Dream Job । ಸುಮ್ಮನೆ ಇತರರಿಗೆ ‘ ಕಂಪನಿ ‘ ಕೊಡುವ ‘ No Job ‘ ಕೆಲಸ ಮಾಡಿ ವರ್ಷಕ್ಕೆ ಕೋಟಿಗಟ್ಟಲೆ ಎಣಿಸುತ್ತಿರುವ ವ್ಯಕ್ತಿ !

ಕುಳಿತಲ್ಲೇ ಕಾಂಚಾಣ ಹರಿದಾಡುವ ಸುವರ್ಣಾವಕಾಶ ಸಿಕ್ಕಿದರೆ ನಾ ಮುಂದು, ತಾ ಮುಂದು ಎಂದು ಮುಗಿ ಬೀಳುವವರೆ ಹೆಚ್ಚು. ಇಂತಹ ಹೊಸ ಕನಸನ್ನು ನನಸು ಮಾಡುವಂತ ಕೆಲಸ ಸೃಷ್ಟಿ ಯಾಗಿದೆ. ಅಲ್ಲೊಬ್ಬ ವ್ಯಕ್ತಿ ಮಾಡುತ್ತಿರುವ ಈ ಜಾಬ್ ಪ್ರತಿಯೊಬ್ಬರ ‘ ಡ್ರೀಮ್ ಜಾಬ್ ‘ ಎಂದು ಹಲವಾರು ಜನರು ಹೇಳುತ್ತಿದ್ದಾರೆ. ಕಾರಣ, ಅವರು ಏನನ್ನೂ ಮಾಡದೆ ಹಣ ಪಡೆಯುತ್ತಾರೆ. ಅಲ್ಲೊಬ್ಬ ವ್ಯಕ್ತಿಯು ಏನೆಂದರೆ ಏನೂ ಮಾಡದೆ ಗಂಟೆಗೆ 38 ವರ್ಷ ಸುಮಾರು ರೂ 5,600 ಎಣಿಸುತ್ತಿದ್ದಾರೆ. ಅದ್ಯಾವುದಪ್ಪಾ ಅಂತಹಾ ಏನೂ ಕೆಲಸ ಮಾಡದೆ ಝಣ ಝಣ ದುಡ್ಡೆಣಿಸೋ ಕೆಲಸ ಅಂತ ತಿಳಿದುಕೊಳ್ಳೋ ಸಣ್ಣ ಕುತೂಹಲ ನಿಮಗಿದ್ದರೆ, ಅಂಥವರಿಗಾಗಿ ಈ ಪೋಸ್ಟ್.

ಜಾಬ್ ಸಿಂಪಲ್ಲಾಗಿದೆ. ದುಡ್ಡು ಮಾತ್ರ ಜಾಸ್ತಿಯೇ ಸಿಗ್ತಿದೆ. ಅಂತಹಾ ವಿಶೇಷ ಜಾಬ್ ನ ಜನಕ 38 ವರ್ಷ ವಯಸ್ಸಿನ ಈ ವ್ಯಕ್ತಿ. ಜಪಾನಿನ ರಾಜಧಾನಿ ಟೋಕಿಯೊದಲ್ಲಿ ನಿವಾಸಿಯು ಗ್ರಾಹಕರೊಂದಿಗೆ ಬರಲು ಮತ್ತು ಸರಳವಾಗಿ ಒಡನಾಡಿಯಾಗಿ ಅಸ್ತಿತ್ವದಲ್ಲಿರಲು ಗಂಟೆಗೆ 10,000 ಯೆನ್ (ಸುಮಾರು ರೂ 5,600) ವಿಧಿಸುತ್ತಿದ್ದಾರೆ.

