ನಿಂಬೆ ಹಣ್ಣಿನ ರಸವನ್ನು ಕೆಡದಂತೆ ಇಡೋ ಸೂಪರ್ ಟಿಪ್ಸ್ | ನೀವು ಒಮ್ಮೆ ಟ್ರೈ ಮಾಡ್ಲೆ ಬೇಕು

ನಿಂಬೆಹಣ್ಣು ಅಂತ ಹೇಳಿದ್ ಕೂಡ್ಲೆ ನಮಗೆ ನೆನಪಾಗೋದು ಜ್ಯೂಸ್ ಅಥವಾ ಚಿತ್ರಾನ್ನಕ್ಕೆ ಅದರ ರಸವನ್ನು ಹಿಂಡುವುದು. ಇದರ ಮಹಿಮೆಯನ್ನು ಎಷ್ಟು ಹೊಗಳಿದರೂ ಸಾಲದು. ಪಿತ್ತವಾದಾಗ, ತಲೆ ತಿರುಗುವಾಗ ಅಥವಾ ಇನ್ನೂ ಬಾಯಾರಿದಾಗ ಲಿಂಬೆ ಹಣ್ಣಿನ ಜ್ಯೂಸ್ ಮುಖ್ಯ ಪಾತ್ರವನ್ನು ವಹಿಸುತ್ತದೆ.

ನಿಂಬೆಹಣ್ಣು ಎಷ್ಟು ಹುಳಿಯಾಗಿರುತ್ತದೆಯೋ, ಅದರ ಬೀಜವೂ ಕೂಡ ಅಷ್ಟೇ ಕಹಿಯಾಗಿರುತ್ತದೆ. ಇದರಿಂದ ಅನುಕೂಲ ಇದೆ ಅನಾನುಕೂಲವೂ ಇದೆ. ಕೇವಲ ಕುಡಿಯಲು ತಿನ್ನಲು ಅಲ್ಲದೆ ದೃಷ್ಟಿ ತೆಗೆಯಲು ಮತ್ತು ಮಾಟ ಮಂತ್ರಗಳಿಗೂ ಈ ನಿಂಬೆಹಣ್ಣು ಉಪಕಾರವಾಗುತ್ತದೆ. ಆದರೆ ನಿಂಬೆ ಹಣ್ಣಿನಿಂದ ಅದರ ರಸವನ್ನು ಬೇರ್ಪಡಿಸಿದಾಗ ಹೆಚ್ಚು ಹೊತ್ತು ಇರದೆ ಹಾಳಾಗುತ್ತದೆ. ಹೀಗಾಗಿ ನಾವು ನಿಮಗೆ ಹೇಳ್ತೇವೆ ನೋಡಿ, ಇದು ಕೆಡದೆ ಇರುವಂತಹ ಸೂಪರ್ ಟಿಪ್ಸ್..


ನಿಂಬೆರಸವನ್ನು ಶೇಖರಿಸಿದ ನಂತರ ಅದನ್ನು ಫ್ರಿಡ್ಜ್​ನಲ್ಲಿ ಇಡಬೇಕು. ಹೊರಗೆ ಇಟ್ಟರೆ ಹಾಳಾಗುತ್ತದೆ. ಹಾಗಾಗಿ ಇದನ್ನು ಬಳಕೆ ಮಾಡಿದ ನಂತರ ಫ್ರಿಡ್ಜ್​ನಲ್ಲಿ ಇಡಲೇಬೇಕು. ಅದರ ಜೊತೆಗೆ ಇನ್ನಷ್ಟು ಸಲಹೆಗಳನ್ನು ಅನುಸರಿಸಬೇಕು.
ನೀವು ನಿಂಬೆರಸವನ್ನು ತೆಗೆದು ಇಡಲು ಸಾಧ್ಯವಿಲ್ಲ ಎನಿಸಿದರೆ ನಿಂಬೆಹಣ್ಣನ್ನು ರೌಂಡ್​ ಆಗಿ ಕತ್ತರಿಸಿ, ಅದಕ್ಕೆ ಉಪ್ಪು ಹಾಕಿ ಫ್ರಿಡ್ಜ್​ನಲ್ಲಿ ಇಟ್ಟರೆ, ಹೆಚ್ಚು ದಿನ ಬಾಳಿಕೆ ಬರುತ್ತದೆ.


