ವರ್ಕೌಟ್ ಮಾಡಲು ಹೋಗಿ ಜಿಮ್ ಟೇಬಲ್ ನಲ್ಲಿ ತಲೆಕೆಳಗಾಗಿ ಸಿಲುಕಿದ ಮಹಿಳೆ ; ಸ್ಮಾರ್ಟ್ ವಾಚ್ ನಿಂದ ಉಳಿಯಿತು ಪ್ರಾಣ!
ಕೆಲವೊಂದು ಬಾರಿ ಟೆಕ್ನಾಲಜಿಗಳು ಇದ್ದಲ್ಲಿ ಅಪಾಯ ಹೆಚ್ಚು ಎಂದು ನಾವು ಹೇಳುತ್ತೇವೆ. ಆದರೆ ಕೆಲವೊಂದು ಬಾರಿ, ಇಂತಹ ಟೆಕ್ನಾಲಜಿಗಳೇ ನಮ್ಮ ಕೈ ಹಿಡಿಯುವುದರಲ್ಲಿ ಡೌಟ್ ಇಲ್ಲ. ಇದಕ್ಕೆ ಇಲ್ಲೊಂದು ಕಡೆ ನಡೆದಿರುವ ಘಟನೆಯೇ ಸಾಕ್ಷಿ. ಹೌದು. ಸ್ಮಾರ್ಟ್ ವಾಚ್ ನಿಂದಾಗಿ ಮಹಿಳೆಯ ಪ್ರಾಣವೇ ಉಳಿದಿದೆ.
ಜಿಮ್ ಮಾಡಲು ಹೋಗಿದ್ದ ಮಹಿಳೆಯೊಬ್ಬರು ಜಿಮ್ ನ ಟೇಬಲ್ ನಲ್ಲಿ ತಲೆಕೆಳಗಾಗಿ ಸಿಲುಕಿದ್ದು, ಬಳಿಕ ಸ್ಮಾರ್ಟ್ ವಾಚ್ ಸಹಾಯದಿಂದ ಜೀವ ಉಳಿದ ಘಟನೆ ವರದಿಯಾಗಿದೆ.
ಈ ಘಟನೆ ನಡೆದಿದ್ದು ಯುಎಸ್ ನ ಓಹಿಯೊದಲ್ಲಿ, ಬೆನ್ನು ನೋವು ನಿವಾರಣೆಗಾಗಿ ಜಿಮ್ ಗೆ ದಾಖಲಾಗಿದ್ದ ಮಹಿಳೆ ಬೆಳಗಿನಜಾವ ವ್ಯಾಯಾಮಕ್ಕೆ ಮುಂದಾಗಿದ್ದಾರೆ. ಈ ವೇಳೆ ಜಿಮ್ ನ ಟೇಬನ್ ನಲ್ಲಿ ತಲೆಕೆಳಗಾಗಿ ವ್ಯಾಯಾಮ ಮಾಡುವಾಗ ಅದರಲ್ಲಿ ಸಿಲುಕಿಕೊಂಡಿದ್ದಾರೆ. ದೇಹದ ತೂಕ ಕೊಂಚ ಜಾಸ್ತಿಯೇ ಇದ್ದುದರಿಂದ ಹೊರಕ್ಕೆ ಬರಲು ಒದ್ದಾಡಿದ್ದಾರೆ.
ಈ ವೇಳೆ ಸಮಯಪ್ರಜ್ಞೆಯಿಂದ ತಮ್ಮ ಸ್ಮಾರ್ಟ್ ವಾಚ್ ಬಳಸಿ 911 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಇದರಿಂದಾಗಿ ಅವರನ್ನು ರಕ್ಷಿಸಲಾಗಿದೆ. ವ್ಯಾಯಾಮ ಮಾಡುವುದನ್ನು ಸ್ವತಃ ಈ ಮಹಿಳೆ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಆ ದೃಶ್ಯ ಇದೀಗ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.