“ಮೂಲತಃ, ನಾನು ನನ್ನನ್ನು ಬಾಡಿಗೆಗೆ ನೀಡುತ್ತೇನೆ. ನನ್ನ ಗ್ರಾಹಕರು ನಾನು ಎಲ್ಲಿಗೆ ಇರಬೇಕೆಂದು ಬಯಸುತ್ತೀರೋ ಮತ್ತು ನಿರ್ದಿಷ್ಟವಾಗಿ ಏನನ್ನೂ ಮಾಡದಿರುವುದು ನನ್ನ ಕೆಲಸ” ಎಂದು ಮೊರಿಮೊಟೊ ಹೇಳಿದ್ದಾರೆ. ಅಂದರೆ ಆತನ ಗ್ರಾಹಕರಿಗೆ ಸುಮ್ಮನೆ ಕಂಪನಿ ಕೊಡೋದು ಆತನ ಕೆಲಸ. ಅವರು ಹೋದಲ್ಲಿ ಈತನೂ ಹೋಗುತ್ತಾನೆ. ಅವರು ಕೂತಲ್ಲಿ ಈತನಿಗೂ ಒಂದು ಸೀಟಿದೆ. ಹೋದಲ್ಲಿ, ಬಂದಲ್ಲಿ ಅವರನ್ನು(ತನ್ನ ಗ್ರಾಹಕರನ್ನು) ನೆರಳಿನಂತೆ ಹಿಂಬಾಲಿಸಿ ಅವರಿಗೆ ಜಸ್ಟ್ ಅಸ್ಸಿಸ್ಟನ್ಸ್ ಮಾಡೋದು ಈತನ ಕೆಲಸವೇ ಅಲ್ಲದ ಕೆಲಸ. ಅಲ್ಲಿ ಆತನಿಗೆ ಮಾಡಲು ಏನೂ ಕೆಲಸ ಇರೋದಿಲ್ಲ. ತನ್ನ ಪಾಡಿಗೆ ಮೊಬೈಲ್ ಸವರುತ್ತಾ, ಮನಸ್ಸಿನಲ್ಲಿ ಯೋಚನೆಗಳನ್ನು ಜೋಡಿಸುತ್ತಾ, ಹಳೆಯದನ್ನು ಕೆದಕುತ್ತಾ, ಹೊಸದನ್ನು ಮನಸ್ಸಿನ ಊಹಿಸಿಕೊಳ್ಳುತ್ತಾ ಟೈಮ್ ಪಾಸ್ ಮಾಡೋದು ಆತನ ಜಾಬ್. ಒಮ್ಮೆ ಗ್ರಾಹಕ ಮತ್ತು ಆತನ ಮಧ್ಯೆ ಮೊದಲೇ ನಿಶ್ಚಿತವಾದ ಟೈಮ್ ಮುಗಿಯಿತು ಎಂದಲ್ಲಿ ಅವರ ಜತೆ ಟೈಮ್ ಸ್ಪೆಂಡ್ ಮಾಡಿದ್ದಕ್ಕಾಗಿ ಭರ್ಜರಿ ಚಾರ್ಜ್ ಪಡೆದುಕೊಂಡು ವಾಪಾಸ್ ಬರೋದು ಆತನ ಹೊಸ ವೃತ್ತಿ.

ಕಳೆದ ನಾಲ್ಕು ವರ್ಷಗಳಲ್ಲಿ ಅವರು ಸುಮಾರು 4,000 ಸೆಷನ್‌ಗಳನ್ನು ನಿರ್ವಹಿಸಿದ್ದಾರೆ. ಈ ‘ ಡೂ ನಥಿಂಗ್ ‘ ಜಾಬರ್ ಮೊರಿಮೊಟೊ ಈಗ Twitter ನಲ್ಲಿ ಸುಮಾರು ಕಾಲು ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅಲ್ಲಿಯೇ ಅವರು ತಮ್ಮ ಹೆಚ್ಚಿನ ಗ್ರಾಹಕರನ್ನು ಕಂಡುಕೊಳ್ಳುತ್ತಿದ್ದಾರೆ. ಆತನ ಗ್ರಾಹಕರಲ್ಲಿ ಸರಿಸುಮಾರು ಕಾಲು ಭಾಗದಷ್ಟು ಜನರು ಪುನರಾವರ್ತಿತ ಗ್ರಾಹಕರು. ಒಬ್ಬನಂತೂ ಈತನನ್ನು ಬರೋಬ್ಬರಿ 270 ಬಾರಿ ನೇಮಿಸಿಕೊಂಡಿದ್ದಾನಂತೆ.

ಏನನ್ನೂ ಮಾಡಲ್ಲ ಅಂದರೆ ಮೊರಿಮೊಟೊ ಏನನ್ನೂ ಮಾಡಲ್ಲ. ಒಂದು ಬಾರಿ ಫ್ರಿಜ್ ಅನ್ನು ಸರಿಸಲು ಮತ್ತು ಕಾಂಬೋಡಿಯಾಕ್ಕೆ ಹೋಗುವ ಆಫರ್ ಗಳನ್ನೂ ಆತ ತಿರಸ್ಕರಿಸಿದ್ದಾರೆ. ಅಲ್ಲದೆ ಲೈಂಗಿಕ ಸ್ವಭಾವದ ಯಾವುದೇ ವಿನಂತಿಗಳನ್ನು ಆತ ಸ್ವೀಕರಿಸುವುದಿಲ್ಲ.