ಈಗಾಗಲೇ ಅದರ ಲಿಂಬೆ ರಸವನ್ನ ತೆಗೆದಿಟ್ಟುಕೊಂಡಿದ್ದಲ್ಲಿ ಅದಕ್ಕೆ ಸ್ವಲ್ಪ ಉಪ್ಪನ್ನ ಬೆರೆಸಿದರೆ ಕಹಿ ಆಗುವುದಿಲ್ಲ ಮತ್ತು ಹಾಳು ಕೂಡ ಆಗುವುದಿಲ್ಲ.
ಗಾಜಿನ ಜಾರ್​ನಲ್ಲಿ ಸಂಗ್ರಹಿಸಿಡುವುದರಿಂದ ನಿಂಬೆರಸವು ಹಾಳು ಗೆಡುವುದರಿಂದ ತಪ್ಪಿಸಲಾಗುತ್ತದೆ
ಮತ್ತು ಮೊದಲು ನಿಂಬೆ ರಸವನ್ನು ಹಿಂಡಿ ಅದನ್ನು ಅದರ ಬೀಜದಿಂದ ಬೇರ್ಪಡಿಸಿ ಫಿಲ್ಟರ್ ಮಾಡಿ. ನಂತರ ಅದನ್ನು ಗಾಜಿನ ಜಾರ್​ನಲ್ಲಿ ಹಾಕಿ ಗಟ್ಟಿ ಮುಚ್ಚಳ ಹಾಕಿ ಇಟ್ಟರೆ ಸಾಕು.


ಇನ್ನೊಂದು ಮುಖ್ಯವಾದ ವಿಧಾನವೇನೆಂದರೆ, ನಿಂಬೆ ರಸವನ್ನು ಐಸ್ ಕ್ಯೂಬ್ ಟ್ರೈನಲ್ಲಿ ಹಾಕಿಡುವುದು. ಮುಖ್ಯವಾದ ವಿಚಾರವೇನೆಂದರೆ ಲಿಂಬೆ ಹಣ್ಣನ್ನು ಯಾವುದೇ ಕಾರಣಕ್ಕೆ ಮೂಸಂಬಿ, ಸೇಬು ಹಾಗೂ ಇನ್ನಿತರ ಹಣ್ಣುಗಳ ಪಕ್ಕದಲ್ಲಿ ಇಡಬಾರದು ಇದರಿಂದ ಹದಗೆಡುವುದು ಬೇಗ. ಅದನ್ನ ಫ್ರಿಡ್ಜ್ ನಲ್ಲಿ ಇಟ್ರೆ ಎಷ್ಟು ದಿನಗಳು ಕೂಡ ಬಾಳಿಕೆ ಬರುತ್ತದೆ. ಕೆಟ್ಟ ವಾಸನೆಯು ಕೂಡ ಬರುವುದಿಲ್ಲ.


ನೋಡಿದ್ರಲ್ಲ, ಒಂದೆರಡು ದಿನಗಳಲ್ಲಿ ಹಾಳಾಗುತ್ತಿದ್ದ ರಸವನ್ನು ಯಾವ ಯಾವ ರೀತಿಯೆಲ್ಲ ಪ್ರೊಟೆಕ್ಟ್ ಮಾಡಿ ಅದನ್ನ ಉಪಯೋಗಿಸಬಹುದು ಎಂದು. ನೀವು ಕೂಡ ಒಮ್ಮೆ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡ್ಲೇಬೇಕು.

Leave A Reply

Your email address will not be published.