿಶ್ ತೆಗೆದ ನಂತರ, ಟೂತ್‌ಪೇಸ್ಟ್‌ನೊಂದಿಗೆ ಉಗುರುಗಳನ್ನು ಐದು ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಹತ್ತಿಯಿಂದ ಒರೆಸಿ ಅದನ್ನು ತೆಗೆಯಬೇಕು. ವಾರದಲ್ಲಿ ಎರಡು ಅಥವಾ ಮೂರು ಬಾರಿ ಇದನ್ನು ಮಾಡುವುದರಿಂದ ಉಗುರಿನ ಹೊಳಪನ್ನು ಹೆಚ್ಚಿಸಬಹುದು.
ಮುಖದಲ್ಲಿ ಕೆಲವೊಮ್ಮೆ ಕಪ್ಪು ರಂಧ್ರಗಳಂತೆ ಕಲೆಗಳು ಗೋಚರಿಸಬಹುದು. ಆಗ ಈ ಟೂತ್ ಪೇಸ್ಟನ್ನು ಬಳಸಬಹುದು.
ಮೊದಲು ಸುಟ್ಟ ಗಾಯವನ್ನು ತಣ್ಣನೆಯ ನೀರಿನಲ್ಲಿ
ತೊಳೆದುಕೊಳ್ಳಿ. ತದನಂತರ ತಕ್ಷಣ ಆ ಪ್ರದೇಶದ ಮೇಲೆ ಟೂತ್‌ಪೇಸ್ಟ್ ಅನ್ನು ಹಚ್ಚಬೇಕು. ಟೂತ್‌ಪೇಸ್ಟ್ ಸುಟ್ಟ ಗಾಯದ ಉರಿ ಕಡಿಮೆ ಮಾಡುತ್ತದೆ ಮತ್ತು ತಂಪನ್ನು ನೀಡುತ್ತದೆ ಈ ಸಂದರ್ಭದಲ್ಲಿ ಬಿಳಿ ಟೂತ್‌ಪೇಸ್ಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಮನೆಯ ಅಲಂಕಾರವನ್ನು ಹೆಚ್ಚಿಸಲು ಕೆಲವು ಫೋಟೊ ಫ್ರೇಮ್ ಮತ್ತು ಇನ್ನಿತರ ವಸ್ತುಗಳಿಗಾಗಿ ಗೋಡೆಗಳಲ್ಲಿ ರಂಧ್ರ ಮಾಡುತ್ತಾರೆ. ಇದು ಗೋಡೆಯ ನೋಟವನ್ನು ಹಾಳು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ರಂಧ್ರಗಳನ್ನು ತುಂಬಲು ಟೂತ್‌ಪೇಸ್ಟ್ ಬಳಸಬಹುದು.
ಗಾಜಿನ ಮೇಜಿನ ಮೇಲೆ ಚಹಾದ ಕಪ್ ಇಟ್ಟಾಗ ಕಲೆಗಳು ಗಾಜಿನ ಮೇಲೆ ಉಳಿದು ಬಿಡುತ್ತದೆ. ಟೂತ್‌ಪೇಸ್ಟ್‌ನಿಂದ ಸ್ವಚ್ಛಗೊಳಿಸಿದ ನಂತರ ಮೇಜಿನ ಮೇಲಿರುವ ಟೀ ಕಲೆಗಳನ್ನು ತೆಗೆಯಬಹುದು.
ಟೂತ್ ಪೇಸ್ಟ್ ಅನ್ನು ಸೂಕ್ತಪ್ರಮಾಣ ಹಾಗೂ ಸರಿಯಾದ ಕ್ರಮದಲ್ಲಿ ಉಪಯೋಗಿಸಿದರೆ ಉತ್ತಮ ಪರಿಣಾಮಗಳನ್ನು ಪಡೆದು ಸೌಂದರ್ಯ ಮತ್ತು ಸಹಜಕಾಂತಿ ಪಡೆಯಬಹುದು. ಅಲ್ಲದೆ ಅನೇಕ ಪ್ರಯೋಜನಗಳಿವೆ.