ಕಳೆದ ವಾರ, ಮೊರಿಮೊಟೊ ಅವರು 27 ವರ್ಷದ ಡೇಟಾ ವಿಶ್ಲೇಷಕ ಅರುಣಾ ಚಿದಾ ಅವರು ನೇಮಿಸಿಕೊಂಡಿದ್ದರು. ಆಗ ಆಕೆ ಸೀರೆಯನ್ನು ಧರಿಸಿದ್ದರು. ಆಕೆಯ ಜತೆ ಚಹಾ ಮತ್ತು ಕೇಕ್‌ಗಳ ಜತೆ ವಿರಳ ಸಂಭಾಷಣೆ ನಡೆದಿತ್ತು. ಜಪಾನೀಸ್ ಆದ ಚಿದಾ ಅವರು ಭಾರತೀಯ ಉಡುಪನ್ನು ?(ಸೀರೆಯನ್ನು) ಸಾರ್ವಜನಿಕವಾಗಿ ಧರಿಸಲು ಬಯಸಿದ್ದರು. ಆದರೆ ಅದು ತನ್ನ ಸ್ನೇಹಿತರನ್ನು ಮುಜುಗರಕ್ಕೀಡುಮಾಡಬಹುದೆಂದು ಚಿಂತಿಸಿದರು. ಆದ್ದರಿಂದ ಅವಳು ಒಡನಾಟಕ್ಕಾಗಿ ಮೊರಿಮೊಟೊನನ್ನ ಕಂಪನಿಯಾಗಿ ಹೊಂದಲು ನೇಮಿಸಿಕೊಂಡಳು. ಯಾರಾದರೂ ತನ್ನ ಜತೆಗೆ ಇದ್ದರೆ, ತನಗೆ ಧೈರ್ಯ ಎಂಬ ಕಾರಣಕ್ಕಾಗಿ ಆತನೇ ನೇಮಕ ಅಲ್ಲಿ ನಡೆದಿತ್ತು.

“ನನ್ನ ಸ್ನೇಹಿತರೊಂದಿಗೆ, ನಾನು ಅವರನ್ನು ಮನರಂಜಿಸಬೇಕು ಎಂದು ನಾನು ಭಾವಿಸುತ್ತೇನೆ, ಆದರೆ ಬಾಡಿಗೆ ವ್ಯಕ್ತಿಯೊಂದಿಗೆ (ಮೊರಿಮೊಟೊ) ನಾನು ಚಾಟ್ ಮಾಡುವ ಅಗತ್ಯವಿಲ್ಲ ” ಎಂದು ಆಕೆ ಹೇಳಿದರು. ಹೆಚ್ಚಿನ ಆತನ ಗ್ರಾಹಕರು ಆಕೆಯಂತೆಯೇ ಏನೂ ಹೆಚ್ಚು ಸಂಭಾಷಣೆ ಆತನ ಜತೆ ನಡೆಸುವುದಿಲ್ಲ. ಅವರು ಮಾತಾಡಲಿ, ಬಿಡಲಿ ಆತ ಮಾತ್ರ ಎರಡಕ್ಕೂ ಸೈ.

ಮೊರಿಮೊಟೊ ತನ್ನ ನಿಜವಾದ ಕಲೆಯನ್ನು, ಈ ಹೊಸ ಉದ್ಯೋಗವನ್ನು ಕಂಡುಕೊಳ್ಳಲು ಆತನಿಗೆ ಒಂದು ದೊಡ್ಡ ಅರ್ಹತೆ ಇತ್ತು. ಆತ ಈ ಹಿಂದೆ ಪ್ರಕಾಶನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಆತ “ಏನೂ ಮಾಡದೆ” ಕೆಲಸ ಕಳ್ಳ ಅಂತ ದೂಷಿಸಲ್ಪಟ್ಟನು. ಏನೋ ಮಾಡದೆ ಇರುವ ಆತನ ಆ ನೇಚರ್ ನೇ ಈಗ ಆತನಿಗೆ ‘ ಏನೂ ಮಾಡದೆ ‘ ಇರುವ ಹೊಸ ಕೆಲಸ ಕೊಡಿಸಿದೆ. “ಏನೂ ಮಾಡದಿರುವ ನನ್ನ ಸಾಮರ್ಥ್ಯವನ್ನು ಗ್ರಾಹಕರಿಗೆ ಸೇವೆಯಾಗಿ ಒದಗಿಸಿದರೆ ಏನಾಗುತ್ತದೆ ಎಂದು ನಾನು ಯೋಚಿಸಲು ಪ್ರಾರಂಭಿಸಿದೆ. ಅದು ಕ್ಲಿಕ್ ಆಯಿತು ” ಎಂದು ಅವರು ಹೇಳಿದ್ದಾರೆ.

