ಈ ದಿನದಂದು ಶಿಕ್ಷಕರನ್ನು ಸ್ಮರಿಸೋಣ.

ಶಿಕ್ಷಕರ ದಿನಾಚರಣೆಯು ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದರು ಹಾಗೂ ಹೆಸರಾಂತ ಶಿಕ್ಷಣ
ತಜ್ಞರಾಗಿದ್ದರು. ಶಿಕ್ಷಕರು ನಮಗೆ ದೇವರು ಇದ್ದಂತೆ ನಮ್ಮ ಬದುಕಿನ ದೋಣಿಯನ್ನು ನಡೆಸುವವರು ಮತ್ತು ಜಗತ್ತನ್ನು ಉತ್ತಮ ಸ್ಥಳವಾಗಿಸುವವರು. ಶಿಕ್ಷಕರು ಕತ್ತಿಗಿಂತ ಲೇಖನಿಯ ಮಹತ್ವವನ್ನು ನಮಗೆ ಕಲಿಸುತ್ತಾರೆ .ಶಿಕ್ಷಕರ ಕುರಿತಾದ ಮಹತ್ವವನ್ನು ಹೇಳುವುದಾದರೆ ಶಿಕ್ಷಕರ ದಿನವೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯವನ್ನು ಬಲಪಡಿಸುವ ದಿನವಾಗಿದೆ ಮತ್ತು ಇದು ವಿದ್ಯಾರ್ಥಿಗಳ ಬಾಂಧವ್ಯವನ್ನು ಬೆಳೆಯಲು ಸಹಾಯಮಾಡುತ್ತದೆ.ಶಿಕ್ಷಕರು ತನ್ನ ಜ್ಞಾನ,ತಾಳ್ಮೆ ,ಪ್ರೀತಿ ನೀಡುವ ವಿದ್ಯಾರ್ಥಿಯ ಜೀವನದಲ್ಲಿ ಅತ್ಯಂತ ಪ್ರಮುಖವಾದಂತಹ ವ್ಯಕ್ತಿ ಎಂದು ಹೇಳಬಹುದು. ಶಿಕ್ಷಕರ ವೃತ್ತಿಯನ್ನು ಈ ಜಗತ್ತಿನಲ್ಲಿ ಅತ್ಯುತ್ತಮ ಮತ್ತು ಆದರ್ಶ ವೃತ್ತಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಶಿಕ್ಷಕರು ನಿಸ್ವಾರ್ಥವಾಗಿ ಒಬ್ಬರ ಜೀವನವನ್ನು ರೂಪಿಸುವಲ್ಲಿ ತಮ್ಮ ಸೇವೆಯನ್ನು ನೀಡುತ್ತಾರೆ. ಇವರ ಸಮರ್ಪಿತವಾದ ಕೆಲಸವನ್ನು ಬೇರೆ ಯಾವುದೇ ಕೆಲಸದೊಂದಿಗೆ ಹೋಲಿಸಲು ಸಾಧ್ಯವಿಲ್ಲ .ಹಾಗಾಗಿ ಶಿಕ್ಷಕರು ತಮ್ಮ ಎಲ್ಲಾ ವಿದ್ಯಾರ್ಥಿಗಳನ್ನು ನೋಡಿಕೊಳ್ಳುವರು. ಈ ದಿನವನ್ನು ಹೆಚ್ಚು ಸ್ಮರಣೀಯವಾಗಿಸಲು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಚಟುವಟಿಕೆಗಳು ಹಾಗೂ ಆಟಗಳನ್ನು ಆಯೋಜಿಸುತ್ತಾರೆ ಅವರಿಗೆ ನೃತ್ಯಗಳನ್ನು, ಹಾಡುಗಳನ್ನು ಹಾಗೂ ಕವಿತೆಗಳನ್ನು ಪಠಿಸುವಂತೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಇನ್ನೂ ಶಾಲೆ ಹಾಗೂ ಕಾಲೇಜಿನಿಂದ ಹೊರಗುಳಿದ
ವಿದ್ಯಾರ್ಥಿಗಳು ಈ ದಿನದಂದು ತಮ್ಮ ಶಿಕ್ಷಕರ ಭೇಟಿಯಾಗುವುದು ಅಲ್ಲದೆ ಅವರಿಗೆ ಶುಭಾಶಯಗಳು ತಿಳಿಸುತ್ತಾರೆ. ದೂರದಲ್ಲಿದ್ದರೆ ಅವರಿಗೆ ಸಂದೇಶವನ್ನು ಕಳುಹಿಸಬಹುದು ಹಾಗೂ ಕರೆಯನ್ನು ಮಾಡಬಹುದು. ಈ ಮೂಲಕ ತಿಳಿಯುವುದೇನೆಂದರೆ ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಗೌರವ ಮೂಡಿಸುವುದು.ಒಬ್ಬನ ಜೀವನದಲ್ಲಿ ಗುರುವಿನ ಪಾತ್ರ ಅತಿ ಮುಖ್ಯವಾದದ್ದು. ಶಿಕ್ಷಣದಂತೆ ಶಿಕ್ಷಕರೂ ಕೂಡಾ ಒಬ್ಬ ವಿದ್ಯಾರ್ಥಿಯನ್ನು ಉನ್ನತ ಮಟ್ಟಕ್ಕೆ ತಲುಪಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ. ಮನುಷ್ಯ ಎಷ್ಟೇ ದೊಡ್ಡವನಾಗಿದ್ದರೂ ಅವನಿಗೆ ಖಂಡಿತವಾಗಿಯೂ ಒಂದು ಹಂತದಲ್ಲಿ ಮಾರ್ಗದರ್ಶಕ ಆವರ ಶಿಕ್ಷಕರೇ ಆಗಿರುತ್ತಾರೆ .ಈ ದಿನದಂದು ಜಗತ್ತಿನ ಎಲ್ಲಾ ಶ್ರೇಷ್ಠ ಗುರುಗಳನ್ನು ಸ್ಮರಿಸೋಣ.

✍️ ಕಿಶನ್ .ಎಂ.
‘ಪವಿತ್ರ ನಿಲಯ’ಪೆರುವಾಜೆ

Leave A Reply

Your email address will not be published.