ಈ ಒಡನಾಟದ ವ್ಯವಹಾರವೇ ಈಗ ಮೊರಿಮೊಟೊ ಅವರ ಏಕೈಕ ಆದಾಯದ ಮೂಲವಾಗಿದೆ. ಅದರೊಂದಿಗೆ ಅವನು ತನ್ನ ಹೆಂಡತಿ ಮತ್ತು ಮಗುವನ್ನು ಸಾಕುತ್ತಿದ್ದಾನೆ. ಆತ ಈ ಉದ್ಯೋಗದಲ್ಲಿ ಹೆಚ್ಚು ಸಂಪಾದಿಸುತ್ತಿದ್ದು ಎಷ್ಟು ಸಂಪಾದಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಅವರು ದಿನಕ್ಕೆ ಸರಾಸರಿಯಾಗಿ ಒಂದು ಅಥವಾ ಎರಡು ಗ್ರಾಹಕರಿಗೆ ಸರ್ವಿಸ್ ನೀಡುತ್ತಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗದ ಮೊದಲು, ಇದು ದಿನಕ್ಕೆ ಮೂರು ಅಥವಾ ನಾಲ್ಕು ಆಗಿತ್ತಂತೆ. ಈತನಿಗೆ ಹೀಗೆ ಕೆಲಸ ಮಾಡದೇ, ಕೋಟ್ಯಂತರ ರೂಪಾಯಿ ಕಮಾಯಿ ಆಗುತ್ತಿದೆ.

ಟೋಕಿಯೊದಲ್ಲಿ ಅವರು ಮೊನ್ನೆ ಬುಧವಾರದಂದು ಏನನ್ನೂ ಮಾಡದೆ ಸುಮ್ಮನೆ ಕೂತಿದ್ದ. ಮೊರಿಮೊಟೊ ತನ್ನ ಕೆಲಸದ ವಿಲಕ್ಷಣ ಸ್ವರೂಪವನ್ನು ಟೀಕಿಸುವ ಜನರನ್ನು ಉತ್ಪಾದಕತೆಯನ್ನು ಗೌರವಿಸುತ್ತಾ, ನಿಷ್ಪ್ರಯೋಜಕತೆಯನ್ನು ಅಪಹಾಸ್ಯ ಮಾಡುವ ಸಮಾಜವನ್ನು ಆತ ತನ್ನದೇ ರೀತಿಯಲ್ಲಿ ಪ್ರಶ್ನಿಸಿದ್ದಾನೆ.
“ನನ್ನ ‘ಏನೂ ಮಾಡದಿರುವುದು’ ಕಾನ್ಸೆಪ್ಟ್ ಮೌಲ್ಯಯುತವಾಗಿದೆ ಎಂದು ಜನರು ಭಾವಿಸುತ್ತಾರೆ. ಏಕೆಂದರೆ ಅದು (ಇತರರಿಗೆ) ಉಪಯುಕ್ತವಾಗಿದೆ. ಆದರೆ ನಿಜವಾಗಿಯೂ ಏನನ್ನೂ ಮಾಡದಿರುವುದು ಒಳ್ಳೆಯದು. ಜನರು ಯಾವುದೇ ನಿರ್ದಿಷ್ಟ ರೀತಿಯಲ್ಲಿ ಉಪಯುಕ್ತವಾಗಬೇಕಾಗಿಲ್ಲ” ಎಂದು ಆತ ತಾರ್ಕಿಕವಾಗಿ ಹೇಳಿದ್ದಾರೆ.

Leave A Reply

Your email address will not be published.